ಬಿಜೆಪಿ ಬದ್ಧತೆಗೆ ಆಶೀರ್ವಾದಿಸಿದ ಬಿಹಾರಿಗಳಿಗೆ ಅಭಿನಂದನೆ : ಲಿಂಗರಾಜ ಪಾಟೀಲ
ಗದಗ, 14 ನವೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಅಭಿವೃದ್ಧಿ ಹಾಗು ಸುರಕ್ಷತೆಯ ವಿಷಯದಲ್ಲಿ ಬಿಜೆಪಿ ಹೊಂದಿರುವ ಬದ್ಧತೆಗೆ ಚುನಾವಣೆ ಫಲಿತಾಂಶದ ಮೂಲಕ ಆಶೀರ್ವಾದಿಸಿ ಐತಿಹಾಸಿಕ ಗೆಲುವಿಗೆ ಕಾರಣರಾದ ಸಮಸ್ತ ಬಿಹಾರ ಜನತೆಗೆ ಅಭಿನಂದನೆಗಳು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲ
ಫೋಟೋ


ಗದಗ, 14 ನವೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಅಭಿವೃದ್ಧಿ ಹಾಗು ಸುರಕ್ಷತೆಯ ವಿಷಯದಲ್ಲಿ ಬಿಜೆಪಿ ಹೊಂದಿರುವ ಬದ್ಧತೆಗೆ ಚುನಾವಣೆ ಫಲಿತಾಂಶದ ಮೂಲಕ ಆಶೀರ್ವಾದಿಸಿ ಐತಿಹಾಸಿಕ ಗೆಲುವಿಗೆ ಕಾರಣರಾದ ಸಮಸ್ತ ಬಿಹಾರ ಜನತೆಗೆ ಅಭಿನಂದನೆಗಳು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಹರ್ಷ ವ್ಯೆಕ್ತಪಡಿಸಿದ್ದಾರೆ.

ಕಳೆದ 50-60 ವರ್ಷಗಳಿಂದ ಬಿಹಾರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು, ಕಾಂಗ್ರೆಸ್ ನೇತೃತ್ವ ಅಥವಾ ಅವರ ಸಹಯೋಗಿ ಪಕ್ಷಗಳ ಆಡಳಿತ ಬಡವರ ಕಲ್ಯಾಣವನ್ನ ಮಾಡದೆ ಉಳ್ಳವರ ಪರವಾಗಿದ್ದವಲ್ಲದೇ ಗುಂಡಾರಾಜ್ಯವನ್ನಾಗಿ ಮಾರ್ಪಡಿಸಿದ್ದು ಬಿಹಾರಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ 10-15 ವರ್ಷಗಳಲ್ಲಿ ಬಿಜೆಪಿ ಜೊತೆಗೂಡಿದ ನಿತೀಶ ಹಾಗು ಮತ್ತಿತರರ ಏನ್ ಡಿ ಎ ಮೈತ್ರಿಕೋಟ ಸರ್ಕಾರ ಪ್ರಾಮಾಣಿಕ ಸುಶಾಸನ ಮಾಡಿದ್ದರಿಂದಲೇ ಇವತ್ತು ಈ ಫಲಿತಾಂಶ ಬರಲು ಸಾಧ್ಯವಾಗಿದೆ.

ಕಾಂಗ್ರೆಸ್ ನೇತೃತ್ವದ ಮಹಾ ಘಟಬಂದನ್ ಬಿಹಾರದಲ್ಲಿ ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ,ಉಚಿತ ವಿದ್ಯುತ್, 500 ರೂಗಳಿಗೆ ಗ್ಯಾಸ ಸಿಲಂಡರ, ಪ್ರತಿ ತಿಂಗಳು 2500 ರೂ ಮಹಿಳೆಯರಿಗೆ ಗ್ಯಾರಂಟಿಯನ್ನ ಘೋಷಣೆ ಮಾಡಿದ್ದರು ಕೂಡಾ ಬಿಹಾರದ ಜನತೆ ಇವರ ಯಾವ ಆಮಿಷಗಳಿಗೂ ಬಲಿಯಾಗದೆ ಪ್ರಭುದ್ದತೆಯನ್ನ ಮೆರೆದದ್ದು ಪ್ರಸಂಶನೀಯ. ಏನ್ ಡಿ ಎ ಮೈತ್ರಿಕೂಟವು ಪ್ರತಿಶತ 50 ಕ್ಕಿಂತ ಹೆಚ್ಚು ಮತಗಳಿಸುವ ಮೂಲಕ ವಿಸ್ವಾಸ ಸಾಬೀತುಪಡಿಸಿದ್ದು, ಬಿಜೆಪಿ ತಾನು ಸ್ಪರ್ಧಿಸಿದ ಸ್ಥಾನಗಳಲ್ಲಿ ಶೇ 70 ರಷ್ಟನ್ನು ತನ್ನದಾಗಿಸಿಕೊಂಡಿದೆ.

ಸದರಿ ಜಯಕ್ಕೆ ಕಾರಣರಾದ ಪ್ರಧಾನಿ ಮೋದೀಜಿ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ದಾ, ಗ್ರಹಮಂತ್ರಿ ಅಮಿತ್ ಶಾ, ಮುಖ್ಯಮಂತ್ರಿ ನಿತೀಶಕುಮಾರ್ ಹಾಗು ಮೈತ್ರಿಕೂಟದ ಎಲ್ಲ ನಾಯಕರಿಗೂ ಅಭಿನಂದನೆಗಳು ಎಂದು ಲಿಂಗರಾಜ ಪಾಟೀಲ ಮಲ್ಲಾಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande