

ಕೊಪ್ಪಳ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಇಂದಿನ ಮಕ್ಕಳೆ ಮುಂದಿನ ನಾಗರಿಕರು ಅವರಿಗೆ ಭವಿಷ್ಯದಲ್ಲಿ ವೃದ್ದಾಶ್ರಮದ ಚಿತ್ರಣ ಮತ್ತು ಅಲ್ಲಿರುವ ಹಿರಿಯ ಜೀವಗಳ ಬದುಕು ಯಾವ ಸ್ಥಿತಿಯಲ್ಲಿ ಇರುತ್ತದೆ ಎಂದು ತಿಳಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಕೊಪ್ಪಳ ನಗರದ ಸುರಭಿ ವೃದ್ದಾಶ್ರಮದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಿ ಭಾಗ್ಯನಗರ ಪಟ್ಟಣದ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯವರು ಗಮನ ಸೇಳೆದಿದ್ದಾರೆ.
ಆಧುನಿಕ ಜೀವನ ಶೈಲಿಯಲ್ಲಿ ಅವಿಭಕ್ತ ಕುಟುಂಬ ಕಲ್ಪನೆ ಮಾಯವಾಗಿ ತಂದೆ ತಾಯಿ ಸೇರಿದಂತೆ ಮನೆಯಲ್ಲಿನ ಹಿರಿಯರನ್ನು ಅಸಡ್ಡೆಯಿಂದ ಕಾಣುವ ಮೂಲಕ ಮುಪ್ಪಾವಸ್ತೆಯಲ್ಲಿ ಹಿರಿಯ ಜೀವಿಗಳನ್ನು ಅನಾಥಶ್ರಮ ವೃದ್ದಾಶ್ರಮದಲ್ಲಿ ಬಿಡುವ ಹೀನ ಕೆಲಸ ತಪ್ಪ ಎಂದು ಮಕ್ಕಳಿಗೆ ತಿಳಿಸುವ ಮಹತ್ವದ ಉದ್ದೇಶದಿಂದ ಭಾಗ್ಯನಗರ ಪಟ್ಟಣದಲ್ಲಿನ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸುರಭಿ ವೃದ್ದಾಶ್ರಮಕ್ಕೆ ತೆರೆಳಿ ಹಿರಿಯ ಜೀವಿಗಳಿಗೆ ಸಿಹಿ ಭೋಜನದ ಊಟ ನೀಡಿ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಿಳಿಯ ಸದಸ್ಯ ಗುರುರಾಜ ಅಗಳಿ. ಶಿಕ್ಷಕರಾದ ಶಿಲ್ಪಾ ಗುರುರಾಜ. ಚಾಂದ ಬ್ಯಾವೋ. ಸುನಿತಾ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು ಶಾಲೆಯ ಆಡಳಿತ ಮಂಡಳಿಯಿಂದ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್