ಭುವನೇಶ್ವರ, 6 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದುರ್ಗಾ ಪೂಜೆಯ ನಿಮಜ್ಜನ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದ ನಂತರ ಒಡಿಶಾದ ಕಟಕ್‌ನಲ್ಲಿ ಉದ್ವಿಗ್ನತೆ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಭಾನುವಾರ ರಾತ್ರಿ 10 ಗಂಟೆಯಿಂದ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 36 ಗಂಟೆಗಳ ಕರ್ಫ್ಯೂ ವಿಧಿಸಿದ್ದಾರೆ.
ಕರ್ಫ್ಯೂ ಅನ್ವಯವಾಗಿರುವ ಪ್ರದೇಶಗಳು ದರ್ಗಾ ಬಜಾರ್, ಮಂಗಳಬಾಗ್, ಪುರಿ ಘಾಟ್, ಲಾಲ್‌ಬಾಗ್, ಬಿದಾನಸಿ, ಮಾರ್ಕಟ್‌ನಗರ, ಸಿಡಿಎ ಹಂತ-II, ಜಗತ್‌ಪುರ ಸೇರಿದಂತೆ ಪ್ರಮುಖ ನಗರ ಭಾಗಗಳನ್ನು ಒಳಗೊಂಡಿವೆ.
ಪೋಲೀಸ್ ಆಯುಕ್ತ ಎಸ್. ದೇವದತ್ ಸಿಂಗ್ ಅವರು “ಶಾಂತಿ ಕದಡುವ ಅಥವಾ ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ಕಟಕ್‌ಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದು, ನಾಗರಿಕರು ವದಂತಿಗಳಿಗೆ ಒಳಗಾಗದೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.
ಒಡಿಶಾ ಸರ್ಕಾರ ಕಟಕ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ, ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಪ್ರಚೋದನಕಾರಿ ಸಂದೇಶಗಳ ಹರಡುವಿಕೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa