ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸದುಪಯೋಗಪಡಿಸಿಕೊಳ್ಳಲು ರೈತರಿಗೆ ಕರೆ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸದುಪಯೋಗಪಡಿಸಿಕೊಳ್ಳಲು ರೈತರಿಗೆ ಕರೆ
ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯ ಅನುಷ್ಠಾನದ ಬಗ್ಗೆ ಕೋಲಾರದ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, ೧೮ ನವೆಂಬರ್ (ಹಿ.ಸ) :

ಆ್ಯಂಕರ್ : ಕರ್ನಾಟಕ ರೈತ ಸುರಕ್ಷಿತ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮಾ ಸೌಲಭ್ಯ ಪ್ರಯೋಜನಗಳನ್ನು ಎಲ್ಲಾ ರೈತರು ಸದುಪಯೋಗ ಪಡಿಸಿಕೊಳ್ಳುವ ರೀತಿ ಕಂದಾಯ ಇಲಾಖೆ ಕಾರ್ಯನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಮಂಗಳ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳೆ ಕಟಾವು ಪ್ರಯೋಜನಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಜನನ ಮರಣ ನೋಂದಣಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ಯೋಜನೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗಿದ್ದು, ಇದರ ಮುಖ್ಯ ಉದ್ದೇಶ ರೈತರ ಬೆಳೆ ವಿಮೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುವುದು. ಇದಕ್ಕೆ ಮುಖ್ಯ ಆಧಾರ ಬೆಳೆ ಕಟಾವು ಪ್ರಯೋಗಗಳಿಂದ ಬಂದ ಹಸಿ ಇಳುವರಿ (೫*೫/೧೦*೫) ಮೀಟರ್ ಮಾಹಿತಿಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆಯು ಬೆಳೆವಾರು, ವಿಮ ಘಟಕವಾರು, ಋತುವಾರು,ಅಧಿಸೂಚಿಸಿದ ಅಧಿಸೂಚನೆಯಂತೆ ಬೆಳೆ ಕಟಾವು ಪ್ರಯೋಗಗಳ ಕಾರ್ಯಯೋಜನೆ ಮೂಲಕಾರ್ಯಕರ್ತರಿಗೆ ಹಂಚಿಕೆ ಮತ್ತು ಮೇಲ್ವಿಚಾರಣೆ ಕೈಗೊಳ್ಳುವುದು. ಬೆಳೆ ಕಟಾವು ಪ್ರಯೋಗಗಳಿಂದ ಬಂದ ಹಸಿ ಇಳುವರಿಯನ್ನು ಆಧರಿಸಿ ಬೆಳೆವಾರ ವಿಮಾ ಘಟಕವಾರು ಸರಾಸರಿ ಇಳುವರಿಯನ್ನು ಸಿದ್ಧಪಡಿಸಿ ಕೃಷಿ ಇಲಾಖೆಗೆ ನೀಡುವುದು ಮತ್ತು ಸಂರಕ್ಷಣೆ ಪೋರ್ಟಲ್‌ಗೆ ಅಪ್ಲೋಡ್ ಮಾಡುವುದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಪ್ರಮುಖ ಜವಾಬ್ದಾರಿ ಯಾಗಿರುತ್ತದೆ. ಸಹಜವಾಗಿ ಬೆಳೆಯು ಬಿತ್ತನೆಯಾದ ಕನಿಷ್ಠ ೨೦ ದಿನಗಳ ನಂತರ ನಮೂನೆ-೧ನ್ನು ಅಪ್ಲೋಡ್ ಮಾಡುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ತಹಶೀಲ್ದಾರ್ ರವರಿಂದ ಸೀಕೃತವಾದ ವರದಿ ಹೋಬಳಿವಾರು ಮತ್ತು ತಾಲ್ಲೂಕುವಾರು ಬೆಳೆ ಅಂಕಿ ಅಂಶಗಳ ವರದಿಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಪರಿಶೀಲಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿಗಳನ್ನು ಸಿದ್ಧಪಡಿಸಬೇಕು, ಜಿಲ್ಲಾ ವರದಿ ಅಂದರೆ ಜಿಲ್ಲಾ ಬೆಳೆ, ಅಂಕಿ ಅಂಶಗಳ ಬೆಳೆ, ಹಳೆ ಅಂಕಿ ಅಂಶಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಮರಣ ಮತ್ತು ಜನನ ಆದರೂ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಜನನ ಮರಣಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ದಾಖಲಿಸಿ ಗಣಕೀಕೃತ ಪ್ರಮಾಣ ಪತ್ರಗಳನ್ನು ಪಡೆಯುವ ಸುಲಭ ವಿಧಾನನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಜನನ ಮರಣ ಪತ್ರಗಳನ್ನು ೨೧ ದಿನಗೊಳಗಾಗಿ ಸಂಬ0ಧಿಸಿದ ಕಚೇರಿಗಳಲ್ಲಿ ನೋಂದಾಯಿಸಿ ಉಚಿತವಾಗಿ ಪಡೆದುಕೊಳ್ಳಬಹುದು. ಕಾನೂನಿನ ಪ್ರಕಾರ ಜನನ ಮರಣ ನೋಂದಣಿ ಕಡ್ಡಾಯ. ವಿಳಂಬ ನೋಂದಣಿಗೂ ಸಹ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ತಿತಿತಿ.eರಿಚಿಟಿmಚಿ.ಞಚಿಡಿಟಿಚಿಣಚಿಞಚಿ.gov.iಟಿ., ಖಿoಟಟ ಈಡಿee ಓo: ೧೮೦೦-೪೨೫-೬೫೭೮ ಅನ್ನು ಸಂಪರ್ಕಿಸಬಹುದಾಗಿದೆ.

ಕೋಲಾರ ಜಿಲ್ಲೆಯಲ್ಲಿ ಜನನ ಮತ್ತು ಮರಣ ನೋಂದಣಿ ಮಾಡಲು ಗ್ರಾಮೀಣ ಪ್ರದೇಶದಲ್ಲಿ ೧೮೫೯ ನೋಂದಣಿ ಘಟಕಗಳಿವೆ ,ನಗರ ಪ್ರದೇಶದಲ್ಲಿ ೧೮ ನೋಂದಣಿ ಘಟಕಗಳಿವೆ , ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ೧೫೪ ನೋಂದಣಿ ಘಟಕಗಳಿವೆ ಜಿಲ್ಲೆಯಲ್ಲಿ ಒಟ್ಟು ೧೮೭೭ ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಅಧಿಕಾರಿಗಳು ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸಭೆಗೆ ತಿಳಿಸಿದರು.

ಪ್ರಸ್ತುತ ವರ್ಷದಲ್ಲಿ ನಗರ ಪ್ರದೇಶದಲ್ಲಿ ೧೪೫೬೫ ಗ್ರಾಮೀಣ ಭಾಗದಲ್ಲಿ ೩೯೭೬ ಸೇರಿದಂತೆ ಒಟ್ಟು ೧೮೫೪೧ ಜನನವಾಗಿದೆ ಅದೇ ರೀತಿ ಜಿಲ್ಲೆಯ ನಗರ ಭಾಗದಲ್ಲಿ ೩೪೫೭ ಗ್ರಾಮೀಣ ಭಾಗದಲ್ಲಿ ೩೦೧೨ ಸೇರಿದಂತೆ ಒಟ್ಟು ೪೫೧೭ ರಷ್ಟು ಮರಣ ನೋಂದಣಿ ಆಗಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಏಳನೇ ಸಣ್ಣ ನೀರಾವರಿ ಮತ್ತು ಎರಡನೇ ನೀರಿನಸಾರೆಗಳ ಗಣತಿಗಳು, ಉದ್ದೇಶಗಳು, ವಿಧಗಳು ,ಯೋಜನೆಗಳನ್ನು ಹೊಂದಿರುವ ಪೋಸ್ಟರ್ ಬಿಡುಗಡೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಮೇಶ್, ಕೃಷಿ ಇಲಾಖೆಯ ಉಪನಿರ್ದೇಶಕಿ ಜವಿಧಾ ಖಾನಂ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ, ಜಿಲ್ಲಾ ಶಸ್ತ್ರಜ್ಞರಾದ ಡಾ.ಜಗದೀಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜೋಶಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ವೆಂಕಟಾಚಲಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಾರಾಯಣಸ್ವಾಮಿ, ಕೆಜಿಎಫ್ ತಹಶೀಲ್ದಾರ್ ಭರತ್, ಖಾಸಗಿ ವಿಮಾ ಕಂಪನಿ ಪ್ರತಿನಿಧಿಗಳು, ಕಂದಾಯ ಇಲಾಖೆಯ ಸಂಬAಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯ ಅನುಷ್ಠಾನದ ಬಗ್ಗೆ ಕೋಲಾರದ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ ಅಧಿಕಾರಿಗಳ ಸಭೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande