ಆರೋಗ್ಯ ಮತ್ತು ಶಿಕ್ಷಣ ಸಾಮಾಜಿಕ ವಲಯಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲು ಜಿಲ್ಲಾಧಿಕಾರಿ ಸಲಹೆ
ಆರೋಗ್ಯ ಮತ್ತು ಶಿಕ್ಷಣ ಸಾಮಾಜಿಕ ವಲಯಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲು ಜಿಲ್ಲಾಧಿಕಾರಿ ಸಲಹೆ
ಚಿತ್ರ ; ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಟ್ರಸ್ಟ್ ನಿರ್ವಹಣಾ ಸಮಿತಿ ಸಭೆ ನಡೆಯಿತು. ಜಲ ಸಂರಕ್ಷಣೆಯಲ್ಲಿ ಕೋಲಾರ ಜಿಲ್ಲೆಗೆ ರಾ


ಕೋಲಾರ, ೧೯ ನವಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಟ್ರಸ್ಟ್ ನಿರ್ವಹಣಾ ಸಮಿತಿಯ ಮಹತ್ವದ ಸಭೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಾಮಾಜಿಕ ವಲಯಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಜಿಲ್ಲೆಯಲ್ಲಿ ಗಣಿಗಾರಿಕೆ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು ಮತ್ತು ಸುಮಾರು ೧.೯೩ ಕೋಟಿಗೂ ಅಧಿಕ ಮೊತ್ತದ ಬಾಕಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಯಿತು.

ಪ್ರಮುಖ ಕಾಮಗಾರಿಗಳ ಬಾಕಿ ಅನುದಾನ ಬಿಡುಗಡೆಈ ಹಿಂದೆಯೇ ಅನುಮೋದನೆ ಗೊಂಡು, ಕಾಮಗಾರಿ ಪೂರ್ಣಗೊಳಿಸಿರುವ ಯೋಜನೆಗಳ ಬಾಕಿ ಉಳಿದಿದ್ದ ಅನುದಾನ ಬಿಡುಗಡೆಗೆ ಸಮಿತಿ ಹಸಿರು ನಿಶಾನೆ ತೋರಿದೆ.

ರಸ್ತೆ ಕಾಮಗಾರಿ:ಮಾಕಾರಹಳ್ಳಿ-ಕ್ಷೇತ್ರೇನಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ, ಈಗಾಗಲೇ ೨೨.೫೦ ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದೀಗ, ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಉಳಿದ ೭.೫೦ ಲಕ್ಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.

ನಿರ್ಮಿತಿ ಕೇಂದ್ರದ ಕಾಮಗಾರಿಗಳು : ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರದ ವತಿಯಿಂದ ಅನುಷ್ಠಾನಗೊಂಡಿರುವ ಒಟ್ಟು ೧೬೫ ಲಕ್ಷ ಮೌಲ್ಯದ ಕಾಮಗಾರಿಗಳ ಶೇ ೨೫ ರಷ್ಟು ಬಾಕಿ ಅನುದಾನ ಬಿಡುಗಡೆಗೆ ಸಮಿತಿ ಸಮ್ಮತಿಸಿದೆ. ನೇತಾಜಿ ಕ್ರೀಡಾಂಗಣ ದುರಸ್ಥಿ ಕಾಮಗಾರಿಗೆ ಅಂದಾಜು ೧೦೦.೦೦ ಲಕ್ಷ ವೆಚ್ಚವಾಗಲಿದ್ದು ೨೫.೦೦ ಲಕ್ಷ ಅನುಮೋದನೆ ಗೊಂಡಿದೆ.

ಕೋಲಾರದಲ್ಲಿ ಸಾರ್ವಜನಿಕ ಸಂಪರ್ಕ ಕೇಂದ್ರ ನಿರ್ಮಾಣಕ್ಕಾಗಿ ೨೫.೦೦ ಲಕ್ಷ ವೆಚ್ಚವಾಗಳಿದ್ದು ೬.೨೫ ಲಕ್ಷ ಅನುದಾನ ಅನುಮೋದನೆ ಯಾಗಿದೆ.ಶ್ರೀನಿವಾಸಪುರದಲ್ಲಿ ಸಾರ್ವಜನಿಕ ಸಂಪರ್ಕ ಕೇಂದ್ರ ನಿರ್ಮಾಣ ಕಾಮಗಾರಿಗೆ ೨೫.೦೦ ವೆಚ್ಚವಾಗಳಿದ್ದು ೬.೨೫ ಲಕ್ಷ ಅನುದಾನ ಬಿಡುಗಡೆ ಗೆ ಅನುಮೋದನೆ ಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಪ್ರತಿಷ್ಠಾನದ ಆನ್ಲೈನ್ ತರಗತಿ ಮೂಲಸೌಕರ್ಯ ವೆಚ್ಚಕ್ಕಾಗಿ ೧೫.೦೦ ಲಕ್ಷ ವೆಚ್ಚದಲ್ಲಿ ೩.೭೫ ಲಕ್ಷ ಅನುಮೋದನೆ ಗೊಂಡಿತು ಒಟ್ಟು ೧೬೫.೦೦ ಲಕ್ಷ ಮೊತ್ತದ ಕಾಮಗಾರಿ ಗಳಲ್ಲಿ ೪೧.೨೫ ಲಕ್ಷ ಮೊತ್ತಕ್ಕೆ ಅನುಮೋದನೆ ಗೊಂಡಿತು.

೫ನೇ ಕ್ರಿಯಾ ಯೋಜನೆಗೆ ಹೊಸ ಮಾರ್ಗಸೂಚಿ ಸಭೆಯಲ್ಲಿ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ೫ನೇ ಕ್ರಿಯಾ ಯೋಜನೆಯನ್ನು ರೂಪಿಸುವ ಕುರಿತು ಜಿಲ್ಲಾಧಿಕಾರಿಗಳು ಮಹತ್ವದ ಸೂಚನೆಗಳನ್ನು ನೀಡಿದರು. ಈ ಯೋಜನೆಯಡಿ ಅನುದಾನ ಬಳಕೆಯ ಅನುಪಾತವನ್ನು ಕಡ್ಡಾಯವಾಗಿ ಅನುಸರಿಸಲು ಸೂಚನೆ ನೀಡಿದರು.

ಶೇ.೭೫ ರಷ್ಟು ಅನುದಾನ (ಅಧಿಕ ಆದ್ಯತೆ):ಈ ಪಾಲನ್ನು ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಯಸ್ಕರ ಹಾಗೂ ಅಂಗವಿಕಲರ ಕಲ್ಯಾಣ, ಕೌಶಲ್ಯಾಭಿವೃದ್ಧಿ ಮತ್ತು ನೈರ್ಮಲ್ಯ ಕ್ಷೇತ್ರಗಳಿಗೆ ವಿನಿಯೋಗಿಸಲು ಪ್ರಸ್ತಾವನೆಗಳನ್ನು ಸಂಗ್ರಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಶೇ.೨೫ ರಷ್ಟು ಅನುದಾನ (ಪೂರಕ ಆದ್ಯತೆ): ಉಳಿದ ಪಾಲನ್ನು ಮೂಲಭೂತ ಸೌಕರ್ಯ, ನೀರಾವರಿ ಮತ್ತು ಜಲಸಂಪನ್ಮೂಲ ಅಭಿವೃದ್ಧಿ ಉದ್ದೇಶಗಳಿಗಾಗಿ ಪ್ರಸ್ತಾವನೆಗಳನ್ನು ಸಂಗ್ರಹಿಸಲು ತಿಳಿಸಲಾಯಿತು.ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ನಿಧಿಯನ್ನು ಸಮರ್ಪಕವಾಗಿ ಮತ್ತು ಕಾಲಮಿತಿಯೊಳಗೆ ಬಳಸಬೇಕು ಎಂದು ತಿಳಿಸಿದರು.

ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣದಂತಹ ಸಾಮಾಜಿಕ ವಲಯಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಇಲಾಖೆಗಳ ಮುಖ್ಯಸ್ಥರು, ಯೋಜನಾ ನಿರ್ದೇಶಕರು ಮತ್ತು ನಿರ್ವಹಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಚಿತ್ರ ; ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಟ್ರಸ್ಟ್ ನಿರ್ವಹಣಾ ಸಮಿತಿ ಸಭೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande