

ಕೊಪ್ಪಳ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಸಮಾಜದಲ್ಲಿ ಉನ್ನತಿ ಹೊಂದಬೇಕು ಎಂದು ಇರಕಲ್ ಗಡಾದ ಸಮಾಜ ಸೇವಕರಾದ ಮಾರುತಿ ತೋಟಗಂಟಿ ಹೇಳಿದರು.
ಅವರು ಶನಿವಾರದಂದು ಕೊಪ್ಪಳದ ಗವಿಮಠದ ಹತ್ತಿರವಿರುವ ಮಾಸ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಛದ್ಮ ವೇಷದಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ
ಒಂದು ಶಿಕ್ಷಣ ಸಂಸ್ಥೆ ಹುಟ್ಟುಹಾಕುವುದು ದೊಡ್ಠದೆನಲ್ಲಾ, ಆದರೆ ಅದರ ಹಿಂದೆ ಇರುವ ಪರಿಶ್ರಮ ಸಾಕಷ್ಟಿದೆ. ಈ ಒಂದು ಮಾಸ್ತಿ ಶಾಲೆ ಪ್ರಾರಂಭವಾಗಬೇಕಾದರೇ ಹುಲಗಪ್ಪ ಕಟ್ಟಿಮನಿಯವರ ಸಾಕಷ್ಟು ಪರಿಶ್ರಮ ವಹಿಸಿ ಇಂದು ಈ ವಿದ್ಯಾ ಸಂಸ್ಥೆಯನ್ನು ಉನ್ನಿತಿಕರಿಸಿದ್ದಾರೆ ಎಂದರು.
ಯಾವ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿರಿತ್ತದೇಯೋ ಅಲ್ಲಿ ದೈರ್ಯವಂತ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿರುತ್ತದೆ. ಈ ಶಾಲೆಯ ವಿದ್ಯಾರ್ಥಿಗಳು ಇಂದು ವೇದಿಕೆ ಮೇಲೆ ಇಷ್ಟೋಂದು ಉತ್ಸಾಹಭರಿತರಾಗಿ ಮಾತನಾಡಿದ್ದನ್ನು ನೋಡಿದರೇ ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಹಗಲಿರಳು ಶ್ರಮಿಸುವುದು ಕಂಡು ಬರುತ್ತದೆ, ಇಂತಹ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮಾಜದಲ್ಲಿ ಗುರುತರ ಶಿಕ್ಷಣ ಪಡೆದು ಶಾಲೆಯ ಹಾಗೂ ಪಾಲಕರ ಕೀರ್ತಿ ತರುವಲ್ಲಿ ಶ್ರಮಿಸಬೇಕು ಎಂದು ಕಿವಿ ಮಾತನ್ನು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಕರ ವರ್ತನೆಯ ಮೇಲೆ ಅವಲಂಭಿತರಾಗಿರುತ್ತಾರೆ ಆದ್ದರಿಂದ ಶಿಕ್ಷಕರಾದರವರು ಮಕ್ಕಳಲ್ಲಿ ಯಾವ ಕೊರಗಿದೆ ಎನ್ನುವುದನ್ನು ಅವಲೋಕಿಸಿ ಮಕ್ಕಳಿಗೆ ಪಠ್ಯ ಭೋದನೆ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ, ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರ ಮುಖ್ಯ ಅಥಿತಿಗಳಾಗಿ ಆಗಮಿಸಿದ ತಿಗರಿ ಗ್ರಾಮ ಪಂಚಾಯತಿ ಸದಸ್ಯ ಗಣೇಶ ಪೂಜಾರ ಮಾತನಾಡಿ ಇಲ್ಲಿನ ಶಿಕ್ಷಕರು ಶಾಲೆಯ ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮ ನೀಡಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ ಎಂದು ಹೇಳಿದರು.
ನಂತರ ಶಾಲೆಯ ಆಡಳಿತ ಮಂಡಳಿ ಸಂಸ್ಥಾಪಕರಾದ ಹುಲಗಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಬಹಳ ವಿಶೇಷವಾದ ದಿನ ಅತಿಥಿಗಳನ್ನು ನಮ್ಮ ಶಾಲೆಗೆ ಯಾಕೆ ಕರೆಯುತ್ತೇವೆ ಎಂದರೇ ಅವರು ಹೇಳುವ ಹಿತ ನುಡಿಗಳಿಂದ ಮಕ್ಕಳಿಗೆ ಒಳ್ಳೆಯ ಸಂದೇಶ ನೀಡಲು ಸಹಕಾರಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಮೊದಲು ದೇಶದ ಬಗ್ಗೆ ಅಭಿಮಾನ ಹೊಂದಿದವರಾಗಬೇಕು, ಸಚ್ಚಾರಿತ್ರ್ಯ ಗುಣಗಳನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಕಾಲ ಯಾವಾಗಲೂ ಒಂದೇ ತರನಾಗಿರುತ್ತೆ ಅದು ಬದಲಾಗುವುದಿಲ್ಲಾ, ಆದರೆ ನಾವು ಸಚ್ಚಾರಿತ್ರ್ಯ ಪ್ರಾಮಾಣಿಕ ಗುಣಗಳಿಂದ ನಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರಾದ ವೀರಭದ್ರಪ್ಪ ನಾಯಕ, ಪತ್ರಕರ್ತರಾದ ಪಂಚಯ್ಯ ಹಿರೇಮಠ, ಉದಯ ತೋಟದ ಸೇರಿದಂತೆ ಶಾಲೆಯ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ವರ್ಗ, ಪೋಷಕರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್