ಅಂಗನವಾಡಿ ಕೇಂದ್ರದಲ್ಲಿ 33 ವರ್ಷ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ ಅವರಿಗೆ ಗೌರವ
ಬಳ್ಳಾರಿ, 14 ನವೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಲಾಲಾಕಮಾನ್ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಅವರನ್ನು ಶುಕ್ರವಾರ ಗೌರವಿಸಿ, ಅಭಿನಂದಿಸಲಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ತಮ್ಮ ವ್ಯಾಪ
ಅಂಗನವಾಡಿ ಕೇಂದ್ರದಲ್ಲಿ 33 ವರ್ಷ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ ಅವರಿಗೆ ಗೌರವ


ಬಳ್ಳಾರಿ, 14 ನವೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಲಾಲಾಕಮಾನ್ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಅವರನ್ನು ಶುಕ್ರವಾರ ಗೌರವಿಸಿ, ಅಭಿನಂದಿಸಲಾಯಿತು.

ಮಕ್ಕಳ ದಿನಾಚರಣೆ ಪ್ರಯುಕ್ತ ತಮ್ಮ ವ್ಯಾಪ್ತಿಯ ಕೇಂದ್ರದಲ್ಲಿರುವ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಸಿಹಿಯನ್ನು ಹಂಚಿ ಮಕ್ಕಳ ದಿನಾಚರಣೆಯ ಶುಭ ಕೋರಿದರು.

ಮಾಜಿ ಸಿಆರ್‍ಪಿ ಅಂಜನಿ ಅವರು, ವಿಜಯಲಕ್ಷ್ಮಿ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ 33 ವರ್ಷಗಳ ಕಾಲ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅಂಗನವಾಡಿಯ ಮಕ್ಕಳಿಗೆ ಉತ್ತಮ, ಗುಣಮಟ್ಟದ ಸೇವೆಯನ್ನು ನೀಡಿ ಶಿಸ್ತಿನಿಂದ ಬೆಳೆಸಿದ್ದಾರೆ ಎಂದರು.

ಶಿಕ್ಷಕೀಯರಾದ ವೀರಮ್ಮ ಬಿ. ಹಿರೇಮಠ್, ಮೆಹ್ಜಬಿನ್ ಫಾತಿಮಾ, ವೈ. ವೆಂಕಟಲಕ್ಷ್ಮಿ, ಬಾಬಕ್ಕ, ಗೌಸಿಯಾ ಬೇಗಂ, ಅಶ್ವಿನ್, ಮುಲ್ಲಾ ಸಾಬ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande