ಆರೋಗ್ಯ ಶಿಬಿರ, ಕಾನೂನು ಸಾಕ್ಷರತೆಯಲ್ಲಿ ಮಾಜಿ ದೇವದಾಸಿಯರು ಭಾಗಿ
ರಾಯಚೂರು, 16 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ರಾಯಚೂರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ಧ ಮಾಜಿ ದೇವದಾಸಿಯರು ಸಕ್ರಿಯ ಭಾಗಿಯಾದರು.
ಆರೋಗ್ಯ ಶಿಬಿರ, ಕಾನೂನು ಸಾಕ್ಷರತೆಯಲ್ಲಿ ಮಾಜಿ ದೇವದಾಸಿಯರು ಭಾಗಿ


ಆರೋಗ್ಯ ಶಿಬಿರ, ಕಾನೂನು ಸಾಕ್ಷರತೆಯಲ್ಲಿ ಮಾಜಿ ದೇವದಾಸಿಯರು ಭಾಗಿ


ಆರೋಗ್ಯ ಶಿಬಿರ, ಕಾನೂನು ಸಾಕ್ಷರತೆಯಲ್ಲಿ ಮಾಜಿ ದೇವದಾಸಿಯರು ಭಾಗಿ


ಆರೋಗ್ಯ ಶಿಬಿರ, ಕಾನೂನು ಸಾಕ್ಷರತೆಯಲ್ಲಿ ಮಾಜಿ ದೇವದಾಸಿಯರು ಭಾಗಿ


ಆರೋಗ್ಯ ಶಿಬಿರ, ಕಾನೂನು ಸಾಕ್ಷರತೆಯಲ್ಲಿ ಮಾಜಿ ದೇವದಾಸಿಯರು ಭಾಗಿ


ರಾಯಚೂರು, 16 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ರಾಯಚೂರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ಧ ಮಾಜಿ ದೇವದಾಸಿಯರು ಸಕ್ರಿಯ ಭಾಗಿಯಾದರು.

ನ್ಯಾಯಮೂರ್ತಿಗಳಾದ ವಿಭು ಬಖ್ರು, ಎಂ.ಜಿ. ಶುಕುರೆ ಕಮಲ್, ಅನು ಸಿವರಾಮನ್, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ ಹಾಗೂ ಇತರರು ಜಿಲ್ಲಾ ರಂಗಮ0ದಿರದತ್ತ ಆಗಮಿಸುತ್ತಿದ್ದಂತೆ ಡೊಳ್ಳುಕುಣಿತ ಹಾಗೂ ಮಹಿಳೆಯರ ಪೂರ್ಣಕುಂಭದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ, ಮೊದಲಿಗೆ ನ್ಯಾಯಮೂರ್ತಿಗಳು ಮಳಿಗೆ ಉದ್ಘಾಟಿಸಿ ವೀಕ್ಷಣೆ ಮಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ವಕೀಲರ ಸಂಘ ಜಂಟಿಯಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಕ್ಕೆ ನ್ಯಾಯಮೂರ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಮುಕ್ತಿ ದೇವದಾಸಿ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಕೃಷಿ- ತೋಟಗಾರಿಕಾ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ್ರಾದೇಶಿಕ ಸಾರಿಗೆ ಇಲಾಖೆ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಶಾಲಾ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ಹಿರಿಯ ನಾಗರಿಕರ ವಿಕಲಚೇತನರ ಕಲ್ಯಾಣ ಇಲಾಖೆ, ಸ್ವಸಹಾಯ ಸಂಘಗಳಿ0ದ ಮಳಿಗೆ ಅಳವಡಿಸಿ ನಾನಾ ಯೋಜನೆಗಳ ಕರಪತ್ರ ವಿತರಿಸಿ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ಆರೋಗ್ಯ ತಪಾಸಣೆ: ವಿಶೇಷವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಐದಾರು ಸ್ಟಾಲಗಳನ್ನು ಅಳವಡಿಸಿ ಮಾಜಿ ದೇವದಾಸಿ ಮಹಿಳೆಯರಿಗೆ ಕಣ್ಣು, ರಕ್ತದೊತ್ತಡ, ಮದುಮೇಹ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಲಾಯಿತು. ಸ್ಥಳದಲ್ಲೇ ಬಿ.ಪಿ., ಸೂಗರ್ ಪರೀಕ್ಷೆಗೆ ಮತ್ತು ಔಷಧಿ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಮೊದಲಿಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ದೇವದಾಸಿ ಮಹಿಳೆಯರಿಂದಲೇ ಎಲ್ಲ ನ್ಯಾಯಮೂರ್ತಿಗಳಿಗೆ, ನ್ಯಾಯಾಧೀಶರಿಗೆ ಸನ್ಮಾನ ನೆರವೇರಿಸಿದ್ದು, ವಿಶೇಷವಾಗಿತ್ತು. ಗಾಯಕಿ ಮಹಾಲಕ್ಷ್ಮಿ ಅವರ ಪ್ರಾರ್ಥನೆಯೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ವಸುಂಧರಾ ಮತ್ತು ಯಶೋಧಾ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಊಟದ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸಿದ್ಧ ಮಾಜಿ ದೇವದಾಸಿ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ಆವರಣದಲ್ಲಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande