
ಭೋಪಾಲ್, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆಯಾದ ಆಸಿಯನ್ ದೇಶಗಳ ಉನ್ನತ ಮಟ್ಟದ ರಾಜತಾಂತ್ರಿಕರ ನಿಯೋಗವು ಮೂರು ದಿನಗಳ ಭೇಟಿಗಾಗಿ ಇಂದು ಮಧ್ಯಪ್ರದೇಶದ ಭೋಪಾಲ್‌ಗೆ ಆಗಮಿಸುತ್ತಿದೆ.
ನವೆಂಬರ್ 20ರವರೆಗೆ ಅವರು ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ರಾಜ್ಯಪಾಲ ಮಂಗುಭಾಯಿ ಪಟೇಲ್ ಅವರನ್ನು ಭೇಟಿ ಮಾಡಿ ಹೂಡಿಕೆ, ಆರ್ಥಿಕ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.
ಸಾರ್ವಜನಿಕ ಸಂಪರ್ಕ ಅಧಿಕಾರಿ ಬಬಿತಾ ಮಿಶ್ರಾ ನೀಡಿದ ಮಾಹಿತಿ ಪ್ರಕಾರ, ಈ ಭೇಟಿ ಮಧ್ಯಪ್ರದೇಶ ಮತ್ತು ಆಸಿಯನ್ ರಾಷ್ಟ್ರಗಳ ನಡುವೆ ಕೈಗಾರಿಕಾ, ಹೂಡಿಕೆ ಮತ್ತು ಸಾಂಸ್ಕೃತಿಕ ಸಹಭಾಗಿತ್ವವನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಲಿದ್ದು, ಇದರಿಂದ ಮಧ್ಯಪ್ರದೇಶ ಮತ್ತು ಆಸಿಯನ್ ರಾಷ್ಟ್ರಗಳ ನಡುವಿನ ಆರ್ಥಿಕ–ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಚೈತನ್ಯ ಸಿಗಲಿದೆ.
ಈ ಭೇಟಿ ಪ್ರಧಾನಿ ನರೇಂದ್ರ ಮೋದಿ ಅವರ “ಆಕ್ಟ್ ಈಸ್ಟ್ ಪಾಲಿಸಿಗೆ ಸರಿ ಹೊಂದುತ್ತದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa