ಚರ್ಚಾ ಸ್ಫರ್ಧೆಗಳಿಂದ ಜ್ಞಾನಾಭಿವೃದ್ಧಿ : ಪ್ರೊ.ಎಂ.ಮುನಿರಾಜು
ಬಳ್ಳಾರಿ, 18 ನವೆಂಬರ್ (ಹಿ.ಸ.) : ಆ್ಯಂಕರ್ : ಚರ್ಚಾಸ್ಫರ್ಧೆಗಳಲ್ಲಿ ಮಂಡಿತವಾಗುವ ವಿಷಯಗಳಿಂದ ಆಯಾ ವಲಯದ ಆಳ-ಆಗಲ ಅರಿಯಲು ಮತ್ತು ಜ್ಞಾನಾಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು. ವಿವಿಯ ಡಾ.ಬಿ.
ಚರ್ಚಾಸ್ಫರ್ಧೆಗಳಿಂದ ಜ್ಞಾನಾಭಿವೃದ್ಧಿ: ಪ್ರೊ.ಎಂ.ಮುನಿರಾಜು


ಬಳ್ಳಾರಿ, 18 ನವೆಂಬರ್ (ಹಿ.ಸ.) :

ಆ್ಯಂಕರ್ : ಚರ್ಚಾಸ್ಫರ್ಧೆಗಳಲ್ಲಿ ಮಂಡಿತವಾಗುವ ವಿಷಯಗಳಿಂದ ಆಯಾ ವಲಯದ ಆಳ-ಆಗಲ ಅರಿಯಲು ಮತ್ತು ಜ್ಞಾನಾಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು.

ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ವಿದ್ಯಾರ್ಥಿ ಕಲ್ಯಾಣ ಘಟಕ ಮತ್ತು ರಾಜ್ಯ ಸಹಕಾರ ಮಹಾಮಂಡಳ ಜಂಟಿ ಸಹಭಾಗಿತ್ವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಹಕಾರ ಕ್ಷೇತ್ರದ ಕುರಿತು ಏರ್ಪಡಿಸಿದ್ದ ಚರ್ಚಾಸ್ಫರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಫರ್ಧಾತ್ಮಕತೆ ಎಂಬುದು ಎಲ್ಲೆಡೆ ಅಗತ್ಯವಿರುವ ವಸ್ತು ವಿಷಯವಾಗಿದೆ. ಪ್ರಚಲಿತ ವಿದ್ಯಮಾನಗಳ ಅಥವಾ ಗಾಂಧೀಜಿ, ಅಂಬೇಡ್ಕರ್ ಅವರಂತಹ ಪ್ರಮುಖ ವ್ಯಕ್ತಿಗಳ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ದುಕೊಂಡು ಪರಸ್ಪರ ಚರ್ಚೆ, ಗುಂಪು ಸಂವಹನ ನಡೆಸಬೇಕು. ಇದರಿಂದ ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ವೈಯಕ್ತಿಕ ಮತ್ತು ರಾಷ್ಟçದ ಭವಿಷ್ಯ ಅಭಿವೃದ್ಧಿಗೆ ಚರ್ಚಾಸ್ಫರ್ಧೆಗಳು ದಾರಿದೀಪವಾಗುತ್ತವೆ ಇದೇ ಸಂದರ್ಭದಲ್ಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಂಯೋಜಕರಾದ ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕರಾದ ಪ್ರೊ.ಗೌರಿ ಮಾಣಿಕ ಮಾನಸ ಅವರು ಮಾತನಾಡಿ, ಸಹಕಾರ ಕ್ಷೇತ್ರದ ಚರ್ಚಾಸ್ಫರ್ಧೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಕ್ರಮವಾಗಿ ರೂ.3 ಸಾವಿರ, 2 ಸಾವಿರ ಮತ್ತು 1 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸ್ಫರ್ಧೆಗಳ ನಿರ್ಣಾಯಕರಾಗಿ ಆಗಮಿಸಿದ್ದ ವಿವಿಯ ಶುದ್ಧ ನಿಕಾಯ ಡೀನ್ ಪ್ರೊ.ಖಡ್ಕೆ ಉದಯಕುಮಾರ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ.ರಾಬರ್ಟ್ ಜೋಸ್, ರಸಾಯನಶಾಸ್ತç ವಿಭಾಗದ ಪ್ರೊ.ಅರುಣ್‌ಕುಮಾರ್ ಲಗಶೆಟ್ಟಿ ವೇದಿಕೆಯಲ್ಲಿದ್ದರು.

ವಿವಿಯ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande