
ಕೋಲಾರ, ೧೪ ನವಂಬರ್ (ಹಿ.ಸ.) :
ಆ್ಯಂಕರ್ : ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ನ್ಯಾಯವಾದಿಗಳಾದ ದಿವಂಗತ ಮುನಿಸ್ವಾಮಿಗೌಡ ಮತ್ತು ದಿವಂಗತ ರಾಮಾದೇವಿ ರವರುಗಳ ನೆನಪಿಗಾಗಿ ಕಲಿಕಾ ಪರಿಕರಗಳ ವಿತರಿಸಲಾಯಿತು.
ವಿಶ್ರಾಂತಿ ನ್ಯಾಯಧೀಶರಾದ ಎನ್ ಎಸ್ ಸಂತೋಷ್ ಹೆಗ್ಡೆ ರವರು ಕಲಿಕಾ ಪರಿಕರಗಳ ವಿತರಿಸಿ ಮಾತನಾಡಿ ನಾನು ಹಲವು ಹುದ್ದೆಗಳನ್ನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಲೋಕಾಯುಕ್ತನಾದ ಬಳಿಕ ಅನೇಕ ಭ್ರಷ್ಟಗಳನ್ನು ಕಂಡೆ, ಇದು ವ್ಯಕ್ತಿಗಳಿಂದ ನಡೆದ ತಪ್ಪಲ್ಲ ಬದಲಿಗೆ ವ್ಯವಸ್ಥೆ ಮತ್ತು ಮನಸ್ಥಿತಿಯಿಂದಾಗುವ ತಪ್ಪಾಗಿದೆ. ನ್ಯಾಯಾಲಯದ ಶಿಕ್ಷೆಗೆ ಇತ್ತೀಚೆಗೆ ಯಾರು ಭಯಪಡುತ್ತಿಲ್ಲ. ಕಾರಣ ಆಗುತ್ತಿರುವ ಸಮಯ ವಿಳಂಬ. ಈ ನಿಟ್ಟಿನಲ್ಲಿ ನಾನು ಸಮಸ್ಯೆಗಳನ್ನು ಜನರ ಮುಂದಿಡುವ ಉದ್ದೇಶವನ್ನು ಹೊಂದು ನಿಮ್ಮ ಮುಂದೆ ನಿಂತಿದ್ದೇನೆ. ನಾನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಸಮಸ್ಯೆಗಳ ಅರಿವು ಜನರಲ್ಲಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಒಂದೊಂದು ದಶಕದಲ್ಲೂ ಒಂದೊಂದು ರೀತಿಯ ಹಗರಣಗಳನ್ನು ಕಂಡಿದ್ದೇನೆ. ಸಾವಿರಗಳಿಂದ ಕೋಟಿಗಳ ವರೆಗೂ ಹಗರಣಗಳು ನಡೆದಿವೆ. ಹಗರಗಳಲ್ಲಿ ಕೊಳ್ಳೆ ಹೊಡೆದಿರುವ ಹಣದಿಂದ ಈ ದೇಶದ ಅಭಿವೃದ್ಧಿಯನ್ನು ಉತ್ತಮವಾಗಿ ಮಾಡಬಹುದಿತ್ತು. ಇದರ ಪರಿಣಾಮ ಜನರ ಮೇಲೆಯೇ ಬೀಳಲಿದೆ ಹಾಗೂ ದುರಾಸೆಗೆ ಜನರೇ ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಕ್ರಮವಾಗಿ ಮಾಡುವ ಹಣದಿಂದ ಯಾವುದೇ ಉಪಯೋಗವಿಲ್ಲ ದುಡಿದದಿಂದ ಶ್ರೀಮಂತರಾಗಿ ಎಂದು ಕಿವಿ ಮಾತು ಹೇಳಿದರು.
ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ಗಣ್ಯರು ವಿತರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರದ ನಟರಾಜ್, ವಕೀಲ ಶಿವಪ್ರಕಾಶ್ ಯುವ ವಿಜ್ಞಾ ಇತ್ತಲ ಮನಿ, ಸುನಂದ, ಸುರೇಶ, ವಕೀಲ ಸಂಘದ ಅಧ್ಯಕ್ಷ ಶ್ರೀನಿವಾಸ್, ನಿವೃತ್ತ ಶಿಕ್ಷಕ ಗೋಪಾಲಗೌಡ, ಬಿ ಇ ಓ ಮುನಿಲಕ್ಶ್ಮಯ್ಯ, ಇ ಸಿ ಓ ಸುಬ್ರಮಣಿ, ರಾಜ್ಯ ಉಪಾಧ್ಯಕ್ಷ ಸಂಪತ್ ಕುಮಾರ್, ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ವಿದ್ಯರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.
ಚಿತ್ರ : ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ನ್ಯಾಯವಾದಿಗಳಾದ ದಿವಂಗತ ಮುನಿಸ್ವಾಮಿಗೌಡ ಮತ್ತು ದಿವಂಗತ ರಾಮಾದೇವಿ ರವರುಗಳ ನೆನಪಿಗಾಗಿ ಕಲಿಕಾ ಪರಿಕರಗಳನ್ನು ವಿಶ್ರಾಂತಿ ನ್ಯಾಯಧೀಶರಾದ ಎನ್ ಎಸ್ ಸಂತೋಷ್ ಹೆಗ್ಡೆ ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್