ಕೊಪ್ಪಳ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಭೋದಕ ಆಸ್ಪತ್ರೆ ಕಿಮ್ಸ್, ಜಿಲ್ಲಾ ಆಯುಷ ಕ್ಲಿನಿಕ್ ಹಾಗೂ ಎನ್.ಸಿ.ಡಿ. ಕ್ಲಿನಿಕ್ ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಸುರಭಿ ವೃದ್ಧಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅಂಗವಾಗಿ ಸ್ಥಳೀಯ ಮತ್ತು ಜಾಗತಿಕ ಕ್ರಿಯೆಗೆ ಚಾಲನೆ ನೀಡುವ ಹಿರಿಯ ವ್ಯಕ್ತಿಗಳು: ನಮ್ಮ ಅಕಾಂಕ್ಷೆಗಳು, ನಮ್ಮ ಯೋಗಕ್ಷೇಮ, ನಮ್ಮ ಹಕ್ಕುಗಳು ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬೋಧಕ ಆಸ್ಪತ್ರೆ ಕಿಮ್ಸ್ನ ಜನರಲ್ ಮೆಡಿಸಿನ್ ವಿಭಾಗದ ಡಾ. ಸ್ವರಾಜಗೌಡ, ಆಯುಷ್ ವೈದ್ಯಾಧಿಕಾರಿ ಡಾ.ಸರ್ವಮಂಗಳ, ಜಿಲ್ಲಾ ಎನ್.ಸಿ.ಡಿ. ಸಂಯೋಜಕಿ ಡಾ.ಜಯಶ್ರೀ ಎಂ.ಎಚ್., ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಾನಂದ ವ್ಹಿ.ಪಿ ಅವರು ವೃದ್ಧರ ಆರೋಗ್ಯ, ವೈಯಕ್ತಿಕ ಸ್ವಚ್ಛತೆ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.
ಜಿಲ್ಲಾ ಆಸ್ಪತ್ರೆಯ ಎನ್.ಸಿ.ಡಿ ಕ್ಲಿನಿಕ್‌ನ ಆಪ್ತಸಮಾಲೋಚಕರಾದ ಶಿವಪುತ್ರಪ್ಪ, ಫಿಜಿಯೋಥೆರಪಿಸ್ಟ್ ಖಾಜಾ ಹುಸೇನ್, ತಂತ್ರಜ್ಞರಾದ ರೇಖಾ ಗುಬ್ಬಿ, ಶುಶ್ರೂಷಕ ಅಧಿಕಾರಿ ಮಲ್ಲೇಶಪ್ಪ, ಮಲ್ಪಿಸ್ಕಿಲ್ ವರ್ಕರ್ ವೀರೇಶ ಸೇರಿದಂತೆ ವೃದ್ದಾಶ್ರಮದ ಸಿಬ್ಬಂದಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಫಿಜಿಯೋಥೆರಪಿ ಕಾರ್ಯಾಗಾರವನ್ನು ಹಮ್ಮಿಕೊಂಡು ಹಿರಿಯ ನಾಗರಿಕರಿಗೆ ಚಿಕಿತ್ಸೆ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್