ಲಾಲ್‌ಬಾಗ್ ಹಾಳು ಮಾಡುವ ಉದ್ದೇಶ ನನ್ನದಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು, 02 ನವೆಂಬರ್ (ಹಿ.ಸ.) : ಆ್ಯಂಕರ್ : ಲಾಲ್‌ಬಾಗ್ ಹಾಳು ಮಾಡುವ ಉದ್ದೇಶ ನನ್ನದಲ್ಲ, ನನಗೂ ಲಾಲ್‌ಬಾಗ್ ಇತಿಹಾಸ ಚೆನ್ನಾಗಿ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಟನಲ್ ರೋಡ್ ಯೋಜನೆ ವಿರುದ್ಧ ಬಿಜೆಪಿ ಕೈಗೊಂಡಿರುವ ಸಹಿ ಸಂಗ್ರಹ
ಲಾಲ್‌ಬಾಗ್ ಹಾಳು ಮಾಡುವ ಉದ್ದೇಶ ನನ್ನದಲ್ಲ : ಡಿ.ಕೆ.ಶಿವಕುಮಾರ್


ಬೆಂಗಳೂರು, 02 ನವೆಂಬರ್ (ಹಿ.ಸ.) :

ಆ್ಯಂಕರ್ : ಲಾಲ್‌ಬಾಗ್ ಹಾಳು ಮಾಡುವ ಉದ್ದೇಶ ನನ್ನದಲ್ಲ, ನನಗೂ ಲಾಲ್‌ಬಾಗ್ ಇತಿಹಾಸ ಚೆನ್ನಾಗಿ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಟನಲ್ ರೋಡ್ ಯೋಜನೆ ವಿರುದ್ಧ ಬಿಜೆಪಿ ಕೈಗೊಂಡಿರುವ ಸಹಿ ಸಂಗ್ರಹ ಅಭಿಯಾನ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ್ಳೆಯದಕ್ಕಾಗಿ ಸಹಿ ಸಂಗ್ರಹ ಮಾಡಲಿ, ಜಾಗೃತಿ ಮೂಡಿಸಲಿ. ಅಶೋಕ್ ಅವರ ಅಧ್ಯಕ್ಷತೆಯಲ್ಲೇ ಒಂದು ಸಮಿತಿ ರಚಿಸಲು ನಾನು ಸಿದ್ಧನಿದ್ದೇನೆ. ಯಾರು ಸದಸ್ಯರಾಗಬೇಕು ಎಂದು ಅವರೇ ಹೇಳಲಿ. ಇದು ನನ್ನ ಆಸ್ತಿ ಅಲ್ಲ, ಯಾರ ಆಸ್ತಿಯೂ ಅಲ್ಲ, ಸಾರ್ವಜನಿಕರ ಹಿತಕ್ಕಾಗಿ ಮಾಡುತ್ತಿರುವ ಯೋಜನೆ ಎಂದು ಹೇಳಿದರು.

ಲಾಲ್‌ಬಾಗ್ ಪ್ರದೇಶದಲ್ಲಿ ಎಷ್ಟು ಜಾಗ ಉಪಯೋಗ ಆಗುತ್ತಿದೆ, ಎಷ್ಟು ಉಪಯೋಗ ಅಗುತ್ತಿಲ್ಲ ಎಂಬ ಎಲ್ಲ ಮಾಹಿತಿ ನನ್ನ ಬಳಿ ಇದೆ. ಆದರೆ ಬಿಜೆಪಿ ಅಭಿವೃದ್ಧಿ ಬಯಸುವುದಿಲ್ಲ, ಕೇವಲ ರಾಜಕಾರಣ ಮಾಡುತ್ತಿದೆ ಆರೋಪಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande