
ವಿಜಯಪುರ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಸರ್ಕಾರಿ ಹಾಗೂ ಖಾಸಗಿ ಒಪ್ಪಂದದ ವೈದ್ಯಕೀಯ ಕಾಲೇಜನ್ನೂ ವಿರೋಧಿಸಿ ಹೋರಾಟಗಾರ್ತಿ ಭಾರತಿ ನಿಡುಗುಂಡಿ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ರಂಗೋಲಿ ಚಳುವಳಿ ನಡೆಸಿದರು.
ಜಿಲ್ಲಾಸ್ಪತ್ರೆಯನ್ನು ಉಳಿಸೋಣ ಸರ್ಕಾರಿ ವೈದ್ಯಕೀಯ ಕಾಲೇಜು ಒತ್ತಾಯಿಸೋಣ. ಬಡ ಮಕ್ಕಳು ವೈದ್ಯಕೀಯ ಶಿಕ್ಷಣದ ಹಕ್ಕನ್ನು ರಕ್ಷಿಸೋಣ ಎನ್ನುವ ದೇಹವಾಕ್ಯದೊಂದಿಗೆ ಬಸವನ ಬಾಗೇವಾಡಿಯ ಜನವೇದಿಕೆ ಮತ್ತು ಕರ್ನಾಟಕ ಜನಾರೋಗ್ಯ ಚಳುವಳಿಯ ಸಂಘಟನೆ ವತಿಯಿಂದ ವಿಶಿಷ್ಟವಾದ ರಂಗೋಲಿ ಚಳುವಳಿ ಮಾಡಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೃಹತ ಆಕರದ ರಂಗೋಲಿಯನ್ನು ಬಿಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯಲ್ಲಿ ವಿವಿಧ ಸಂಘಟನಾಕಾರರು, ಬುದ್ಧಿಜೀವಿಗಳು, ಸಾಹಿತಿಗಳು, ರೈತಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಸುಮಾರು 62 ದಿನ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಶಾಸಕರು, ಸಚಿವರುಗಳು ಹೋರಾಟಗಾರರಿಗೆ ಕ್ಯಾರೆ ಅನ್ನುತ್ತಿಲ್ಲ. ಹಾಗಾಗಿ ಬಸವನ ಬಾಗೇವಾಡಿಯ ಬಸವೇಶ್ವರ ವೃತ್ತದಲ್ಲಿ ಜನವೇದಿಕೆ ಮತ್ತು ಕರ್ನಾಟಕ ಜನಾರೋಗ್ಯ ಚಳುವಳಿಯ ಸಂಘಟನೆ ವತಿಯಿಂದ ರಂಗೋಲಿ ಚಳುವಳಿಯ ಮುಖಾಂತರ ರಂಗೋಲಿಯನ್ನು ಬಿಡಿಸಿ ಮತ್ತು ಕಾಲ್ನಡಿಗೆ ಜಾತ ಮಾಡಿ ತಹಶೀಲ್ದಾರ್ ಕಚೇರಿ ಮುಂಭಾಗ ಬೃಹತಾಕಾರದ ರಂಗೋಲಿ ಬಿಡಿಸಿ, ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande