ತುಂಗಭದ್ರ ಜಲಾಶಯ : ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಬಳ್ಳಾರಿ, 02 ನವೆಂಬರ್ (ಹಿ.ಸ.) : ಆ್ಯಂಕರ್ : ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೃಷಿಗೆ ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ನಗರದಲ್ಲಿ ಖಾಲಿ ಕೊಡಗಳ ಪ್ರದರ್ಶನ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಬಳ್ಳಾರಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯ
Tungabhadra Reservoir: BJP protests demanding water for second crop

Tungabhadra Reservoir: BJP protests demanding water for second crop

ತುಂಗಭದ್ರ ಜಲಾಶಯ : ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ತುಂಗಭದ್ರ ಜಲಾಶಯ : ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ತುಂಗಭದ್ರ ಜಲಾಶಯ : ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ತುಂಗಭದ್ರ ಜಲಾಶಯ : ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ತುಂಗಭದ್ರ ಜಲಾಶಯ : ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ತುಂಗಭದ್ರ ಜಲಾಶಯ : ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬಳ್ಳಾರಿ, 02 ನವೆಂಬರ್ (ಹಿ.ಸ.) :

ಆ್ಯಂಕರ್ : ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೃಷಿಗೆ ಎರಡನೇ ಬೆಳೆಗೆ ನೀರು ನೀಡಲು ಆಗ್ರಹಿಸಿ ಬಿಜೆಪಿ ನಗರದಲ್ಲಿ ಖಾಲಿ ಕೊಡಗಳ ಪ್ರದರ್ಶನ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

ಬಳ್ಳಾರಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ ಐನಾಥರೆಡ್ಡಿ ಅವರು, ಅತಿವೃಷ್ಟಿಯ ಕಾರಣ ಜಿಲ್ಲೆಯಲ್ಲಿ ಮೊದಲನೆಯ ಬೆಳೆ ನಷ್ಟವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ಎರಡನೇ ಬೆಳೆಗೆ ನೀರು ನೀಡದೇ ಸರ್ಕಾರ ರೈತರ ಜೀವನಗಳ ಜೊತೆ ಚೆಲ್ಲಾಟವಾಗುತ್ತಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ತಿನ ಸದಸ್ಯ ವೈ.ಎಂ. ಸತೀಶ್ ಅವರು, ತುಂಗಭದ್ರ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಕ್ರಸ್ಟ್‍ಗೇಟ್‍ಗಳನ್ನು ಅಳವಡಿಸಲು ನೀರನ್ನು ನದಿಗೆ ಮತ್ತು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಬಿಡಬೇಕು. ಕಾರಣ ಸಂಗ್ರಹವಾಗಿರುವ ನೀರನ್ನು ನ್ಯಾಯೋಚಿತವಾಗಿ ಕೃಷಿಗೆ ಬಳಕೆ ಮಾಡಲು ಅನುಕೂಲ ಆಗುವಂತೆ ಸರ್ಕಾರ ರೈತರಪರವಾದ ನಿರ್ಧಾರನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು, ಸಚಿವ ಶಿವರಾಜ ತಂಗಡಗಿಗೆ ರೈತರ ಪರವಾದ ಕಾಳಜಿ ಇಲ್ಲ. ನೀರಾವರಿಯ ಜ್ಞಾನವಿಲ್ಲ. ಕ್ರಸ್ಟ್‍ಗೇಟ್‍ಗಳನ್ನು ಅಳವಡಿಸುವವರೆಗೂ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕೃಷಿಗೆ ಬಳಕೆ ಮಾಡಿಕೊಂಡು, ರೈತರನ್ನು ಸಂರಕ್ಷಿಸುವ ಚಿಂತನೆಯೇ ಇಲ್ಲ. ಸರ್ಕಾರ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರೈತರ ಪರವಾದ ಕಾಳಜಿಯನ್ನು ತೋರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಅವರು, ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಈಡಾಗಿರುವ ರೈತರಿಗೆ ನೆರವಾಗಲು ಸರ್ಕಾರ ಎರಡನೇ ಬೆಳೆಗೆ ನೀರು ನೀಡಬೇಕು. ಇಲ್ಲವಾದಲ್ಲಿ ರೈತರು ಮತ್ತು ರೈತಪರ ಸಂಘಟನೆಗಳ ಸಹಯೋಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದರು.

ಬಿಜೆಪಿ ನಗರ ಅಧ್ಯಕ್ಷ ಗುರ್ರಂ ವೆಂಕಟರಮಣ, ಸಫಾಯಿ ಕರ್ಮಚಾರಿ ಮಾಜಿ ಅಧ್ಯಕ್ಷರು ಎಚ್. ಹನುಮಂತಪ್ಪ,

ನಗರ ರೈತ ಮೋರ್ಚಾ ಅಧ್ಯಕ್ಷರಾದ ಸತ್ಯನಾರಾಯಣ, ಜಿಲ್ಲಾ ಉಪಾಧ್ಯಕ್ಷರಾದ ಶಂಕರಪ್ಪ ಹಾಗೂ ಡಾ. ಅರುಣಾ ಕಾಮಿನೇನಿ, ಮಾಜಿ ಜಿಲ್ಲಾಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿ.ಎಸ್. ಶಂಕರ್, ಶರಣಬಸವನಗೌಡ, ವಿಜಯಲಕ್ಷ್ಮಿ, ಸುಗುಣ, ಪುಷ್ಪಾವತಿ, ಶಿವರುದ್ರಗೌಡ, ಪಾರ್ಥಸಾರಥಿ, ಗುಡಿಗಂಟೆ ಹನುಮಂತ, ಮಲ್ಲನಗೌಡ, ದ್ಯಾವಣ್ಣ, ವೆಂಕಟೇಶ್ವರರೆಡ್ಡಿ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande