ಬಳ್ಳಾರಿ : ಪ್ಯಾರಾ ಈಜು ಸ್ಪರ್ಧಿಗಳ ಸಾಧನೆ
ವರಿಷ್ಠಾಧಿಕಾರಿ
ಬಳ್ಳಾರಿ: ಪ್ಯಾರಾ ಈಜು ಸ್ಪರ್ಧಿಗಳ ಸಾಧನೆ


ಬಳ್ಳಾರಿ: ಪ್ಯಾರಾ ಈಜು ಸ್ಪರ್ಧಿಗಳ ಸಾಧನೆ


ಬಳ್ಳಾರಿ, 20 ನವೆಂಬರ್ (ಹಿ.ಸ.) :

ಆ್ಯಂಕರ್ : ತೆಲಂಗಾಣ ರಾಜ್ಯದ ಹೈದರಾಬಾದ್ ನ ಗಚ್ಚಿಬೌಲಿ ನಲ್ಲಿ ಕಳೆದ ನ.15 ರಿಂದ 18 ರವರೆಗೆ ನಡೆದ 2025-26ನೇ ಸಾಲಿನ 25ನೇ ನ್ಯಾಷನಲ್ ಪ್ಯಾರಾ ಈಜು ಸ್ಪರ್ಧೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿ ಬಳ್ಳಾರಿಯ ನಾಲ್ಕು ಪ್ಯಾರಾ ಈಜು ಸ್ಪರ್ಧಿಗಳಾದ ಗೋಪಿಚಂದ್, ಸಾಯಿ ನಿಖಿಲ್, ಬೇಬಿ ಸಾಯಿ ಮತ್ತು ಯೋಜಿತ್ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಗೋಪಿಚಂದ್ ಅವರು 200 ಮೀ ಐಎಮ್ ನಲ್ಲಿ 1 ಸ್ವರ್ಣ ಪದಕ, 100 ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ 1 ಸ್ವರ್ಣ ಪದಕ, 4*100 ಮೀ. ರೀಲೆ ನಲ್ಲಿ 1 ಸ್ವರ್ಣ ಪದಕ ಮತ್ತು 100 ಮೀ. ಫ್ರೀ ಸ್ಟೈಲ್ ನಲ್ಲಿ 1 ಬೆಳ್ಳಿ ಪದಕ ಸೇರಿ ಒಟ್ಟು 3 ಸ್ವರ್ಣ ಪದಕ ಮತ್ತು 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಸಾಯಿ ನಿಖಿಲ್ ಅವರು 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ 1 ಕಂಚು ಪದಕ, 100 ಮೀ. ಫ್ರೀ ಸ್ಟೈಲ್ ನಲ್ಲಿ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಬೇಬಿ ಸಾಯಿ ಅವರು 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ 1 ಸ್ವರ್ಣ ಪದಕ ಮತ್ತು ಯೋಜಿತ್ ಅವರು 100 ಮೀ. ಫ್ರೀ ಸ್ಟೈಲ್ ನಲ್ಲಿ 1 ಕಂಚು ಪದಕ ಪಡೆದುಕೊಂಡಿದ್ದಾರೆ ಎಂದು ತರಬೇತುದಾರರಾದ ರಜನಿ ಲಕ್ಕ ಮತ್ತು ಶರತ್ ಗಾಯಕ್ ವಾಡ್ ಅವರು ತಿಳಿಸಿದ್ದಾರೆ.

ಈ ಸಾಧನೆಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ ಅವರು ಅಭಿನಂದಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande