ವಿಜಯಪುರ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ತಿಕೋಟಾ ರಹವಾಸಿಯಾಗಿರುವ 93 ವರ್ಷದ ಖಾಜಾಸಾಬ ತಂದೆ ರಸೂಲಸಾಬ ಮಂಡೆ ಎಂಬ ವ್ಯಕ್ತಿಯು ಸೆ.15ರಿಂದ ಕಾಣೆಯಾಗಿರುವ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿ ಪತ್ತೆಗೆ ಠಾಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ವ್ಯಕ್ತಿಯು 5.8ಅಡಿ ಎತ್ತರ, ಮೈಯಿಂದ ತೆಳ್ಳಗೆ, ಉದ್ದನೆಯ ಮುಖ, ಚೂಪ ಮೂಗು ಸಾದಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕೈಯಲ್ಲಿ ಬಡಿಗೆ, ಕನ್ನಡಕ ಧರಿಸಿದ್ದು, ನೀಲಿ ಬಣ್ಣದ ಫುಲ್ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ ಭಾಷೆ ಬಲ್ಲವನಾಗಿದ್ದಾರೆ.
ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲಿ ಸಾರ್ವಜನಿಕರು ತಿಕೋಟಾ ಪೊಲೀಸ್ ಠಾಣೆ ದೂ: 08352-231533, ಮೊ: 9480804248, ಗ್ರಾಮೀಣ ವೃತ್ತ ಸಿಪಿಐ ದೂ: 08352-251217, 9480804231, ಕಂಟ್ರೂಲ್ ರೂಂ ದೂ: 08352-250844 ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande