ಆಸ್ಟ್ರೇಲಿಯಾಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
ಕ್ಯಾನ್‌ಬೆರಾ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಇಂದು ಆಸ್ಟ್ರೇಲಿಯಾಕ್ಕೆ ಆಗಮಿಸಿದರು. ರಾಯಲ್ ಆಸ್ಟ್ರೇಲಿಯನ್ ವಾಯುಪಡೆ ನೆಲೆಯಲ್ಲಿ ಅವರಿಗೆ ಆತ್ಮೀಯ ಹಾಗೂ ಭವ್ಯ ಸ್ವಾಗತ ನೀಡಲಾಯಿತು. ಸಿಂಗ್ ಅವರು ತಮ್ಮ ಸಾಮಾಜಿಕ ಜ
Visit


ಕ್ಯಾನ್‌ಬೆರಾ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಇಂದು ಆಸ್ಟ್ರೇಲಿಯಾಕ್ಕೆ ಆಗಮಿಸಿದರು. ರಾಯಲ್ ಆಸ್ಟ್ರೇಲಿಯನ್ ವಾಯುಪಡೆ ನೆಲೆಯಲ್ಲಿ ಅವರಿಗೆ ಆತ್ಮೀಯ ಹಾಗೂ ಭವ್ಯ ಸ್ವಾಗತ ನೀಡಲಾಯಿತು.

ಸಿಂಗ್ ಅವರು ತಮ್ಮ ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಮ್’ ಮೂಲಕ ಬರೆದು, “ಕ್ಯಾನ್‌ಬೆರಾದಲ್ಲಿರುವ ರಾಯಲ್ ಆಸ್ಟ್ರೇಲಿಯನ್ ವಾಯುಪಡೆ ನೆಲೆಗೆ ನಾನು ಆಗಮಿಸಿದಾಗ, ಆಸ್ಟ್ರೇಲಿಯಾದ ಸಹಾಯಕ ರಕ್ಷಣಾ ಸಚಿವ ಪೀಟರ್ ಖಲೀಲ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ನನ್ನ ಸ್ನೇಹಿತ, ಆಸ್ಟ್ರೇಲಿಯಾದ ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಅವರೊಂದಿಗೆ ನಡೆಯಲಿರುವ ದ್ವಿಪಕ್ಷೀಯ ಚರ್ಚೆಯನ್ನು ಎದುರು ನೋಡುತ್ತಿದ್ದೇನೆ,” ಎಂದಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಈ ಭೇಟಿ ಭಾರತ–ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಸ್ಥಾಪನೆಯ ಐದು ವರ್ಷಗಳನ್ನು ಆಚರಿಸುತ್ತಿರುವ ಸಮಯದಲ್ಲಿ ನಡೆಯುತ್ತಿರುವುದು ಐತಿಹಾಸಿಕ ಮಹತ್ವ ಹೊಂದಿದೆ. 2014ರ ನಂತರ ಭಾರತೀಯ ರಕ್ಷಣಾ ಸಚಿವರು ಆಸ್ಟ್ರೇಲಿಯಾಕ್ಕೆ ನೀಡುತ್ತಿರುವ ಇದು ಮೊದಲ9 ಭೇಟಿಯಾಗಿದೆ.

ಭೇಟಿಯ ಪ್ರಮುಖ ಅಂಶವೆಂದರೆ ರಾಜನಾಥ್ ಸಿಂಗ್ ಅವರ ಮತ್ತು ರಿಚರ್ಡ್ ಮಾರ್ಲೆಸ್ ಅವರ ದ್ವಿಪಕ್ಷೀಯ ಚರ್ಚೆಗಳು, ಸಿಡ್ನಿಯಲ್ಲಿ ನಡೆಯಲಿರುವ ವ್ಯಾಪಾರ ದುಂಡುಮೇಜು ಸಭೆ, ಹಾಗೂ ಎರಡೂ ರಾಷ್ಟ್ರಗಳ ಉದ್ಯಮ ಮುಖಂಡರ ಭಾಗವಹಿಸುವಿಕೆ. ಅಲ್ಲದೆ ಅವರು ಆಸ್ಟ್ರೇಲಿಯಾದ ಇತರ ರಾಷ್ಟ್ರೀಯ ನಾಯಕರನ್ನೂ ಭೇಟಿಯಾಗಲಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರಕ್ಷಣಾ ಸಂಬಂಧವು ಕಳೆದ ಕೆಲವು ವರ್ಷಗಳಲ್ಲಿ ಮಿಲಿಟರಿ ವಿನಿಮಯ, ಉನ್ನತ ಮಟ್ಟದ ಭೇಟಿಗಳು, ಕಡಲ ಸಹಕಾರ, ತರಬೇತಿ ಮತ್ತು ಸಂಯುಕ್ತ ವ್ಯಾಯಾಮಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಸ್ತಾರವಾಗಿದೆ. ಭೇಟಿಯ ಸಮಯದಲ್ಲಿ ಮೂರು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

2009ರಲ್ಲಿ ಎರಡು ದೇಶಗಳು ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರಾರಂಭಿಸಿದ್ದು, 2020ರಲ್ಲಿ ಅದನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಏರಿಸಲಾಯಿತು. ಬಹುತ್ವ, ವೆಸ್ಟ್‌ಮಿನಿಸ್ಟರ್ ಮಾದರಿಯ ಪ್ರಜಾಪ್ರಭುತ್ವ ಮತ್ತು ಕಾಮನ್‌ವೆಲ್ತ್ ಸಂಪ್ರದಾಯಗಳಂತಹ ಹಂಚಿಕೆಯ ಮೌಲ್ಯಗಳು ಎರಡೂ ದೇಶಗಳನ್ನು ಬಲವಾದ ಬಂಧದಿಂದ ಕೂಡಿವೆ.

ಇದಲ್ಲದೆ, ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಉಪಸ್ಥಿತಿ, ಪ್ರವಾಸೋದ್ಯಮ ಮತ್ತು ಕ್ರೀಡಾ ಸಂಬಂಧಗಳು ಈ ದೀರ್ಘಕಾಲೀನ ಜನರಿಂದ ಜನರಿಗೆ ಸಂಬಂಧವನ್ನು ಇನ್ನಷ್ಟು ಬಲಪಡಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande