
ವಿಜಯಪುರ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ತಾಲೂಕು ಮಟ್ಟದ ವಿಶೇಷ ಚೇತನರ ಕ್ರೀಡಾಕೂಟವನ್ನು ಐದು ತಾಲೂಕುಗಳಲ್ಲಿ ಜಿಲ್ಲಾ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟ ಆಯೋಜಿಸಲಾಗಿದೆ.
ತಾಲೂಕು ಮಟ್ಟದ ವಿಶೇಷ ಚೇತನರ ಕ್ರೀಡಾಕೂಟವನ್ನು ನವೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಎಂ.ವೈ.ಚಿಂಚಲಿ-ಮೊಬೈಲ ಸಂಖ್ಯೆ: 9449939580, ರವಿ ರಾಠೋಡ-ಮೊಬೈಲ ಸಂಖ್ಯೆ: 903555337, ಇಂಡಿ ತಾಲೂಕು ಕ್ರೀಡಾಂಗಣದಲ್ಲಿ ಎಚ್.ಕೆ.ಮಳಗೊಂಡ-ಮೊಬೈಲ ಸಂಖ್ಯೆ: 9632315492, ಪರಶುರಾಮ ಭೋಸಲೆ-ಮೊಬೈಲ ಸಂಖ್ಯೆ: 9972441464, ಸಿಂದಗಿ ತಾಲೂಕು ಕ್ರೀಡಾಂಗಣದಲ್ಲಿ ರಮೇಶ ಬಿರಾದಾರ-ಮೊಬೈಲ ಸಂಖ್ಯೆ: 8105849347, ಮುತ್ತುರಾಜ ಸಾತಿಹಾಳ -ಮೊಬೈಲ ಸಂಖ್ಯೆ: 9980019635, ಬಸವನ ಬಾಗೇವಾಡಿ ತಾಲೂಕಿನ ಬಸವೇಶ್ವರ ಕಾಲೇಜು ಮೈದಾನದಲ್ಲಿ ಎಸ್.ಎಸ್.ಅವಟಿ -ಮೊಬೈಲ ಸಂಖ್ಯೆ: 9663297654, ಶಿವಗಂಗವ್ವ ಬಿರಾದಾರ -ಮೊಬೈಲ ಸಂಖ್ಯೆ: 8722135660 ಹಾಗೂ ಮುದ್ದೇಬಿಹಾಳದ ವ್ಹಿ.ಬಿ.ಸಿ ಹೈಸ್ಕೂಲ್ ಮೈದಾನದಲ್ಲಿ ಕ್ರೀಡಾಕೂಟದಲ್ಲಿ ಆಯೋಜಿಸಲಾಗಿದ್ದು, ಎಸ್.ಬಿ.ಆಲೂರ -ಮೊಬೈಲ ಸಂಖ್ಯೆ: 8971806852 ಹಾಗೂ ಎಸ್.ಕೆ.ಘಾಟೆ-ಮೊಬೈಲ ಸಂಖ್ಯೆ: 9740682979 ಸಂಪರ್ಕಿಸಬಹುದಾಗಿದೆ.
ಈ ಕ್ರೀಡಾಕೂಟಗಳಲ್ಲಿ ಒಬ್ಬ ಕ್ರೀಡಾಪಟು 02 ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ಕ್ರೀಡಾಪಟುಗಳನ್ನು 18 ವರ್ಷ ಒಳಗಿನ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳನ್ನು ವಿಂಗಡಿಸಲಾಗುವುದು.
ನ.25ರ ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ನೋಂದಣಿಗೆ ಅವಕಾಶವಿರುತ್ತದೆ. ಡಿಸೆಂಬರ್ 1ರಂದು ಜಿಲ್ಲಾಮಟ್ಟದ ವಿಶೇಷ ಚೇತನರ ಕ್ರೀಡಾಕೂಟವನ್ನು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ-ಮೊಬೈಲ್ ಸಂಖ್ಯೆ: 7019008443 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande