ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲಿ : ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್
ರಾಯಚೂರು, 18 ನವೆಂಬರ್ (ಹಿ.ಸ.) : ಆ್ಯಂಕರ್ : ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು, ಕೊಪ್ಪಳ, ವಿಜಯನಗರ, ಕಲಬುರಗಿ, ಬೀದರ ಮತ್ತು ಬಳ್ಳಾರಿ ಜಿಲ್ಲೆಗಳ ತಾಲೂಕವಾರು ಆರು ವಿಷಯಗಳ ಸಂಪನ್ಮೂಲ ಶಿಕ್ಷಕರಿಗಾಗಿ ಹಾಗೂ ಧಾರವಾಡ ವಿಭಾಗದ ಆರು ಜಿಲ್ಲೆಗಳ ವಿಷಯಗಳ ಸಂಪನ್ಮೂಲ ಶಿಕ್ಷಕರಿಗಾಗಿ ಒಂದು
SSLC results should improve in Karnataka's districts: General Secretary Rashmi Mahesh


SSLC results should improve in Karnataka's districts: General Secretary Rashmi Mahesh


SSLC results should improve in Karnataka's districts: General Secretary Rashmi Mahesh


ರಾಯಚೂರು, 18 ನವೆಂಬರ್ (ಹಿ.ಸ.) :

ಆ್ಯಂಕರ್ : ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು, ಕೊಪ್ಪಳ, ವಿಜಯನಗರ, ಕಲಬುರಗಿ, ಬೀದರ ಮತ್ತು ಬಳ್ಳಾರಿ ಜಿಲ್ಲೆಗಳ ತಾಲೂಕವಾರು ಆರು ವಿಷಯಗಳ ಸಂಪನ್ಮೂಲ ಶಿಕ್ಷಕರಿಗಾಗಿ ಹಾಗೂ ಧಾರವಾಡ ವಿಭಾಗದ ಆರು ಜಿಲ್ಲೆಗಳ ವಿಷಯಗಳ ಸಂಪನ್ಮೂಲ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಗಾರವು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪೂರ್ಣಿಮಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆಯಿತು.

ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವ್ಹಿ. ರಶ್ಮಿ ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಬಾರಿ ಕಲ್ಯಾಣ ಕರ್ನಾಟಕ ಭಾಗದ ಎಸ್. ಎಸ್. ಎಲ್. ಸಿ. ಪರೀಕ್ಷೆ ಫಲಿತಾಂಶ ಸುಧಾರಣೆ ಮಾಡಲು ಎಲ್ಲ ರೀತಿಯ ಅಗತ್ಯ ಕ್ರಮವಹಿಸಬೇಕು. ಈ ಕಾರ್ಯಗಾರದ ಮುಖ್ಯ ಗುರಿ ಮತ್ತು ಉದ್ದೇಶ ಇದೆ ಆಗಿದೆ ಎಂದರು.

ಫಲಿತಾ0ಶ ಸುಧಾರಣೆಯ ವಿಷಯವನ್ನೇ ಈಗ ಶಿಕ್ಷಕರು ಪ್ರಥಮ ಆದ್ಯತೆ ಎಂದು ಭಾವಿಸಿ ಶಾಲಾ ಹಂತದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರಿಚಯಿಸಬೇಕು. ಪಠ್ಯ ಆಧಾರಿತ ಮೌಲ್ಯಮಾಪನದ ಬಗ್ಗೆ ಅರಿಯವೇಕು ಎಂದು ನಾನಾ ವಿಷಯ ತಿಳಿಸಿದರು. ಜನವರಿ ಮೊದಲ ವಾರ, ಕೊನೆಯ ವಾರ ಮತ್ತು ಫೆಬ್ರುವರಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಕೈಗೊಳ್ಳಲು ಇಲಾಖೆಯು ತೀರ್ಮಾನಿಸಿ ವೇಳಾಪಟ್ಟಿ ನೀಡಿದೆ. ಇದನ್ನು ವಿದ್ಯಾರ್ಥಿಗಳಿಗೆ, ಪಾಲಕ ಪೋಷಕರಿಗೆ ತಿಳಿಸಬೇಕು. ಈ ಭಾಗದ ಫಲಿತಾಂಶ ಸುಧಾರಣೆ ಮಾಡಬೇಕು. ಜಿಲ್ಲಾ ಹಂತದ ಮತ್ತು ತಾಲೂಕು ಹಂತದ ಅಧಿಕಾರಿಗಳು ನವೆಂಬರ್, ಡಿಸೆಂಬರ್, ಜನೆವರಿ, ಫೆಬ್ರುವರಿ ತಿಂಗಳಲ್ಲಿ ನಿರಂತರ ಫಾಲೋ ಅಪ್ ಮಾಡಿ ನೀಡಿರುವ ಚೆಕ್ ಲಿಸ್ಟ್ ಗಳ ಪ್ರಕಾರ ಫಲಿತಾಂಶಗಳನ್ನು ವಿಶ್ಲೇಷಿಸುವ ಕಾರ್ಯಪಡೆ ರಚನೆ ಮಾಡಿ ನಮಗೆ ವರದಿ ನೀಡಬೇಕು ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ಮಾಡಬೇಕು. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಬಿಎಲ್‌ಒ ಕೆಲಸಗಳಿಗೆ ಪ್ರೌಢಶಾಲೆಯ ಶಿಕ್ಷಕರನ್ನು ನೇಮಿಸಬಾರದು ಎಂದು ಸಂಬ0ಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಕಲಿಕೆಯ ನಿರಂತರತೆಯು ಫಲಿತಾಂಶ ಸುಧಾರಣೆಗೆ ಮುನ್ನುಡಿ ಬರೆಯುತ್ತದೆ ಎಂದರು.

ಈ ದಿನ ತರಬೇತಿ ಪಡೆಯುವ ಸಂಪನ್ಮೂಲ ಶಿಕ್ಷಕರು ತಮ್ಮ ಬ್ಲಾಕ್ ಗಳಲ್ಲಿ ಇದೇ ಶನಿವಾರದಿಂದ ಕಾರ್ಯ ಪ್ರವೃತ್ತರಾಗಿ ವಿಷಯವಾರು ಶಿಕ್ಷಕರಿಗೆ ತರಬೇತಿ ನೀಡಬೇಕು. ಅದಕ್ಕೆ ಸಂಬ0ಧಿಸಿದ0ತೆ ತಯಾರಿ ಮಾಡಿಕೊಳ್ಳಬೇಕು ಎಂದರು. ಎಲ್ಲರೂ ಚೆನ್ನಾಗಿ ಕೆಲಸ ಮಾಡೋಣ. ಫಲಿತಾಂಶ ಸುಧಾರಣೆಯೇ ನಮ್ಮ ನಿಮ್ಮ ಮೊದಲ ಆದ್ಯತೆ ಆಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಕಲಬುರಿಯ ಅಪರ ಆಯುಕ್ತರಾದ ಪಾಂಡ್ವೆ ರಾಹುಲ್ ತುಕಾರಾಮ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಈ ಬಾರಿಯ ಎಸ್. ಎಸ್. ಎಲ್. ಸಿ. ಫಲಿತಾಂಶ ಸುಧಾರಣೆಗಾಗಿ ಇಲಾಖೆಯು ನೀಡಿದ ಅಂಶಗಳನ್ನು ಎಲ್ಲಾ ಹಂತದ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಇಲಾಖೆಯ ಕಾರ್ಯಯೋಜನೆಗೆ ಒಳಪಡಬೇಕು. ಈ ಕಾರ್ಯಾಗಾರದಲ್ಲಿ ನೀಡುವ ಸಂಪನ್ಮೂಲಗಳ ಪ್ರಕಾರ ಪ್ರತಿವಾರ ಮಾಡುವ ಹಂತ-1, 2, 3, 4 ಗಳ ಅನುಸಾರ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡಬೇಕು. ಈ ಬಾರಿ ನೀಡಿದ ಬ್ಲೂ ಪ್ರಿಂಟ್ ಪ್ರಕಾರ ನವೆಂಬರ್-ಡಿಸೆ0ಬರ್-ಜನೆವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಪರಿಣಾಮಕಾರಿಯಾಗಿ ವಿಷಯ ವಸ್ತು ಪುನರಾವರ್ತನೆಗೊಳ್ಳಬೇಕು ಎಂದರು.

ರಾಯಚೂರಿನ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ, ಈ ಬಾರಿ ರಾಯಚೂರು ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವು ಕಳೆದ ಬಾರಿಗಿಂತ ಉತ್ತಮಪಡಿಸಬೇಕು. ಜೊತೆಗೆ ಇಲಾಖೆಯು ನೀಡಿದ ಎಲ್ಲಾ ಅಂಶಗಳನ್ನು ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಬೇಕು. ಕ್ರಿಯಾಯೋಜನೆಯಂತೆ ಕಾರ್ಯ ನಿರ್ವಹಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಪಾಲಕ ಪೋಷಕರ ಸಭೆ ಮಾಡಿ ಅವರೊಂದಿಗೆ ಚರ್ಚಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರಬೇಕು ಎಂದು ಸೂಚನೆ ನೀಡಿದರು.

ಕಾರ್ಯಾಗಾರದಲ್ಲಿ ನಾಲ್ಕು ಜಿಲ್ಲೆಗಳ ಪ್ರತಿಯೊಂದು ತಾಲೂಕಿನ ಆರು ವಿಷಯಗಳ ಆರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಬರುವ ಎಸ್. ಎಸ್ . ಎಲ್. ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ 12 ವಾರಗಳ ಕಾರ್ಯಯೋಜನೆ ಸಿದ್ದಪಡಿಸಲಾಯಿತು. ವಿಷಯ ಸಂಪನ್ಮೂಲ ಶಿಕ್ಷಕರೊಂದಿಗೆ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಶಿಕ್ಷಣಾಧಿಕಾರಿಗಳು ಎಲ್ಲರನ್ನೊಳಗೊಂಡು ಒಟ್ಟು 190 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಹಾಜರಾದ ಎಲ್ಲಾ 190 ಸಂಪನ್ಮೂಲ ಶಿಕ್ಷಕರು /ಅಧಿಕಾರಿಗಳು ತರಬೇತಿಯನ್ನಾಧರಿಸಿ ಬರುವ ವರ್ಷದ ಎಸ್. ಎಸ್ . ಎಲ್. ಸಿ. ಫಲಿತಾಂಶವನ್ನು ಪ್ರತಿ ಶತದಷ್ಟು ಸಾಧಿಸುವ ದೃಢ ನಿಶ್ಚಯದೊಂದಿಗೆ ಇಲಾಖೆಯ ಕಾರ್ಯಯೋಜನೆ ಯಶಸ್ವಿಗೊಳಿಸಲು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಾದ ಪ್ರಕಾಶ್ ನಿಟ್ಟಾಲಿ, ರಾಯಚೂರಿನ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಶಾಲಾ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತರಾದ ಮಾನ್ಯ ಈಶ್ವರ ಉಳ್ಳಾಗಡ್ಡಿ, ಕೆ.ಎಸ್.ಈ.ಎ.ಬಿ ಮತ್ತು ಡಿ.ಎಸ್.ಈ.ಆರ್.ಟಿ ಬೆಂಗಳೂರು ನಿರ್ದೇಶಕರಾದ ಮಾನ್ಯ ಗೋಪಾಲಕೃಷ್ಣ, ಹೆಚ್.ಎನ್. ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ನೋಡಲ್ ಅಧಿಕಾರಿಗಳು ಹಾಗೂ ತಾಲೂಕವಾರು ಆರು ವಿಷಯಗಳ ಸಂಪನ್ಮೂಲ ಶಿಕ್ಷಕರುಗಳು ಜೊತೆಗೆ ಧಾರವಾಡ ವಿಭಾಗದ ಆಯುಕ್ತರುಗಳು, ಅಧಿಕಾರ ವೃಂದದವರು ಮತ್ತು ಆರು ವಿಷಯಗಳ ಸಂಪನ್ಮೂಲ ಶಿಕ್ಷಕರುಗಳು ಸೇರಿ ಒಟ್ಟು 190 ಜನ ಹಾಜರಿದ್ದರು. ಕೆ.ಡಿ.ಬಡಿಗೇರ ಉಪನಿರ್ದೇಶಕರು(ಆ) ಶಾಲಾ ಶಿಕ್ಷಣ ಇಲಾಖೆ ರಾಯಚೂರು ಸ್ವಾಗತಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande