ರಾಯಚೂರು, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 01ರ 11 ಕೆವಿ ಹೊಸ ಲಿಂಕ್ ಲೈನ್ ಮಾರ್ಗ ಕಾಮಗಾರಿ ಮತ್ತು ಎಫ್5 ಎಫ್ 8 ಲೋಡ್ ಬೈಫರ್ ಕೇಷನ್ ನಿರ್ವಹಿಸುತ್ತಿರುವ ಪ್ರಯುಕ್ತ ಅಕ್ಟೋಬರ್ 06ರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಅಂದು ಬೆಳಿಗ್ಗೆ 11ಗಂಟೆಯಿಂದ ಏಗನೂರು ಟೆಂಪಲ್, ಆರ್.ಡಿ.ಎ ಲೇಔಟ್, ಕೃಷ್ಣದೇವರಾಯ ಕಾಲೋನಿ, ತಿರುಮಲ ಹಿಲ್ಸ್, ಸುಚಿತ್ರ ಕಾಲೋನಿ, ಆಶೀರ್ವಾದ ಕಾಲೋನಿ, ಟೌನ್ ಶಿಪ್, ನವೋದಯ ಇಂಜಿನೀಯರ್ ಕಾಲೇಜ್, ಸಿದ್ರಾಮಪೂರು, ಅಮರ್ಖೇಡ್ ಲೇಔಟ್, ಲಕ್ಷ್ಮಣ್ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಯಾಸಿನ್ ಜಿಮ್, ಕೆ.ಎಸ್‍ಆರ್.ಟಿ.ಸಿ ಬಸ್ ಡಿಪೆÇೀ-3, ಎ.ಎಮ್.ಇಡೆಂಟಲ್ ಕಾಲೇಜ್, ಮಾಣಿಕ್ ಪ್ರಭು ಲೇಔಟ್, ಮಾಣಿಕ್ ನಗರ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್, ಸರಕಾರಿ ಐ.ಟಿ.ಐ ಕಾಲೇಜ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 01ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್