ಪ್ರತ್ಯೇಕ ರಾಜ್ಯ ಕೇಳಲು ಇಂತಹ ಪರಿಸ್ಥಿತಿ ಕಾರಣವಾಗುತ್ತವೆ : ಬೆಟ್ಟದೂರು
ಕೊಪ್ಪಳ, 18 ನವೆಂಬರ್ (ಹಿ.ಸ.) : ಆ್ಯಂಕರ್ : ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದದ ಕಾರಣ, ಪರಿಸರ ವಿರೋಧಿ ಹಾಗೂ ಜನರ ಹೋರಾಟವನ್ನು ಗಮನಿಸದೆ ಇರುವದು ನೋವು ತಂದಿದೆ ಎಂದು ಕಾರ್ಖಾನೆ ವಿರೋಧಿ ಹೋರಾಟದ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯ ಪಟ್ಟಿದ್ದಾರೆ. ಅವರು ನಗರಸಭೆ ಮ
ಕೊಪ್ಪಳ : ಪ್ರತ್ಯೇಕ ರಾಜ್ಯ ಕೇಳಲು ಇಂತಹ ಪರಿಸ್ಥಿತಿ ಕಾರಣವಾಗುತ್ತವೆ : ಬೆಟ್ಟದೂರು


ಕೊಪ್ಪಳ, 18 ನವೆಂಬರ್ (ಹಿ.ಸ.) :

ಆ್ಯಂಕರ್ : ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದದ ಕಾರಣ, ಪರಿಸರ ವಿರೋಧಿ ಹಾಗೂ ಜನರ ಹೋರಾಟವನ್ನು ಗಮನಿಸದೆ ಇರುವದು ನೋವು ತಂದಿದೆ ಎಂದು ಕಾರ್ಖಾನೆ ವಿರೋಧಿ ಹೋರಾಟದ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯ ಪಟ್ಟಿದ್ದಾರೆ.

ಅವರು ನಗರಸಭೆ ಮುಂದೆ ನಡೆದಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಇತರೆ ಕಾರ್ಖಾನೆಗಳ ವಿಸ್ತೀರ್ಣ, ಸ್ಥಾಪನೆ ವಿರೋಧಿಸಿ ನಡೆದಿರುವ ಹೋರಾಟದ 19ನೇ ದಿನ ಅವರು ಮಾತನಾಡಿದರು.

ಬಾಧಿತ ಪ್ರದೇಶಕ್ಕೆ ಭೇಟಿ ನೀಡದ, ಪ್ರತಿಭಟನೆ ಗಮನಿಸದ, ಜನರ ಕೂಗು ಕೇಳದ ಸರಕಾರಗಳ ಇಂತಹ ಧೋರಣೆಗಳೇ ಪ್ರತ್ಯೇಕ ಕೂಗಿಗೆ ಪುಷ್ಟಿ ನೀಡುತ್ತವೆ ಎಂದು ಗುಡುಗಿದರು.

ಸದರಿ ಹೋರಾಟದಲ್ಲಿ ಸಂಚಾಲಕರಾದ ಕೆ. ಬಿ. ಗೋನಾಳ, ಡಿ. ಹೆಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಸಾಹಿತಿ ಡಿ.ಎಂ. ಬಡಿಗೇರ, ಮೂಕಪ್ಪ ಮೇಸ್ತಿ, ಬಸಾಪುರ, ಮಹಿಳಾ ಕಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಪುಷ್ಪಲತಾ ಏಳುಬಾವಿ, ಮಾಲಾ ಬಡಿಗೇರ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಎಂ. ಎಸ್. ಘಂಟಿ, ಕಾಶಪ್ಪ ಛಲವಾದಿ, ಭೀಮಸೇನ ಕಲಿಕೇರಿ, ಮಖಬೂಲ್ ರಾಯಚೂರು, ಮಹಾದೇವಪ್ಪ ಎಸ್. ಮಾವಿನಮಡು, ಮುದುಕಪ್ಪ ಹೊಸಮನಿ ಸೇರಿ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande