ವಿಜಯಪುರ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಆರ್ ಹಿತೇಂದ್ರ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2025 ಸೆಪ್ಟೆಂಬರ್ 16ರಂದುವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಎಸ್‌ಬಿಐ ಬ್ಯಾಂಕ್ ನಡೆದಿತ್ತು. ಇನ್ನು ಬಿಹಾರ ರಾಜ್ಯದ ರಾಕೇಶಕುಮಾರ ಸಹಾನಿ, ರಾಜಕುಮಾರ ಪಾಸ್ವಾನ, ರಕ್ಷಕಕುಮಾರ್ ಮಾತೋ ಬಂಧಿತ ಆರೋಪಿಗಳು.
ಮೂವರು 21 ರಿಂದ 22 ವಯಸ್ಸಿನ ಯುವಕರು ಆಗಿದ್ದಾರೆ. ಬಂಧಿತ ಮೂವರು ಆರೋಪಿಗಳು ಅಕ್ರಮವಾಗಿ ಪಿಸ್ತೂಲ್ ಪೂರೈಕೆ ಹಾಗೂ ಕೃತ್ಯಕ್ಕೆ ಸಹಕಾರ ಹಿನ್ನೆಲೆ ಬಿಹಾರ ರಾಜ್ಯಕ್ಕೆ ತೆರಳಿ ಬಂಧನ ಮಾಡಲಾಗಿದೆ ಎಂದರು.
ಪ್ರಕರಣದಲ್ಲಿ ಇಲ್ಲಿಯವರೆಗೂ 9.1 ಕೆಜಿ ಚಿನ್ನ, 86,31,220 ನಗದು ಜಪ್ತಿಗೈಯಲಾಗಿದೆ. ಮಹಾರಾಷ್ಟ್ರ ರಾಜ್ಯದ ಪ್ರಮುಖ ಆರೋಪಿಯನ್ನು 7-10-20025 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟು ಚಡಚಣ ಬ್ಯಾಂಕ್ ದರೋಡೆಯಲ್ಲಿ ನಾಲ್ವರು ಬಂಧನ ಮಾಡಲಾಗಿದ್ದು, ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande