
ನೋಯ್ಡಾ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ನೋಯ್ಡಾದಲ್ಲಿ ನಕಲಿ ರಾ ಅಧಿಕಾರಿಯೊಬ್ಬನನ್ನು ಬಂಧಿಸಿದೆ. ಆರೋಪಿ ಕೆಲವೆಡೆ ರಾ ಅಧಿಕಾರಿಯಾಗಿ, ಮತ್ತಿತರ ಸ್ಥಳಗಳಲ್ಲಿ ಸೇನಾ ಮೇಜರ್ ಆಗಿ ವಂಚಿಸುತ್ತಿದ್ದ. ನಕಲಿ ಹುದ್ದೆಯನ್ನು ಬಳಸಿ ಬಿಹಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನ್ಯಾಯಾಧೀಶೆಯನ್ನು ವಿವಾಹವಾಗಿದ್ದಾನೆ.
STF ದಾಳಿಯಲ್ಲಿ ಆರೋಪಿಯಿಂದ ನೂರಾರು ನಕಲಿ ದಾಖಲೆಗಳು ನಕಲಿ ಐಡಿ ಕಾರ್ಡ್‌ಗಳು, ಪೊಲೀಸ್ ಪರಿಶೀಲನಾ ಪತ್ರಗಳು, ಪ್ಯಾನ್, ಆಧಾರ್, ಮತದಾರರ ಚೀಟಿಗಳು, 20ಕ್ಕೂ ಹೆಚ್ಚು ಚೆಕ್ ಪುಸ್ತಕಗಳು, ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಸೇರಿದಂತೆ ಹಲವು ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಕಂಪನಿ ತೆರೆದು, ಷೇರು ಮಾರುಕಟ್ಟೆ ಮೂಲಕ ಜನರಿಂದ ಹಣವಂಚನೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಮನೆ ಮಾಲೀಕರಿಗೆ ದೆಹಲಿ ಪೊಲೀಸ್ ಹೆಡಿಂಗ್‌ನ ನಕಲಿ ಪರಿಶೀಲನಾ ಪತ್ರ ನೀಡಿ ಬಾಡಿಗೆಗೆ ವಾಸವಾಗಿದ್ದಾನೆ ಎನ್ನುವುದು ಕೂಡ ಬಹಿರಂಗವಾಗಿದೆ.
ಆರೋಪಿ ಸುಮಿತ್ ಕುಮಾರ್ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ, STF ಮುಂದಿನ ತನಿಖೆ ನಡೆಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa