ನೈಲಾನ್ ದಾರದಲ್ಲಿ ಸಿಲುಕಿ ನೇತಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಪರ್ಯಾವರಣ ಕಾರ್ಯಕರ್ತರು
ನೈಲಾನ್ ದಾರದಲ್ಲಿ ಸಿಲುಕಿ ನೇತಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಪರ್ಯಾವರಣ ಕಾರ್ಯಕರ್ತರು
ಕೋಲಾರ ನಗರದ ಬ್ರಾಹ್ಮಣರ ಬೀದಿಯಲ್ಲಿ ಮರದಲ್ಲಿ ನೈಲಾನ್ ದಾರದಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುತ್ತಿದ್ದ ಗೂಬೆಯನ್ನು ಪರ್ಯಾವರಣ ಸಂಸ್ಥೆಯ ಕಾರ್ಯಕರ್ತರು ರಕ್ಷಿಸಿದರು.


ಕೋಲಾರ, ನವೆಂಬರ್ ೧೮ (ಹಿ.ಸ) :

ಆ್ಯಂಕರ್ : ಮರದ ಮೇಲೆ ಎಸೆಯಲಾಗಿದ್ದ ನೈಲಾನ್ ದಾರದಲ್ಲಿ ಸಿಲುಕಿ ಪರದಾಡುತ್ತಿದ್ದ ಗೂಬೆ ಪಕ್ಷಿಯನ್ನು ಪರ್ಯಾವರಣ ಸಂಸ್ಥೆಯ ಕಾರ್ಯಕರ್ತರು ರಕ್ಷಿಸಿದರು. ಹೆಚ್ಚುತ್ತಿರುವ ನಗರೀಕರಣ ಹಾಗೂ ಕಾಂಕ್ರೀಟ್ ಕಾಡುಗಳಿಂದಾಗಿ ಗೂಬೆ ಪಕ್ಷಿಗಳು ಅಳಿವಿನ ಅಂಚಿನಲ್ಲಿದೆ. ಹವಾಮಾನ ವೈಪರಿತ್ಯ ಮತ್ತು ಮರಗಳ ನಾಶದಿಂದ ಗೂಬೆಗಳ ಸಂತತಿ ಅಪರೂಪವಾಗಿದೆ. ಈ ಹಿಂದೆ ಮನೆಗಳ ಬಳಿ ಗೂಬೆಗಳು ಗೂಡುಕಟ್ಟಿಕೊಂಡು ವಾಸವಾಗುತ್ತಿತ್ತು. ಮನೆಗಳ ನಿರ್ಮಾಣದ ವಿನ್ಯಾಸ ಬದಲಾಗಿರುವ ಕಾರಣ ಗೂಬೆಗಳು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದೆ.

ಪರಿಸರ ಸಂರಕ್ಷಣೆಯಲ್ಲಿ ಜೀವ ಸಂರಕ್ಷಣೆ ಬಹಳ ಪ್ರಾಮುಖ್ಯತೆ ಹೊಂದುತ್ತದೆ. ಮನುಷ್ಯ ಮಾಡುವ ತಪ್ಪಿನಿಂದ ಪ್ರಾಣಿ ಪಕ್ಷಿಗಳಿಗೆ ಕಂಟಕವಾಗಿ ಮಾರ್ಪಟ್ಟಿದೆ. ನೈಲಾಮ್ ಬಟ್ಟೆಗಳು ಉಪಯೋಗಿಸಿ ನಂತರದಲ್ಲಿ ಬೀದಿಗಳಲ್ಲಿ ಬೀಸಾಡುವ ಸಂಪ್ರದಾಯಾಗಿದೆ. ಮುಂದಿನ ದುಷ್ಟ ಪರಿಣಾಮಗಳ ಬಗ್ಗೆ ಯೋಚನೆ ಮಾಡದೆ ಅಡ್ಡಪರಿಣಾಮವಾಗಿ ಬೀರಿದೆ.

ಗೂಬೆವಪಕ್ಷಿಗೆ ನೈಲಾನ್ ದಾರ ಸಿಕ್ಕಿಕೊಂಡು ಪಕ್ಷಿಯ ಕಾಲಿಗೆ ಮತ್ತು ರೆಕ್ಕೆಯ ಪುಕ್ಕೆಗಳಿಗೆ ಸುತ್ತಿಕೊಂಡು ಹಾರಡಲು ಸಾಧ್ಯವಾಗದೆ, ಮರದ ಕೊಂಬೆಯ ತುದಿಗೆ ಸಿಕ್ಕಿಹಾಕಿಕೊಂಡು ಜೊತಾಡುತ್ತಿತ್ತು. ಅದನ್ನು ಕೋಲಿನಿಂದ ಸಂರಕ್ಷಿಸಿ ನೀರನ್ನು ಉಣಿಸಿ ಗಾಯಗಳಿಗೆ ಪ್ರಥಮ ಚಿಕಿತ್ಸೆ ಮಾಡಲಾಯಿತು. ನಂತರದಲ್ಲಿ ಮರದ ಪೊಟರೆಗಳಲ್ಲಿ ಬಿಡಲಾಯಿತು.

ಪರ್ಯಾವರಣ ಸಂರಕ್ಷಕ ಮಹೇಶ ರಾವ್ ಕದಂ, ಮ0ಜು ಪ್ರಿಂಟರ್ಸ್, ವಿಡಿಯೋ ಹರಿಶೇಖರ್, ನರಸೋಜಿ ರಾವ್ ಮತ್ತಿತರಿದ್ದರು ಗೂಬೆಯನ್ನು ಸಂರಕ್ಷಿಸಿದರು.

ಚಿತ್ರ : ಕೋಲಾರ ನಗರದ ಬ್ರಾಹ್ಮಣರ ಬೀದಿಯಲ್ಲಿ ಮರದಲ್ಲಿ ನೈಲಾನ್ ದಾರದಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುತ್ತಿದ್ದ ಗೂಬೆಯನ್ನು ಪರ್ಯಾವರಣ ಸಂಸ್ಥೆಯ ಕಾರ್ಯಕರ್ತರು ರಕ್ಷಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande