ಆಹಾರ ಧಾನ್ಯಗಳಿಗೆ ನಿಗದಿಪಡಿಸಿರುವ ಬೆಂಬಲ ಬೆಲೆ, ವೇಳಾಪಟ್ಟಿ ಪ್ರಕಟ : ಜಿಲ್ಲಾಧಿಕಾರಿ
ದಿ
ಆಹಾರ ಧಾನ್ಯಗಳಿಗೆ ನಿಗದಿಪಡಿಸಿರುವ ಬೆಂಬಲ ಬೆಲೆ, ವೇಳಾಪಟ್ಟಿ ಪ್ರಕಟ : ಜಿಲ್ಲಾಧಿಕಾರಿ


ಹೊಸಪೇಟೆ, 15 ನವೆಂಬರ್ (ಹಿ.ಸ.) :

ಆ್ಯಂಕರ್ : 2025-26 ನೇ ಸಾಲಿನ ಕನಿಷ್ಟ ಬೆಂಬಲ ಬೆರೆ ಯೋಜನೆಯಡಿ ಆಹಾರ ಧಾನ್ಯ ಖರೀದಿ ಸಂಬಂಧಿಸಿದಂತೆ ವೇಳಾಪಟ್ಟಿ, ಖರೀದಿ ಪ್ರಮಾಣ ಮತ್ತು ದರ ನಿಗದಿಪಡಿಸಿ ಮುಂಗಾರು ಋತುವಿನಲ್ಲಿ ಭತ್ತ, ರಾಗಿ ಕಿರು ಧಾನ್ಯ (ಸಾಮೆ ಮತ್ತು ನವಣೆ) ಬಿಳಿಜೋಳ (ಮುಂಗಾರು ಮತ್ತು ಹಿಂಗಾರು) ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ವಯ ಎಫ್‍ಎಕ್ಯೂ ಗುಣಮಟ್ಟದ ಆಹಾರ ಧಾನ್ಯವನ್ನು ರೈತರಿಂದ ನೇರವಾಗಿ ಖರೀದಿಸಲು ದರಗಳನ್ನು ನಿಗದಿಪಡಿಲಾಗಿದೆ ಎಂದು ಜಿಲ್ಲಾ ಟಾಸ್ಕ್‍ಫೆÇೀರ್ಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ಕನಿಷ್ಟ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ (ಸಾಮಾನ್ಯ ಗ್ರೇಡ್-ಎ) ಖರೀದಿಯನ್ನು ನವೆಂಬರ್.1 ರಿಂದ ಫೆಬ್ರವರಿ.2 ರವರೆಗೆ ಅವಧಿಯಾಗಿದೆ. ಭತ್ತವನ್ನು ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಲ್‍ನಂತೆ ಪ್ರತಿ ಕ್ವಿಂಟಲ್‍ಗೆ 2369 ರೂ.ಗಳು ಮೊತ್ತ ಮತ್ತು ಗರಿಷ್ಟ 50 ಕ್ವಿಂಟಲ್‍ನಂತೆ ಪ್ರತಿ ಕ್ವಿಂಟಲ್‍ಗೆ 2389 ರೂ.ಗಳು ಮೊತ್ತದ ಭತ್ತವನ್ನು ಖರೀದಿಸಬೇಕು.

ರಾಗಿ, ಕಿರು ಸಿರಿಧಾನ್ಯಗಳ ಸಾಮೆ ಮತ್ತು ನವಣೆ ಖರೀದಿಯನ್ನು ನವೆಂಬರ್ 1 ರಿಂದ ಮಾರ್ಚ್ 31 ರವರೆಗೆ ಅವಧಿಯಾಗಿದೆ. ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಲ್‍ನಂತೆ ಮತ್ತು ಗರಿಷ್ಟ 50 ಕ್ವಿಂಟಲ್‍ಗೆ 4886 ರೂ.ಗಳು ಖರೀದಿಸಬೇಕು.

ಬಿಳಿಜೋಳ ಖರೀದಿಯನ್ನು ಡಿ.1 ರಿಂದ ಜ.31 ರವರೆಗೆ ಮುಂಗಾರು ಮತ್ತು ಫೆ.1 ರಿಂದ ಏ.4 ರವರೆಗೆ ಹಿಂಗಾರು ಅವಧಿಯಾಗಿದೆ. ನ.15 ರಿಂದ ಮಾ.31 ರವರೆಗೆ ನೋಂದಣಿ ಅವಧಿಯಾಗಿದೆ. ಬಿಳಿಜೋಳವನ್ನು ಪ್ರತಿ ರೈತರಿಂದ ಎಕರೆಗೆ 15 ಕ್ವಿಂಟಲ್‍ನಂತೆ ಪ್ರತಿ ಕ್ವಿಂಟಲ್‍ಗೆ 3699 ರೂ.ಗಳು ಮೊತ್ತ ಮತ್ತು ಗರಿಷ್ಟ 50 ಕ್ವಿಂಟಲ್‍ನಂತೆ ಪ್ರತಿ ಕ್ವಿಂಟಲ್‍ಗೆ 3749 ರೂ.ಗಳು ಮೊತ್ತದ ಬಿಳಿಜೋಳವನ್ನು ಖರೀದಿಸಬೇಕು.

ಹೊಸಪೇಟೆ ತಾಲೂಕಿನಲ್ಲಿ ಚಿತ್ತವಾಡ್ಗಿ ಶ್ರೀವಿದ್ಯಾರಣ ಪಿಎಸಿಎಸ್ ಸಂಸ್ಥೆಯಿಂದ ಎಪಿಎಂಸಿ ಯಾರ್ಡ್‍ಲ್ಲಿ ನೋಂದಣಿ, ಖರೀದಿ ಕೇಂದ್ರವಾಗಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ರಫೀಕ್ ಮೊ.7483184576.

ಹಗರಿಬೋಮ್ಮನಹಳ್ಳಿ ತಾಲೂಕಿನ ವರಲಹಳ್ಳಿಯಲ್ಲಿ ಪಿಎಸಿಎಸ್ ನೋಂದಣಿ ಖರೀದಿ ಸಂಸ್ಥೆಯಿಂದ ಹಗರಿಬೊಮ್ಮನಹಳ್ಳಿ ಎಪಿಎಂಸಿ ಯಾರ್ಡ್‍ನಲ್ಲಿ ಖರೀದಿ ಕೇಂದ್ರವಾಗಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊ.ಬಸವರಾಜ್.ಎಂ ಮೊ.9900236100.

ಕೂಡ್ಲಿಗಿ ತಾಲೂಕಿನ ಕಕುಪ್ಪಿ ಪಿಎಸಿಎಸ್ ಮತ್ತು ಚಿಕ್ಕಜೋಗಿಹಳ್ಳಿ ಅನ್ನದಾತ ಡಿಸಿಎಫ್‍ಪಿಸಿ ಲಿಮಿಟೆಡ್ ನೋಂದಣಿ ಖರೀದಿ ಸಂಸ್ಥೆಯಾಗಿದೆ. ಕೂಡ್ಲಿಗಿ ಮತ್ತು ಚಿಕ್ಕಜೋಗಿಹಳ್ಳಿ ಎಪಿಎಂಸಿ ಯಾರ್ಡ್‍ನಲ್ಲಿ ನೋಂದಣಿ ಖರೀದಿ ಕೇಂದ್ರವಾಗಿದೆ. ಕೂಡ್ಲಿಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆÉ.ಆರ್. ಮಲ್ಲಿಕಾರ್ಜುನ್ ಮೊ. 9632032224, ಚಿಕ್ಕಜೋಗಿಹಳ್ಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಮತಿ.ಟಿ ಮೊ.9740942059.

ಕೊಟ್ಟೂರು ತಾಲೂಕಿನ ಅಯ್ಯನಹಳ್ಳಿಯ ಪಿಎಸಿಎಸ್‍ಕೆ ಮತ್ತು ಕಾನಹೊಸಹಳ್ಳಿ ತುಂಗಭದ್ರ ಡಿಎಫ್‍ಪಿಸಿ ಲಿಮಿಟೆಡ್ ನೋಂದಣಿ ಖರೀದಿ ಸಂಸ್ಥೆವಾಗಿದೆ. ಕೊಟ್ಟೂರು ಎಪಿಎಂಸಿ ಯಾರ್ಡ್ ಮತ್ತು ಉಜ್ಜಿನಿಯಲ್ಲಿ ನೋಂದಣಿ ಖರೀದಿ ಕೇಂದ್ರವಾಗಿದೆ. ಕೊಟ್ಟೂರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೊಟ್ರೇಶ್ ಮೊ.7829626177 ಮತ್ತು ಉಜ್ಜಿನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾವ್ಯ.ಡಿ.ಕೆ ಮೊ.6363144145.

ಹರಪನಹಳ್ಳಿ ತಾಲೂಕಿನ ಚಿಗಟೇರಿ ಪಿಎಸಿಎಸ್ ಮತ್ತು ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಾಕರ ಸಂಘ ಕೇಂದ್ರದಲ್ಲಿ ನೋಂದಣಿ ಖರೀದಿ ಸಂಸ್ಥೆವಾಗಿದೆ. ಹರಪನಹಳ್ಳಿಯ ಎಪಿಎಂಸಿ ಯಾರ್ಡ್ ಮತ್ತು ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಾಕರ ಸಂಘದಲ್ಲಿ ನೋಂದಣಿ ಖರೀದಿ ಕೇಂದ್ರವಾಗಿವೆ. ಹರಪನಹಳ್ಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು.ಸಿ ಮೊ.7760310203 ಮತ್ತು ಅರಸಿಕೆರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಸೀನಪ್ಪ ಮೊ.77690014043. ಜಿಲ್ಲಾ ವ್ಯಾಪ್ತಿಯ ಎಲ್ಲಾ ರೈತರು ಕೇಂದ್ರಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande