ಮಾಲೂರಿನಲ್ಲಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ
ಮಾಲೂರಿನಲ್ಲಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ
ಚಿತ್ರ ; ಮಾಲೂರು ನಗರದ ಕೋಚಿಮುಲ್ ಶಿಬಿರ ಕಛೇರಿಯಲ್ಲಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು.


ಕೋಲಾರ, ೧೯ ನವಂಬರ್ (ಹಿ.ಸ.) :

ಆ್ಯಂಕರ್ : ಯಾವುದೇ ರಾಜಕೀಯ ಹಿನ್ನಲೆ ಇಲ್ಲದ ಒಬ್ಬ ರೈತ ಕುಟುಂಬದಿಂದ ಬಂದ ನನಗೆ ಇಂದು ನನ್ನ ಸಾರ್ವಜನಿಕ ಜೀವನದಲ್ಲಿ ಮಂಡಲ್ ಪಂಚಾಯಿತಿ ಇಂದ ಶಾಸಕ ಸ್ಥಾನದವರೆಗೂ ಎಲ್ಲಾ ಸ್ಥಾನಮಾನಗಳು ದೊರತಿರುವುದು ಮಾಲೂರು ತಾಲ್ಲೂಕಿನ ಜನತೆಯ ಆರ್ಶೀವಾದದಿಂದ ಹೊರತು. ಹೊಸಕೋಟೆ ಅಥವಾ ಬೆಂಗಳೂರಿನವರಿಂದ ಅಲ್ಲ. ಮುಂದೆ ಯಾವುದೇ ಉನ್ನತ ಸ್ಥಾನಮಾನ ಸಿಕ್ಕಿದರು ಅದರ ಸಂಪೂರ್ಣ ಕೀರ್ತಿ ನನ್ನ ತಾಲ್ಲೂಕಿನ ಜನತೆಗೆ ಸಲ್ಲುತ್ತದೆ ಮಾಲೂರು ನನ್ನ ಜನ್ಮಭೂಮಿ ಮಾಲೂರಿನ ಅಭಿವೃದ್ಧಿಗೆ ಹಾಗೂ ಕ್ಷೇತ್ರದ ಜನತೆಯ ಶ್ರೇಯಸ್ಸಿಗೆ ಸದಾ ಶ್ರಮಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಮಾಲೂರು ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿತ ಆಡಳಿತ ಮಂಡಳಿಗೆ ಕೋಲಾರ ಜಿಲ್ಲಾ ಹಾಲು ಒಕ್ಕೂಟದಿಂದ ಪ್ರತಿನಿಧಿಯಾಗಿ ಆಯ್ಕೆಯಾದ ಹಿನ್ನಲೆ ಸಹಕಾರ ಸಂಘಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸನ್ಮಾನವನ್ನು ಸ್ವೀಕರಿ ಮಾತನಾಡಿದರು.

ಸಹಕಾರ ಸಂಘಗಳು ಸಾಮಾನ್ಯ ಜನರ ತುರ್ತು ಅಗತ್ಯಗಳನ್ನು ಪರಿಹರಿಸುವುದರ ಜೊತೆಗೆ ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಮುದಾಯ ಅಭಿವೃದ್ಧಿಗೆ ಸಹಕಾರಿಯಾಗಿವೆ. ಇನ್ನೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿಂದ ಕೋಲಾರ ಹಾಲು ಒಕ್ಕೂಟ ವಿಭಜನೆಗೊಂಡ ನಂತರ ಹಾಲು ಉತ್ಪಾದನೆ ಪ್ರತಿ ದಿನ ಸುಮಾರು ೭ ರಿಂದ ೮ ಲಕ್ಷ ಲೀಟರ್ ಇದ್ದು ಇದನ್ನು ಮುಂದಿನ ದಿನಗಳಲ್ಲಿ ೧೦ ಲಕ್ಷ ಲೀಟರ್ ಉತ್ಪಾದನೆ ಹೆಚ್ಚಾಗಬೇಕು ಎನ್ನುವ ಗುರಿಯನ್ನು ಹೊಂದಿರುವುದರಿಂದ ಜಿಲ್ಲೆಯ ಎಲ್ಲಾ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತೆರೆಯಲು ತಿರ್ಮಾನಿಸಲಾಗಿದೆ.

ಮೊದಲಿಗೆ ಮಾಲೂರು ತಾಲ್ಲೂಕಿನಲ್ಲಿ ಈ ಕೆಲಸ ಮಾಡಲು ಸಿದ್ದತೆ ಮಾಡಲಾಗಿದ್ದು ತಾಲ್ಲೂಕಿನಲ್ಲಿ ೧೮೦ ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಸಕ್ರಿಯವಾಗಿದ್ದು, ಪ್ರತಿ ಗ್ರಾಮಗಳಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತೆರೆಯಲು ಕ್ರಮವಹಿಸಲಾಗಿದೆ. ನಾನು ನಮ್ಮ ಆಡಳಿತ ಅವಧಿಯಲ್ಲಿ ಮುಖ್ಯವಾಗಿ ಸುಮಾರು ೩೫೦ ಕೋಟಿರೂಗಳ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದ್ದು ಅವುಗಳ ಜೊತೆಗೆ ಹಾಲು ಉತ್ಪಾಧಕರ ಅಭಿವೃದ್ಧಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಯಾವುದೇ ರಾಜಕೀಯ ಹಿನ್ನಲೆ ಇಲ್ಲದ ಒಬ್ಬ ರೈತ ಕುಟುಂಬದಿಂದ ಬಂದ ನನಗೆ ಇಂದು ನನ್ನ ಸಾರ್ವಜನಿಕ ಜೀವನದಲ್ಲಿ ಮಂಡಲ್ ಪಂಚಾಯಿತಿ ಇಂದ ಶಾಸಕ ಸ್ಥಾನದವರೆಗೂ ಎಲ್ಲಾ ಸ್ಥಾನಮಾನಗಳು ದೊರತಿದ್ದು ಮುಂದೆ ಯಾವುದೇ ಉನ್ನತ ಸ್ಥಾನಮಾನ ಸಿಕ್ಕರು ಅದರ ಸಂಪೂರ್ಣ ಕೀರ್ತಿ ನನ್ನ ತಾಲ್ಲೂಕಿನ ಜನತೆಗೆ ಸಲ್ಲುತ್ತದೆ ಮಾಲೂರು ನನ್ನ ಜಮ್ಮಭೂಮಿ ಮಾಲೂರಿನ ಅಭಿವೃದ್ಧಿಗೆ ಹಾಗೂ ಕ್ಷೇತ್ರದ ಜನತೆಯ ಶ್ರೇಯಸ್ಸಿಗೆ ಸದಾ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಗೋವರ್ಧನ್ ರೆಡ್ಡಿ, ಕೆ ನಾರಾಯಣಗೌಡ, ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಕಾಂತಮ್ಮ ಸೋಮಣ್ಣ, ಶ್ರೀನಿವಾಸ್ ಎಂ ಎನ್, ಡಿಎನ್ ರಮೇಶ್, ಹನುಮಂತಪ್ಪ, ಮುನೇಗೌಡ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್, ಸಹಕಾರಿ ನಿರ್ದೇಶಕರಾದ ಕಲ್ವಮಂಜಲಿ ಬೈರೇಗೌಡ, ಡಾ.ಚೇತನ್ ಶಿಬಿರ ಕಛೇರಿ ಉಪ ವ್ಯವಸ್ಥಾಪಕ ಡಾ.ಲೋಹಿತ್, ಸಹಕಾರ ಅಭಿವೃದ್ಧಿ ಅಧಿಕಾರಿ ವೀಣಾ, ವಿಸ್ತರಣಾಧಿಕಾರಿ ಹುಲ್ಲೂರಪ್ಪ, ಸೇರಿದಂತೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಇದ್ದರು.

ಚಿತ್ರ ; ಮಾಲೂರು ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande