ಆದರ್ಶ ವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ನೇಮಕ ; ಅರ್ಜಿ ಆಹ್ವಾನ
ಬಳ್ಳಾರಿ, 18 ನವೆಂಬರ್ (ಹಿ.ಸ.) : ಆ್ಯಂಕರ್ : ನಗರದ ಈದ್ಗಾ ರಸ್ತೆಯ ಹಿರಾಳ್ ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಇಂಗ್ಲೀಷ್ ಮಾಧ್ಯಮದ ಆಂಗ್ಲ ಭಾಷಾ ಅತಿಥಿ ಶಿಕ್ಷಕರು ಮತ್ತು ಇಂಗ್ಲೀಷ್ (ಕಲಾ) ಭಾಷಾ ವಿಷಯ ಶಿಕ್ಷಕರು ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾಲಯವು ಆಂಗ
ಆದರ್ಶ ವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ನೇಮಕ ; ಅರ್ಜಿ ಆಹ್ವಾನ


ಬಳ್ಳಾರಿ, 18 ನವೆಂಬರ್ (ಹಿ.ಸ.) :

ಆ್ಯಂಕರ್ : ನಗರದ ಈದ್ಗಾ ರಸ್ತೆಯ ಹಿರಾಳ್ ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಇಂಗ್ಲೀಷ್ ಮಾಧ್ಯಮದ ಆಂಗ್ಲ ಭಾಷಾ ಅತಿಥಿ ಶಿಕ್ಷಕರು ಮತ್ತು ಇಂಗ್ಲೀಷ್ (ಕಲಾ) ಭಾಷಾ ವಿಷಯ ಶಿಕ್ಷಕರು ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾಲಯವು ಆಂಗ್ಲ ಮಾಧ್ಯಮವಾಗಿದ್ದು, 6ನೇ ತರಗತಿ ಯಿಂದ 10ನೇ ತರಗತಿಯವರೆಗೆ ಒಟ್ಟು 510 ವಿದ್ಯಾರ್ಥಿಗಳಿದ್ದಾರೆ. ಎನ್‌ಸಿಆರ್‌ಟಿ ಪಠ್ಯಕ್ರಮ ಹೊಂದಿರುವುದರಿ0ದ ಆಂಗ್ಲ ಭಾಷೆ ವಿಷಯ ಭೋದಿಸುವ ಆಂಗ್ಲ ಭಾಷಾ ಅತಿಥಿ ಶಿಕ್ಷಕರ ಹುದ್ದೆ ಖಾಲಿ ಇದ್ದು, ಆಸಕ್ತ ಅರ್ಹ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.9740738762 ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande