ಕವಿಗಳ ಕಣ್ಣಲ್ಲಿ ಡಾ. ಎಸ್.ಎಲ್. ಭೈರಪ್ಪ ಕವನ ವಾಚನ/ಪ್ರಬಂಧ ರಚನಾ ಅಭಿಯಾನ
ಬೆಂಗಳೂರು, 06 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ, ಚಿಂತಕರಾದ ಡಾ. ಎಸ್.ಎಲ್. ಭೈರಪ್ಪ ಕಾದಂಬರಿ ಲೋಕದ ಸೂಪರ್ ಸ್ಟಾರ್ ಆದವರು. 25ಕ್ಕೂ ಹೆಚ್ಚು ಕೃತಿಗಳ ಮೂಲಕ, ಕನ್ನಡ ಕಾದಂಬರಿ ಲೋಕಕ್ಕೆ, ಅವರು ಕೊಟ್ಟ ಕೊಡುಗೆ ಅಪಾರ. ಈ ದಿಸೆಯಲ್ಲಿ ಕವಿಗಳಿಗೆ ಒಂದು ಸುವರ್ಣ ಅವಕ
ಕವಿಗಳ ಕಣ್ಣಲ್ಲಿ ಡಾ. ಎಸ್.ಎಲ್. ಭೈರಪ್ಪ ಕವನ ವಾಚನ / ಪ್ರಬಂಧ ರಚನಾ ಅಭಿಯಾನ


ಬೆಂಗಳೂರು, 06 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ, ಚಿಂತಕರಾದ ಡಾ. ಎಸ್.ಎಲ್. ಭೈರಪ್ಪ ಕಾದಂಬರಿ ಲೋಕದ ಸೂಪರ್ ಸ್ಟಾರ್ ಆದವರು. 25ಕ್ಕೂ ಹೆಚ್ಚು ಕೃತಿಗಳ ಮೂಲಕ, ಕನ್ನಡ ಕಾದಂಬರಿ ಲೋಕಕ್ಕೆ, ಅವರು ಕೊಟ್ಟ ಕೊಡುಗೆ ಅಪಾರ. ಈ ದಿಸೆಯಲ್ಲಿ ಕವಿಗಳಿಗೆ ಒಂದು ಸುವರ್ಣ ಅವಕಾಶವನ್ನು “ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್” ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಯನ್ನು ಒದಗಿಸಿದೆ.

ದಿನಾಂಕ 16-10-2025 ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನ”ವನ್ನು ಹಮ್ಮಿಕೊಂಡಿದೆ. ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹಿರಿಯ ಐ.ಎ.ಎಸ್. ಅಧಿಕಾರಿಗಳಾದ ಡಾ. ಸಿ. ಸೋಮಶೇಖರ್‍ರವರು ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ “ಕವಿಗಳ ಕಣ್ಣಲ್ಲಿ ಡಾ. ಎಸ್.ಎಲ್. ಭೈರಪ್ಪ” ಕುರಿತು ಕವನ ವಾಚನ ಮತ್ತು ಭೈರಪ್ಪನವರ ಯಾವುದಾದರು ಒಂದು ಕೃತಿಗಳನ್ನು ಆರಿಸಿಕೊಂಡು, ವಿಮರ್ಶಾತ್ಮಕ ಪ್ರಬಂಧ ರಚಿಸಲು ಅವಕಾಶ ಕಲ್ಪಿಸಿದೆ.

ಕವಿತೆ/ಚುಟುಕು 20 ಸಾಲಿನೊಳಗಿದ್ದು, ಪ್ರಬಂಧ 4 ರಿಂದ 10 ಪುಟದೊಳಗೆ ಬರೆಯಬಹುದು. ದಿನಾಂಕ 10-10-2025 ರೊಳಗೆ ತಲುಪುವಂತೆ, ಕವಿಗಳು ಮತ್ತು ಲೇಖಕರು ತಮ್ಮ 2 ಭಾವಚಿತ್ರ, ಸಂಪೂರ್ಣ ಬಯೋಡಾಟಾ, ಓದುವ ಕವಿತೆ/ಪ್ರಬಂಧವನ್ನು ಡಿಟಿಪಿ ಮಾಡಿಸಿ, 500 ರೂ.ಗಳ ಪ್ರವೇಶ ಶುಲ್ಕದೊಂದಿಗೆ ಅಂಚೆ/ಕೊರಿಯರ್‍ನಲ್ಲಿ ಕಳುಹಿಸಬೇಕು.

(ಫೋನ್‍ಪೇ ನಂಬರ್ 9035396625 - ಸುಹಾಸ್ ಸುರ್ವೆ ಆರ್.) ಅವಕಾಶ ಪಡೆದ ಎಲ್ಲಾ ಕವಿಗಳಿಗೆ ಮತ್ತು ಲೇಖಕರಿಗೆ “ಕರ್ನಾಟಕ ಕಾವ್ಯಭೂಷಣ” ಅಥವಾ “ಕರುನಾಡ ಕಣ್ಮಣಿ” ರಾಜ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. (ಸೂಚನೆ : ವಾಟ್ಸಾಪ್ ಮೂಲಕ ಕಳುಹಿಸುವ ಕವನ/ಪ್ರಬಂಧವನ್ನು ಪರಿಗಣಿಸುವುದಿಲ್ಲ)

ಹೆಚ್ಚಿನ ಮಾಹಿತಿಗಾಗಿ ರಮೇಶ ಸುರ್ವೆ ರಾಷ್ಟ್ರಾಧ್ಯಕ್ಷರು, ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್, ನಂ. 468, 13ನೇ ಮುಖ್ಯರಸ್ತೆ, 3ನೇ ಹಂತ, ಮಂಜುನಾಥನಗರ, ಬೆಂಗಳೂರು - 560010. ಮೊಬೈಲ್ : 9845307327 ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande