
ಕೊಪ್ಪಳ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಕೊಪ್ಪಳ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ನಬೀಸಾಬ ತಂದಿ ರಾಜಾಸಾಬ್ ಮುಲ್ಲಾ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿನ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಆಡಳಿತ ಮಂಡಿಳಿಯಿಂದ ಇಂದು ಸನ್ಮಾನಿಸಿ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಕುಮಾರ ನಬೀಸಾಬ ಮುಲ್ಲಾ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಲೆಯ ಕನ್ನಡ ಶಿಕ್ಷಕ ರಂಗನಾಥ ಮಾತನಾಡಿ ವಿದ್ಯಾರ್ಥಿಯ ಸಾಧನೆಯನ್ನು ಕೊಂಡಾಡಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯ ಗುರುರಾಜ ಅಗಳಿ .ಮುಖ್ಯೋಪಾಧ್ಯಾಯ ರಾದ ಕಲ್ಪನಾ ವಿಜಯಕುಮಾರ, ವೆಂಕಟೇಶ ದೈಹಿಕ ಶಿಕ್ಷಣದ ಶಿಕ್ಷಕ, ಭಾರತೀ, ಸುಲೋಚನಾ, ರಮೇಶ ಡಂಬಳ, ಸ್ವಪ್ನ, ಜಾಕೀರ ಹುಸೇನ, ಮೈನುದ್ದೀನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್