ದಾವಣಗೆರೆ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದಾವಣಗೆರೆ ಎಸ್. ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್ ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ಇಸಿಜಿ ತಪಾಸಣಾ ಶಿಬಿರವನ್ನು ಅಕ್ಟೋಬರ್ 5ರಂದು ಆಯೋಜಿಸಿದೆ.
ಇತ್ತೀಚೆಗೆ ಒಂದೇ ದಿನದಲ್ಲಿ ೧೧,೭೮೬ ಮಹಿಳೆಯರಿಗೆ ಉಚಿತ ಇಸಿಜಿ ತಪಾಸಣೆ ಮಾಡುವ ಮೂಲಕ ದಾಖಲೆ ಮಾಡಿದ್ದ ನಾರಾಯಣ ಹೆಲ್ತ್ ಇದೀಗ ತನ್ನ ದಾವಣಗೆರೆಯ ಎಸ್. ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ಒಂದೇ ದಿನದಲ್ಲಿ ಸಾವಿರಕ್ಕೂ ಅಧಿಕ ಜನರ ಇಸಿಜಿ ತಪಾಸಣೆ ಮಾಡುವ ಧೇಯ್ಯದೊಂದಿಗೆ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.
ಈ ಶಿಬಿರವೂ ನಾಳೆ ಎಸ್. ಎಸ್. ಹಾಸ್ಪಿಟಲ್ ಸ್ಪೆಷಾಲಿಟಿ ಕ್ಲಿನಿಕ್, ಮೋದಿ ಕಾಂಪೌಂಡ್, ಗುಂಡಿ ಸರ್ಕಲ್ ಹತ್ತಿರ, ದಾವಣಗೆರೆಯಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೂ ನಡೆಯಲಿದ್ದು. ಇಸಿಜಿ ಅಲ್ಲದೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ತಪಾಸಣೆ ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಸಹ ಉಚಿತವಾಗಿರಲಿದ್ದು ಸಾರ್ವಜನಿಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ.ಮಲ್ಲೇಶ ಪಿ, ವ್ಯವಸ್ಥಾಪಕ ನಿರ್ದೇಶಕ ಸುನೀಲ ಭಂಡಾರಿಗಲ್ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa