
ಹಾಸನ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) ಹಾಸನ ಇವರ ವತಿಯಿಂದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧ, ಸಿಖ್, ಹಾಗೂ ಪಾರ್ಸಿ ಜನಾಂಗದವರಿಗೆ 2025-26ನೇ ಸಾಲಿನ ಈ ಕೆಳಕಂಡ ಯೋಜನೆಗೆ ಸೌಲಭ್ಯ ನೀಡಲು ಆನ್‌ಲೈನ್ Website : www.kmdconline.karnataka.gov.in. ಮುಖೇನ ನ.03 ರಿಂದ ಡಿ.03 ರವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರಿವು ವಿದ್ಯಾಭ್ಯಾಸ ಸಾಲ ಯೋಜನೆ (ರಿನ್ಯೂವಲ್): ಈ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿ ಸಿಇಟಿ/ಡಿ.ಸಿಇಟಿ/ಪಿಜಿ-ಸಿಇಟಿ/ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೊರ್ಸ್ಗಳಾದ ವೈದ್ಯಕೀಯ (ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್) ದಂತ ವೈದ್ಯಕೀಯ (ಬಿಡಿಎಸ್.ಎಂಡಿಎಸ್) ಆಯುಷ್ (ಬಿ.ಆಯುಷ್,ಎಂ.ಆಯುಷ್) ಇಂಜಿನಿಯರಿAಗ್ & ಟೆಕ್ನಾಲಜಿ (ಬಿ.ಇ/ಬಿ.ಟೆಕ್, ಎಂಇ, ಎಂಟೆಕ್), ಬ್ಯಾಚುರಲ್ ಆಫ್ ಆರ್ಕಿಟೆಕ್ಚರ್ (ಬಿ.ಆರ್ಕ್, ಎಂ.ಆರ್ಕ್) ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿಎಸ್‌ಸಿ ಇನ್ ಆರ್ಟಿಕಲ್ಚರ್, ಅಗ್ರ‍್ರಿಕಲ್ಚರಲ್ ಇಂಜಿನಿಯರಿAಗ್, ಡೈರಿ ಟೆಕ್ನಾಲಜಿ, ಫಾರೆಸ್ಟಿç, ವೆಟರ್‌ನರಿ & ಅನಿಮಲ್ ಸೈನ್ಸ್ಸ್, ಫಿಶರೀಸ್, ಸಿರಿಕಲ್ಚರ್, ಹೋಮ್/ಕಮ್ಯುನಿಟಿ ಸೈನ್ಸ್ಸ್ ಫುಡ್ ನ್ಯೂಟ್ರೀಷನ್ ಅಂಡ್ ಡಯಟಿಕ್ಸ್, ಬಿ.ಫಾರ್ಮ, ಎಂ.ಫಾರ್ಮ, ಫಾರ್ಮ.ಡಿ, ಮತ್ತು ಡಿ.ಫಾರ್ಮಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ರಿನ್ಯೂವಲ್ ಸಾಲ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.
ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು, ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ಕ್ರಿಶ್ಚಿಯನ್ ಹೊರತುಪಡಿಸಿ) ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಹ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ (ನಿ) ಮೌಲಾನಾ ಆಜಾದ್ ಭವನ, 1ನೇ ಮಹಡಿ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಶ್ರೀ ವಿದ್ಯಾ ಗಣಪತಿ ಅಡ್ಡರಸ್ತೆ, ಮಲ್ನಾಡ್ ಇಂಜಿನಿಯರಿAಗ್ ಕಾಲೇಜ್ ಹತ್ತಿರ, ಹಾಸನ-573202 ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ: 08172-246333 ಸಂಪರ್ಕಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa