ಸಿದ್ದರಾಮ ಕಲ್ಮಠಗೆ ಬಿ.ಎಂ.ಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ
ಬಳ್ಳಾರಿ, 20 ನವೆಂಬರ್ (ಹಿ.ಸ.) : ಆ್ಯಂಕರ್ : ಲೇಖಕ ಸಿದ್ದರಾಮ ಕಲ್ಮಠ ಅವರ `ಹುತಾತ್ಮ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್'' ಕೃತಿಗೆ ಬಿ.ಎಂ.ಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಬುದ್ದ ಬಸವ ಗಾಂಧಿ ಟ್ರಸ್ಟ್ ಏರ್ಪಡಿಸಿದ್ದ
ಸಿದ್ದರಾಮ ಕಲ್ಮಠಗೆ ಬಿ.ಎಂ.ಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ


ಬಳ್ಳಾರಿ, 20 ನವೆಂಬರ್ (ಹಿ.ಸ.) :

ಆ್ಯಂಕರ್ : ಲೇಖಕ ಸಿದ್ದರಾಮ ಕಲ್ಮಠ ಅವರ `ಹುತಾತ್ಮ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್' ಕೃತಿಗೆ ಬಿ.ಎಂ.ಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಬುದ್ದ ಬಸವ ಗಾಂಧಿ ಟ್ರಸ್ಟ್ ಏರ್ಪಡಿಸಿದ್ದ ರಾಜ್ಯಮಟ್ಟದ 6ನೇ ಮಹಿಳಾ ಕನ್ನಡ ಸಾಹಿತ್ಯ ಸಂಸ್ಕøತಿ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಪ್ರಗತಿಪರ ಚಿಂತಕಿ ಬಿ. ಇಂದಿರಾ ಕೃಷ್ಣಪ್ಪ, ಲೇಖಕಿ ಪುಷ್ಪಾ ಬಸವರಾಜ್, ಟ್ರಸ್ಟ್ ಅಧ್ಯಕ್ಷರಾದ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಸಾಹಿತಿ ಸುರೇಶ್ ಕೋರೆಕೊಪ್ಪ, ಕರ್ನಾಟಕ ಲೇಖಕಿಯರ ಸಂಘದ ಖಜಾಂಚಿ ಮಂಜುಳಾ ಶಿವಾನಂದ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande