

ಬಳ್ಳಾರಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ 45 ಲಕ್ಷದಷ್ಟು ನೇಕಾರರಿದ್ದು ಹಂಪೆ ಕನ್ನಡ ವಿಶ್ವವಿದ್ಯಾಲಯಕ್ಕೆ ವಚನಕಾರ ದೇವರ ದಾಸಿಮಯ್ಯ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮಾಜಿ ಶಾಸಕ ಎನ್.ಡಿ. ಲಕ್ಷ್ಮೀನಾರಾಯಣ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೇಕಾರ ಸಮುದಾಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮೂರು ನಿಗಮಗಳಿದ್ದರು ನಿಖರವಾದ ನೇಕಾರ ಜನಾಂಗದ ಅಭಿವೃದ್ಧಿ ಆಗಿಲ್ಲದ ಕಾರಣ ನೇಕಾರ ಅಭಿವೃದ್ಧಿ ನಿಗಮಕ್ಕೆ ಸಮರ್ಪಕವಾದ ಅನುದಾನವನ್ನು ನೀಡಬೇಕು ಎಂದರು.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಬಿ.ಎಸ್. ಸೋಮಶೇಖರ್ ಅವರು, ಜನಗಣತಿಯ ವರದಿಯಲ್ಲಿ ನೇಕಾರರನ್ನು ಕೇವಲ ಒಂಬತ್ತು ಲಕ್ಷ ಎಂದು ನಮೂದಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ನೇಕಾರರ 29 ಪಂಗಡಗಳಿದ್ದು 45 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ರಾಜ್ಯದಲ್ಲಿ ನೇಕಾರರ ಸಮಾಜದ ಆರನೇ ಸ್ಥಾನದಲ್ಲಿದೆ ಎಂದರು.
ನೇಕಾರರ ಸಮುದಾಯವು ರಾಜಕೀಯವಾಗಿ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ನಿಖರವಾದ ಜನಗಣತಿಯನ್ನು ನಡೆಸಲಿಕ್ಕಗಿಯೇ ನೇಕಾರರ ಒಕ್ಕೂಟದಿಂದ ಪ್ರತ್ಯೇಕ ಆಪ್ ಮೂಲಕ ಗಣತಿ ನಡೆಸಿ, ಕರ್ನಾಟಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಘುತ್ತದೆ ಎಂದರು.
ನೇಕಾರ ಸಮಾಜದ ಮುಖಂಡರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್, ಮುಖಂಡರಾದ ದೇವಾನಂದ್, ಜಗದೀಶ್, ಪಿಚ್ಚಂಡಿ ದಯಾನಂದ್, ಶ್ರೀರಾಮರಾಜು ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್