ಕೆರೆಯಲ್ಲಿ 10 ಅಡಿ ನೀರಿನ ಮಟ್ಟ ಇಳಿಕೆ : ಜಿಲ್ಲಾಧಿಕಾರಿ ಡಾ. ಆನಂದ.ಕೆ
ವಿಜಯಪುರ, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಕೆರೆಯ ಮುಂದಿರುವ ಕೃಷಿ ಜಮೀನುಗಳಿಗೆ ಮತ್ತು ಕೆರೆ ಏರಿಯ ಹಾನಿಯನ್ನು ತಡೆಯಲು ಮುನ್ನಚ್ಚರಿಕೆ ಕ್ರಮವಾಗಿ ಚಾನಲ್ ನಿರ್ಮಾಣ ಮಾಡಿ, ನೀರು ಹೊರಹಾಕಿರುವುದರಿಂದ ನೀರಿನ ಮಟ್ಟವು 10 ಅಡಿಗಳಷ್ಟು ಕಡಿಮೆಯಾಗಿದೆ. ಇನ್ನ
ಡಿಸಿ


ವಿಜಯಪುರ, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಕೆರೆಯ ಮುಂದಿರುವ ಕೃಷಿ ಜಮೀನುಗಳಿಗೆ ಮತ್ತು ಕೆರೆ ಏರಿಯ ಹಾನಿಯನ್ನು ತಡೆಯಲು ಮುನ್ನಚ್ಚರಿಕೆ ಕ್ರಮವಾಗಿ ಚಾನಲ್ ನಿರ್ಮಾಣ ಮಾಡಿ, ನೀರು ಹೊರಹಾಕಿರುವುದರಿಂದ ನೀರಿನ ಮಟ್ಟವು 10 ಅಡಿಗಳಷ್ಟು ಕಡಿಮೆಯಾಗಿದೆ. ಇನ್ನು ಮುಂದೆ ಯಾವುದೇ ಅಪಾಯ ಕಂಡುಬರುವುದಿಲ್ಲವೆಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೊರ್ತಿ ಕೆರೆಯನ್ನು 1972 ರಲ್ಲಿ ನಿರ್ಮಾಣ ಮಾಡಲಾಗಿದ್ದು.ಈ ಕೆರೆಯ ಸಾಮರ್ಥ್ಯವು 19.50 ಎಂ.ಸಿ.ಎಫ್.ಟಿ. ಇದ್ದು, ಕೆರೆಯ ವಿಸ್ತೀರ್ಣ 18 ಹೆಕ್ಟೆರ್ ಇರುತ್ತದೆ. ಏರಿಯ ಎತ್ತರ 11 ಮೀಟರ ಹಾಗೂ ಉದ್ದ 400 ಮೀ ಇದ್ದು, ಪ್ರಸ್ತುತ ಈ ಕೆರೆಯನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಇಲಾಖೆಯ ವತಿಯಿಂದ ಕೆರೆ ತುಂಬವ ಯೋಜನೆಯಡಿ ಕೆರೆ ತುಂಬಿಸಲಾಗಿರುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಈ ಕೆರೆಯ ಕೋಡಿಯಿಂದ ಸುಮಾರು ಒಂದು ತಿಂಗಳಿಂದ ನೀರು ಹರಿದು ಹೋಗಿರುತ್ತದೆ. ಸೆಪ್ಟೆಂಬರ 28 ಸಂಜೆ 7 ಗಂಟೆಗೆ ಕೆರೆಯ ಏರಿಯಾ 30 ಮೀಟರ ಉದ್ದದಷ್ಟು ಹಾಗೂ 0.30 ಮೀಟರದಷ್ಟು ಕುಸಿದಿರುವುದು ಕಂಡು ಬಂದಿರುತ್ತದೆ. ತದನಂತರ ಕೋಡಿಯನ್ನು ಇಳಿಸಲು ಸೆಪ್ಟೆಂಬರ 29 ರಂದು ಜೆಸಿಬಿ ಮತ್ತು ಹಿಟಾಚಿ ಬ್ರೇಕರ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಹಾಕಲು ಸತತ ಮೂರು ದಿನಗಳ ಕಾಲ ಕೆರೆಯಲ್ಲಿ ಎರಡು ಅಡಿಯಷ್ಟು ನೀರನ್ನು ಇಳಿಸಲಾಯಿತು. ಆದಾಗ್ಯೂ ಕೂಡಾ ಪ್ರತಿದಿನ ನೀರಿನ ಒತ್ತಡದಿಂದಾಗಿ ಕ್ರಮೇಣವಾಗಿ ಏರಿಯು ಕುಸಿಯುವುದು ಕಂಡುಬಂದಿರುತ್ತದೆ.

ಇದರಿಂದಾಗಿ ಅಕ್ಟೋಬರ 2 ರಂದು ಹೆಚ್ಚಿನ ಪ್ರಮಾಣದ ಏರಿಯ ಕುಸಿತ ಕಂಡ ಕಾರಣ ಹೊರ್ತಿ ಕೆರೆಯ ಕೆಳಭಾಗದಲ್ಲಿ ಒಟ್ಟು ಮೂರು ಕೆರೆಗಳಿದ್ದು, ಅವುಗಳು ಕೂಡಾ ಈಗಾಗಲೇ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಇಲಾಖೆಯ ವತಿಯಿಂದ ಭರ್ತಿ ಮಾಡಲಾಗಿರುತ್ತದೆ. ಈ ಕೆರೆಗಳಿಗೆ ಹಾನಿಯಾಗದಂತೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಕೆರೆಯ ಕೋಡಿಯಿಂದ ಸುಮಾರು 30 ಮೀಟರ ದೂರದಲ್ಲಿ ಹಾಗೂ ಕುಸಿತ ಕಂಡು ಬಂದ ಸ್ಥಳದಿಂದ 50 ಮೀಟರ ಅಂತರದಲ್ಲಿ ಕ್ರಮೇಣವಾಗಿ ನೀರನ್ನು ಹೊರಗೆ ಹಾಕಲು ಕೃತಕವಾಗಿ ಕೆರೆಯ ಏರಿಯಲ್ಲಿ ಚಾನಲ್ ನಿರ್ಮಾಣ ಮಾಡಿ ಹಂತ ಹಂತವಾಗಿ ನೀರನ್ನು ಹೊರಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande