ಪ್ರತಿ ಟನ್ ಕಬ್ಬಿಗೆ ೩೫೦೦ ದರ ಘೋಷಣೆ ಆಗ್ರಹ
ವಿಜಯಪುರ, 02 ನವೆಂಬರ್ (ಹಿ.ಸ.) : ಆ್ಯಂಕರ್ : ಎಫ್.ಆರ್.ಫಿ ದರವನ್ನು ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರು ಒಪ್ಪುವುದಿಲ್ಲ, ಇಂದಿನ ಆಧುನಿಕ ಕೃಷಿ ಕರ್ಚು ತುಂಬಾ ಹೆಚ್ಚು ಆಗಿದ್ದು, ಒಂದು ಎಕರೆಗೆ ಅಂದಾಜು ೩೦ ಸಾವಿರ ನಷ್ಟ ಆಗುತ್ತಿದೆ. ಆದ್ದರಿಂದ ಕಬ್ಬಿನಿಂದ ಆಗುವ ಉಪ ಉತ್ಪನ್ನಗಳಲ್ಲಿ ರೈತರನ್ನು ಪರ
ಕಬ್ಬು


ವಿಜಯಪುರ, 02 ನವೆಂಬರ್ (ಹಿ.ಸ.) :

ಆ್ಯಂಕರ್ : ಎಫ್.ಆರ್.ಫಿ ದರವನ್ನು ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರು ಒಪ್ಪುವುದಿಲ್ಲ, ಇಂದಿನ ಆಧುನಿಕ ಕೃಷಿ ಕರ್ಚು ತುಂಬಾ ಹೆಚ್ಚು ಆಗಿದ್ದು, ಒಂದು ಎಕರೆಗೆ ಅಂದಾಜು ೩೦ ಸಾವಿರ ನಷ್ಟ ಆಗುತ್ತಿದೆ. ಆದ್ದರಿಂದ ಕಬ್ಬಿನಿಂದ ಆಗುವ ಉಪ ಉತ್ಪನ್ನಗಳಲ್ಲಿ ರೈತರನ್ನು ಪರಿಗಣನೆಗೆ ತೆಗೆದುಕೊಂಡು ಒಂದಿಷ್ಟು ಲಾಭ ಕೊಡಬೇಕು. ಇಲ್ಲ ಆಹೋರಾತ್ರಿ ಹೋರಾಟ ಮಾಡಲಾಗುವುದು ಎಂದು ರೈತ ಹೋರಾಟಗಾರ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.

ವಿಜಯಪುರ ನಗರದ ಖಾಸಗಿ ಹೋಟೆಲಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರು ಹಾಗೂ ಜಿಲ್ಲಾ ರೈತ ಸಂಘಗಳ ಒಕ್ಕೂಟ ಆಯೋಜಿಸಿರುವ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿಗಳು ಅಕ್ಟೊಬರ್ ೨೫ರ ಒಳಗೆ ಸಕ್ಕರೆ ಕಾರ್ಖಾನೆ ಮಾಲೀಕರು ಅಧಿಕೃತವಾಗಿ ಎಫ.ಆರ್.ಪಿ ಹೊರತು ಪಡೆಸಿ ಘೋಷಣೆ ಮಾಡಬೇಕು. ಕಬ್ಬು ಬೆಳೆಗಾರರ ಬೇಡಿಕೆ ೩೫೦೦ ಇದೆ ಎಂದು ಹೇಳಿದ್ದರು. ಆದರೆ ಮಾತಿಗೆ ತಪ್ಪಿದ ಜಿಲ್ಲಾಧಿಕಾರಿಗಳು ನವೆಂಬರ ೧ ಕಳೆದರು ಸಭೆ ಕರೆಯದಿರುವುದರಿಂದ ಮಂಗಳವಾರದಂದು ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದುಗಡೆ ಅನಿರ್ಧಿಷ್ಟ ಹಾಗೂ ಅಹೋರಾತ್ರಿ ಹೋರಾಟ ಮಾಡಲಾಗುವುದು ಎಂದರು.

ಈ ಹೋರಾಟವು ಜಾತ್ಯತೀತ, ಪಕ್ಷಾತೀತ ಇದ್ದು ಈ ನಾಡಿನ ಸಮಸ್ತ ಮಠಾಧಿಶರು, ಪ್ರಗತಿಪರ ಸಂಘಟನೆ, ಮಹಿಳಾ, ಕಾರ್ಮಿಕ, ವಿದ್ಯಾರ್ಥಿ, ಯುವ ಜನ ಸೇರಿದಂತೆ ಜಿಲ್ಲೆಯ ಎಲ್ಲಾ ಸಂಘಟನೆಯ ಮುಖಂಡರು ಹಾಗೂ ರೈತರಿಗೆ ಮುಕ್ತವಾಗಿ ಆಹ್ವಾನ ನೀಡಿ ಎಲ್ಲರೂ ಸೇರಿ ರೈತರೊಂದಿಗೆ ನಾವೆಲ್ಲರೂ ಗಟ್ಟಿ ಹೋರಾಟಕ್ಕೆ ಕರೆ ನೀಡುತ್ತಿದ್ದೆವೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ್ ಕುಬಕಡ್ಡಿ ಮಾತನಾಡಿ, ಜಿಲ್ಲೆಯಲ್ಲಿಯ ೧೦ ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ವರ್ಷ ರೈತರನ್ನ ಸುಲಿಗೆ ಮಾಡುವುದು ತಪ್ಪುತಿಲ್ಲ, ಅಕ್ಕಪಕ್ಕದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಒಂದು ಬೆಲೆಯಾದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಬೆಲೆ, ಯಾಕೆ ಈ ಇಬ್ಬಾಗ ನೀತಿ, ರೈತರಿಗೆ ಕಬ್ಬಿನ ದರದಲ್ಲಿ ಮೊಸ, ತೂಕದಲ್ಲಿ ಮೊಸ, ಇವುಗಳ ಜೊತೆಗೆ ಸರಿಯಾದ ಸಮಯಕ್ಕೆ ಹಣ ಬಾರದೇ ಮತ್ತಷ್ಟು ತೊಂದರೆ ಆಗುತ್ತಿದೆ ಕೂಡಲೇ ೩೫೦೦ ಬೆಲೆ ಘೋಷಣೆ ಮಾಡಬೇಕು ಎಂದರು.

ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ ಹಾಗೂ ಕೋಲಾರ ತಾಲೂಕಾ ಅಧ್ಯಕ್ಷರ ಸೋಮು ಬಿರಾದಾರ ಮಾತನಾಡಿ, ಒಂದು ಟನ್ ಕಬ್ಬಿನಿಂದ ಸಕ್ಕರೆ ಜೊತೆಗೆ ಮಿಥೆನಾಲ್, ಸ್ಪಿರಿಟ್, ಮೊಲ್ಯಾಸಿಸ್, ಬಗಾಸ್, ವೆಸ್ಟ್ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ಮಾಡಿ ಲಕ್ಷ ಲಕ್ಷ ಲಾಭ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಸರಕಾರ ರೈತರನ್ನ ಮಾತ್ರ ದೀವಾಳಿ ಮಾಡಲು ಹೊರಟಿದೆ ಯೋಗ್ಯ ಬೆಲೆ ಘೋಷಣೆ ಮಾಡಬೇಕು ಇಲ್ಲ ರೈತ ಹೋರಾಟಕ್ಕೆ ಸಿದ್ದರಾಗಬೇಕು ಎಂದರು. ಈ ವೇಳೆ ಮುಖಂಡರು, ರೈತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande