ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಔಷಧಿಗಳನ್ನು ಬಳಸಿ : ಜಿಪಂ ಸಿಇಒ
ಬಳ್ಳಾರಿ, 06 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಎರಡರಿಂದ 5 ವರ್ಷದೊಳಗಿನ ಮಕ್ಕಳಿಗೆ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಔಷಧಿಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಎ
ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಔಷಧಿಗಳನ್ನು ಬಳಸಿ: ಜಿಪಂ ಸಿಇಒ


ಬಳ್ಳಾರಿ, 06 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಎರಡರಿಂದ 5 ವರ್ಷದೊಳಗಿನ ಮಕ್ಕಳಿಗೆ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಔಷಧಿಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ನಿವಾರಣೆಗಾಗಿ ನೀಡಿದ ಕೋಲ್ಡ್ರೀಫ್ ಸೀರಫ್ ಸೇವನೆಯಿಂದ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮಕ್ಕಳು ಮೃತಪಟ್ಟ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ತಿಳಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಔಷಧಿ ಕುರಿತು ನಿಗಾವಹಿಸುವಂತೆ ಮತ್ತು ಔಷಧಿ ಅಂಗಡಿಗಳ ಮಾರಾಟಗಾರರು ತಮ್ಮ ಬಳಿ ಇದ್ದಲ್ಲಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಮುಂಜಾಗ್ರತೆ ವಹಿಸಬೇಕು ಎಂದರು.

ಸರ್ಕಾರದ ಆದೇಶದಂತೆ ಸೆಕ್ಷನ್ 26(ಎ) ನ ಡ್ರಗ್ ಮತ್ತು ಕಾಸ್ಮೇಟಿಕ್ಸ್ ಆಕ್ಟ್ 1940 ( 23 ಆಪ್ 1940 ) ರ ಅನ್ವಯ 04 ವರ್ಷದೊಳಗಿನ ಮಕ್ಕಳಿಗೆ ಕ್ಲೋರೊಫೆನಿರಮೈನ್ ಮಲೇಟ್ ಹಾಗೂ ಫಿನೈಲ್‍ಫ್ರೀನೆ ಹೈಡ್ರೋಕ್ಲೋರೈಡ್ ಸಂಯೊಜಿತ ಸೀರಫ್‍ನ್ನು ನೀಡದಂತೆ ಹಾಗೂ ಜಿಲ್ಲೆಯಲ್ಲಿ ವಿತರಿಸದಂತೆ ಅಧಿಕಾರಿಗಳಿಗೆ ಹೇಳಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೋಲ್ಡ್ರೀಫ್ ಸೀರಫ್ ಔಷಧಿ ಸರಬರಾಜು ಆಗಿರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಕೆಮ್ಮಿನ ಸೀರಫ್ ಕುರಿತು ಇಲಾಖೆಯ ಸಿಬ್ಬಂದಿಯವರಿಂದ ಸಾರ್ವಜನಿಕರಿಗೆ ಜಿಲ್ಲೆಯಾದ್ಯಂತ ಜಾಗೃತಿ ನೀಡಲಾಗುತ್ತಿದ್ದು, ಆಸ್ಪತ್ರೆಗೆ ಬರುವ ಸಾರ್ವಜನಿಕರು ವೈದ್ಯರು ತಿಳಿಸುವ ಸಲಹೆಗಳಂತೆ ಔಷಧಿಗಳನ್ನು ಬಳಸಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande