ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ : ಕೆ.ಬಿ. ಗೋನಾಳ
ಮತ್ತೆ
ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ


ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ


ಕೊಪ್ಪಳ, 15 ನವೆಂಬರ್ (ಹಿ.ಸ.) :

ಆ್ಯಂಕರ್ : ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ 15ನೇ ದಿನದಲ್ಲಿ ಮುನ್ನೆಡೆದ ಬಲ್ಡೋಟ ಒಳಗೊಂಡು ಕಾರ್ಖಾನೆ ವಿಸ್ತರಣೆ ವಿರೋಧಿಸಿ, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಹಾಗೂ ತಾಲೂಕು ಹೂಗಾರ ಯುವಕ ಸಂಘ ಬೆಂಬಲಿಸಿದವು.

ಧರಣಿಗೆ ಇವರನ್ನು ಸ್ವಾಗತ ಮಾಡಿ ಎಂಎಸ್ಪಿಎಲ್ ಕಂಪನಿಯ ಉದ್ಯೋಗಿಗಳೆ ನಿನ್ನೆ ರೈತರ ವೇಶದಲ್ಲಿ ಬೀದಿಗಿಳಿದರು.

ಕಂಪನಿ ಮ್ಯಾನೇಜರುಗಳೇ ಕ್ಯಾಮರಾಮನ್ ಆಗಿದ್ದರು. ಪತ್ರಕರ್ತರು ನೀವು ಯಾವ ಪತ್ರಿಕೆ ಎಂದು ಕೇಳುತ್ತಲೇ ಅಲ್ಲಿಂದ ಪರಾರಿ ಆದರು.

2011ರಿಂದ ಬಲ್ಡೋಟ ಆರಂಭವಾಗಿದ್ದರೂ ಭೂ-ನಿರಾಶ್ರಿತ ರೈತರ ಕುಟುಂಬಕ್ಕೆ ಉದ್ಯೋಗ ಕೊಟ್ಟಿಲ್ಲ. ಗವಿಶ್ರೀಗಳು ಬಲ್ಡೋಟ ಕಾರ್ಖಾನೆ ವಿಸ್ತರಣೆ ವಿರೋಧಿಸಿದ ನಂತರ ಬಾಧಿತರಿಗೆ ಮಾತನಾಡುವ ಧ್ವನಿ ಬಂದಿದೆ. ಈ ನೆಲದ ನಮ್ಮ ಸಂವಿಧಾನದತ್ತ ಹಕ್ಕುಗಳನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ. ಯಾವುದೇ ಅಧಿಕಾರಿ, ರಾಜಕಾರಣಿಗಳನ್ನು ಕಂಪನಿ ಖರೀದಿ ಮಾಡಬಹದು, ನಗರ ಮತ್ತು ಬಾಧಿತರನ್ನು, ಜನ ಸಾಮಾನ್ಯರನ್ನು ಖರೀದಿಸಲು ಸಾಧ್ಯವಿಲ್ಲ. ದುಃಸ್ಸಾಹಸ ಮಾಡುವ ಕಂಪನಿ ನಗರದ ಜನರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕಾರ್ಮಿಕ ಮುಖಂಡ ಕೆ.ಬಿ.ಗೋನಾಳ ಆಕ್ರೋಶ ವ್ಯಕ್ತಪಡಿಸಿದರು.

ಹೂಗಾರ ಯುವಕ ಸಂಘದ ಅಧ್ಯಕ್ಷ ಸತೀಶ ಹೂಗಾರ ಮಾತನಾಡುತ್ತ, ಇಲ್ಲಿ ನಗರ ಬೆಳೆಯಲು ಈ ಕಾರ್ಖಾನೆ ಅಡ್ಡಿಯಾಗಿದೆ. ಪೂರ್ವ ಭಾಗದಲ್ಲಿ ಅರ್ಧ ಬೆಲೆಗೆ ಸೈಟು ಕೇಳುತ್ತಿಲ್ಲ. ಆ ಭೂಮಿ ಬೀಳಾದರೆ ಮತ್ತೆ ಕಾರ್ಖಾನೆಗೆ ಸೈಟು ಮಾರಿ ಹೋಗಬೇಕಾಗುತ್ತದೆ. ಆಗ ನಗರದಲ್ಲಿ ಜನರಿಲ್ಲದಿದ್ದರೆ ನಮ್ಮ ಹೂ ಖರೀದಿ ಮಾಡುವವರು ಯಾರೂ ಇರೋದಿಲ್ಲ. ನಮ್ಮ ಪ್ರಬಲ ಬೆಂಬಲವನ್ನು ಗವಿಶ್ರೀಗಳು ನಡೆಸಿದ ಹೋರಾಟಕ್ಕೆ ಧಾರೆ ಎರೆದಿದ್ದೇವೆ, ಈ ಹೋರಾಟ ರಾಜಕಾರಣಿಗಳು ಮೌನವಹಿಸಿದಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ಮಹಾಸಭಾ ರಾಜ್ಯ ಉಪಾಧ್ಯಕ್ಷ ಗವಿ ಹೂಗಾರ ರಾಜ್ಯ ಮಟ್ಟದಿಂದ ಈ ಹೋರಾಟಕ್ಕೆ ಬೆಂಬಲ ಪಡೆಯೋಣ ಎಂದರು.

ಧರಣಿ ನೇತೃತ್ವವನ್ನು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರು ಹೂಗಾರ ಸಂಘದ ಪದಾಧಿಕಾರಿಗಳಿಗೆ ಸತ್ಯಾಗ್ರಹವನ್ನು ಬೆಂಬಲಿಸಿದ್ದಕ್ಕಾಗಿ ಅಭಿನಂದನೆಗಳನ್ನು ಹೇಳಿದರು.

ಹೋರಾಟದಲ್ಲಿ ಸಾಹಿತಿ ಡಿ.ಎಂ. ಬಡಿಗೆರ್, ಎ.ಎಂ. ಮದರಿ, ಶಿವಕುಮಾರ ಹೂಗಾರ, ಮಲ್ಲಪ್ಪ ಹೂಗಾರ, ಯಲ್ಲಪ್ಪ ಬಂಡಿ, ಮೂಕಪ್ಪ ಮೇಸ್ತ್ರಿ, ಪ್ರಕಾಶ ಹೊಳೆಯಪ್ಪನವರ, ಭೀಮಸೇನ ಕಲಕೇರಿ, ಮುತ್ತಪ್ಪ ಹೂಗಾರ, ಹನುಮೇಶ ಹೂಗಾರ, ಹನುಮಂತಪ್ಪ ಗೊಂದಿ, ಎಂ.ಕೆ.ಸಾಹೇಬ್, ಶೋಭಾ ಪೂಜಾರ, ಪಾರ್ವತಿ ಕೊನಸಾಗರ, ಸಾವಿತ್ರಿ ಪರಾಪುರ, ನಾಗರತ್ನ ಎಸ್.ಪಿ. ಗಂಗಮ್ಮ ಕವಲೂರು, ದೇವಪ್ಪ ಹೂಗಾರ, ವೀರೇಶ ಹೂಗಾರ, ಗವಿಸಿದ್ದಪ್ಪ ಹೂಗಾರ, ಶಿವಾನಂದಪ್ಪ ಹೂಗಾರ, ಮುದಕಪ್ಪ ಹೊಸಮನಿ, ಬಸವರಾಜ ಶೀಲವಂತರ, ಸುಂಕಪ್ಪ ಮೀಸಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಎಸ್.ಮಾವಿನಮಡು, ಚನ್ನಬಸಪ್ಪ ಅಪ್ಪಣ್ಢವರ, ಹೇಮರಾಜ ವೀರಾಪೂರ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande