ಭಾರತ-ಪಾಕ್ ಗಡಿಯಲ್ಲಿ ಡ್ರೋನ್, ಹೆರಾಯಿನ್ ಮತ್ತು ಮದ್ದುಗುಂಡು ವಶಕ್ಕೆ
ಚಂಡೀಗಡ, 18 ನವೆಂಬರ್ (ಹಿ.ಸ.) : ಆ್ಯಂಕರ್ : ಪಂಜಾಬ್‌ ಗಡಿಯಲ್ಲಿನ ಕಳ್ಳಸಾಗಣೆ ಜಾಲದ ವಿರುದ್ಧ ಬಿಎಸ್‌ಎಫ್ ಮತ್ತೊಂದು ದೊಡ್ಡ ದಾಳಿಯನ್ನು ನಡೆಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ, ಡ್ರೋನ್‌ಗಳು, ಹೆರಾಯಿನ್ ಮತ್ತು ಮದ್ದುಗುಂಡುಗಳನ್ನು ಹಲವು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗ
Bsf


ಚಂಡೀಗಡ, 18 ನವೆಂಬರ್ (ಹಿ.ಸ.) :

ಆ್ಯಂಕರ್ : ಪಂಜಾಬ್‌ ಗಡಿಯಲ್ಲಿನ ಕಳ್ಳಸಾಗಣೆ ಜಾಲದ ವಿರುದ್ಧ ಬಿಎಸ್‌ಎಫ್ ಮತ್ತೊಂದು ದೊಡ್ಡ ದಾಳಿಯನ್ನು ನಡೆಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ, ಡ್ರೋನ್‌ಗಳು, ಹೆರಾಯಿನ್ ಮತ್ತು ಮದ್ದುಗುಂಡುಗಳನ್ನು ಹಲವು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ.

ಅಮೃತಸರ ವಲಯದಲ್ಲಿ ಕಣ್ಗಾವಲು ವೇಳೆ ಪತ್ತೆಯಾದ DJI Mavic-3 ಡ್ರೋನ್ ಪಾಕಿಸ್ತಾನದಿಂದ ಮಾದಕ ವಸ್ತು ಕಳ್ಳಸಾಗಣೆಗೆ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ.

ತರಣ್ ತರಣ್ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ತಂಡ ಅನುಮಾನಾಸ್ಪದ ಚಲನವಲನ ಕಂಡು 548 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದೆ.

ಫಿರೋಜ್‌ಪುರದ ಬೇಲಿಯ ಹತ್ತಿರ 5 ಪ್ಯಾಕೆಟ್‌ಗಳಲ್ಲಿ 2.649 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಬಿಎಸ್‌ಎಫ್–ಪಂಜಾಬ್ ಪೊಲೀಸರು ಜಂಟಿಯಾಗಿ ನಡೆಸಿದ ಶೋಧದಲ್ಲಿ 9 ಎಂಎಂ 50 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾಕಿಸ್ತಾನ ಮೂಲದ ಕಳ್ಳಸಾಗಣೆ ಜಾಲವು ಡ್ರೋನ್‌ಗಳ ಮೂಲಕ ಭಾರತಕ್ಕೆ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರ ಕಳುಹಿಸುವ ಪ್ರಯತ್ನವನ್ನು ಹೆಚ್ಚಿಸಿದೆ. ಆದರೆ ಜಾಗರೂಕ ನಿಗಾ ಮತ್ತು ಆಧುನಿಕ ತಂತ್ರಜ್ಞಾನದ ನೆರವಿನಿಂದ ಈ ಪ್ರಯತ್ನಗಳನ್ನು ನಿರಂತರವಾಗಿ ವಿಫಲಗೊಳಿಸಲಾಗುತ್ತಿದೆ ಎಂದು ಬಿಎಸ್ಎಫ್ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande