
ಕೊಪ್ಪಳ, 20 ನವೆಂಬರ್ (ಹಿ.ಸ.) :
ಆ್ಯಂಕರ್ : 2018-19ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ ಮಂಜೂರಾದ ಕಾಮಗಾರಿಯ ಬಗ್ಗೆ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ವರದಿಗೆ ಕೆ.ಆರ್.ಐ.ಡಿ.ಎಲ್.ನಿಂದ ಸ್ಪಷ್ಟೀಕರಣ ನೀಡಲಾಗಿದೆ.
2018-19ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ ಮಂಜೂರಾದ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಂಧಿನಗರ ಕೊಪ್ಪಳ ಶಾಲಾ ಕೊಠಡಿ ನಿರ್ಮಾಣ(1) (KPL 182421112) ರೂ. 10.60 ಲಕ್ಷಗಳ ವೆಚ್ಛದಲ್ಲಿ ನಿರ್ವಹಿಸಿದ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿರುವುದಾಗಿ ಹಾಗೂ ಮೂರನೇ ತಂಡದ ತಪಾಸಣೆಯಾಗದೇ ಬಿಲ್ಲನ್ನು ಪಡೆದಿರುವುದಾಗಿ ಸುದ್ದಿ ವಾಹಿನಿಯಲ್ಲಿ ನವೆಂಬರ್ 19ರಂದು ವರದಿ ಪ್ರಸಾರವಾಗಿದ್ದು, ಈ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯ ದಾಖಲಾತಿಗಳನ್ನು ಪರಿಶೀಲಿಸಿದಾಗ ನಿಯಮನುಸಾರ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಪಡೆದು ಕಾಮಗಾರಿಯನ್ನು ಅನುಷ್ಠಾನ ಮಾಡಲಾಗಿರುತ್ತದೆ ಹಾಗೂ ಸದರಿ ಕಾಮಗಾರಿಗೆ ಮೂರನೇ ತಂಡದ ಎಜೆನ್ಸಿಯಾದ IDIGISYS PRIVATE LIMITED ರವರಿಂದ ತಪಾಸಣೆ ಮಾಡಿಸಿ ಗುಣಮಟ್ಟ ಪರಿಶೀಲನಾ ವರದಿಯ ನಂತರ ಬಿಲ್ಲನ್ನು ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ರವರಿಗೆ ಈ ಕಾಮಗಾರಿಯ ವೆಚ್ಚ ಪಾವತಿಸಲು ಕೆ.ಆರ್.ಐ.ಡಿ.ಎಲ್. ಕೊಪ್ಪಳ ಕಛೇರಿಯಿಂದ ಪತ್ರ ಬರೆಯಲಾಗಿರುತ್ತದೆ.
ಈ ಕಾಮಗಾರಿಯನ್ನು ನಿಯಮನುಸಾರ ಅನುಷ್ಠಾನ ಮಾಡಲಾಗಿರುತ್ತದೆ ಹಾಗೂ ಗುಣಮಟ್ಟದಿಂದ ಕಾಮಗಾರಿಯನ್ನು ನಿರ್ಮಾಣ ಮಾಡಲಾಗಿರುತ್ತದೆ ಎಂದು ಈ ಮೂಲಕ ಸ್ಪಷ್ಟಿಕರಣ ನೀಡಲಾಗಿದೆ ಎಂದು ಕೊಪ್ಪಳ ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್