ವಿಜಯಪುರ, 06 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ತುಮಕೂರಿನ ಅರಕೇರ ಗ್ರಾಮದ ಅಂದಾಜು 51 ವರ್ಷ ವಯಸ್ಸಿನ ಗಿರೀಶ ಮಧುಕರ ರಾವ್ ಜಹಾಗೀರದಾರ ಎಂಬ ವ್ಯಕ್ತಿಯು ವಿಜಯಪುರ ನಗರದ ಬಸವೇಶ್ವರ ವೃತ್ತದ ಹತ್ತಿರ ಮೃತ ಹೊಂದಿ ಪತ್ತೆಯಾಗಿದ್ದು, ಈ ಕುರಿತು ವಿಜಯಪುರ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ವಿಜಯಪುರ ಗಾಂಧಿಚೌಕ ಪೊಲೀಸ್ ಠಾಣೆ ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಪತ್ತೆಯಾದ ವ್ಯಕ್ತಿಯು 5.4 ಫೂಟ್ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಉದ್ದನೆಯ ಮುಖ, ಬೊಕ್ಕ ತಲೆ, ಬಿಳಿ ಗಡ್ಡ ಹೊಂದಿದ್ದು, ಬೂದು ಬಣ್ಣ ಮತ್ತು ಕಂದು ಬಣ್ಣದ ಟೀ ಶರ್ಟ್ ಮತ್ತು ಕೆಂಪು ಬಣ್ಣದ ಲುಂಗಿ ಧರಿಸಿರುತ್ತಾನೆ.
ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ವಿಜಯಪುರ ಗಾಂಧಿಚೌಕ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande