
ಬೆಂಗಳೂರು, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಮಲ್ಲೇಶ್ವರಂನ ಜನಪ್ರಿಯ ಮಂತ್ರಿಮಾಲಗೆ ಬೀಗ ಹಾಕಲಾಗಿದೆ. ಬಾಕಿ ಉಳಿದಿದ್ದ ಸುಮಾರು ರೂ. 30.81 ಕೋಟಿಗಳ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ, ಇಂದು ಬೆಳಿಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾಲ್ ಸೀಜ್ ಮಾಡಿದರು.
ಮಾಲ್ ಕಾರ್ಯಾಚರಣೆ ಸ್ಥಗಿತಗೊಂಡ ಕಾರಣ ಬೆಳಗ್ಗೆಯಿಂದಲೇ ನೂರಾರು ನೌಕರರು ರಸ್ತೆಯ ಮೇಲೆ ನಿಂತು ಕಾಯುವಂತಾಯಿತು.
ಇದೀಗ ಮಂತ್ರಿ ಮಾಲ್ ಜಿಬಿಎಗೆ ಪಾವತಿಸಬೇಕಿರುವ ತೆರಿಗೆ ಮೊತ್ತ 30.81 ಕೋಟಿ ರೂಪಾಯಿಯಾಗಿದೆ. ಹಲವು ಬಾರಿ ನೋಟಿಸ್ ನೀಡಿದರೂ ತೆರಿಗೆ ಪಾವತಿಯಾಗದೇ ಇರುವುದರಿಂದ ಕಾನೂನಿನ ಪ್ರಕಾರ ಕ್ರಮ ಕೈಗೊಂಡಿರುವುದಾಗಿ ಬಿಎಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa