ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಜಾಗೃತಿ ಸಭೆ
ರಾಯಚೂರು, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೌರ್ಜನ್ಯದಿಂದ ಮೃತಪಟ್ಟ ಪ್ರಕರಣಗಳಲ್ಲಿ ಮೃತರ ಕುಟುಂಬದ ಅವಲಂಬಿತರಿಗೆ ಸರ್ಕಾರದಿಂದ ನಿಯಮಾನುಸಾರ ಕೆಲವು ಸೌಲಭ್ಯಗಳು ಸಿಗುತ್ತವೆ ಎಂಬುದು ಬಹುತೇಕ ಜನತೆಗೆ ಅರಿವಿಲ್ಲ. ಆಯಾ ತಾಲೂಕಿನ ಅಧಿಕಾರಿಗಳು ಅಂತಹ ಕುಟುಂಬದ ಅವಲಂಬಿತರು, ಸಂತ್ರಸ್ತರಿಗೆ ಭೇಟಿ ಮಾಡ
ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಜಾಗೃತಿ ಸಭೆ


ರಾಯಚೂರು, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೌರ್ಜನ್ಯದಿಂದ ಮೃತಪಟ್ಟ ಪ್ರಕರಣಗಳಲ್ಲಿ ಮೃತರ ಕುಟುಂಬದ ಅವಲಂಬಿತರಿಗೆ ಸರ್ಕಾರದಿಂದ ನಿಯಮಾನುಸಾರ ಕೆಲವು ಸೌಲಭ್ಯಗಳು ಸಿಗುತ್ತವೆ ಎಂಬುದು ಬಹುತೇಕ ಜನತೆಗೆ ಅರಿವಿಲ್ಲ. ಆಯಾ ತಾಲೂಕಿನ ಅಧಿಕಾರಿಗಳು ಅಂತಹ ಕುಟುಂಬದ ಅವಲಂಬಿತರು, ಸಂತ್ರಸ್ತರಿಗೆ ಭೇಟಿ ಮಾಡಿ ಅವರಿಗೆ ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅ.4ರಂದು ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ದೌರ್ಜನ್ಯಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂಬುದು ಸಾಬೀತಾದಲ್ಲಿ ಅಂತಹ ಪ್ರಕರಣದಲ್ಲಿ ಮೃತನ/ಳ ಕುಟುಂಬದ ಅವಲಂಬಿತರು, ಸಂತ್ರಸ್ಥರಿಗೆ ಪರಿಹಾರ ಮತ್ತು ಸರ್ಕಾರಿ ನೌಕರಿ ಸಿಗುತ್ತದೆ ಎಂಬುದಾಗಿ ಅಧಿಕಾರಿಗಳು, ಮೃತರ ಕುಟುಂಬದ ಸಂತ್ರಸ್ಥರಿಗೆ ತಿಳಿಸಿ, ಮನವರಿಕೆ ಮಾಡಿ ಅವರಿಗೆ ದಾಖಲಾತಿ ಸಿದ್ದಪಡಿಸಲು, ಸಲ್ಲಿಸಲು ಮಾರ್ಗದರ್ಶನ ಮಾಡಬೇಕು. ಇಂತಹ ಪ್ರಕರಣದಲ್ಲಿ ಚಾರ್ಜಸೀಟ್ ಸಲ್ಲಿಕೆ ವಿಳಂಬವಾಗದಂತೆ ಜಿಲ್ಲಾ ಪೆÇಲೀಸ್ ಇಲಾಖೆಯ ಜೊತೆಗೆ ಸಮನ್ವಯ ಮಾಡಬೇಕು. ಈ ಬಗ್ಗೆ ಸಮಿತಿಯಲ್ಲಿರುವ ಸದಸ್ಯರು ಸಹ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರಾಯಚೂರು ಜಿಲ್ಲೆಯಲ್ಲಿ ದಾಖಲಾದ, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಒಂದು ತಿಂಗಳ ಅವಧಿಯ ಗಡುವು ವಿದಿಸಿದರು.

ರಾಯಚೂರ ಜಿಲ್ಲೆಯ ವಿವಿಧೆಡೆ ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಸಲ್ಲಿಕೆ ಮತ್ತು ಕೆಲ ಬಾಕಿ ಪ್ರಕರಣಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ವಿವರಿಸಿದರು.

ಜನತೆಗೆ ಜಾಗೃತಿ ಮೂಡಿಸಿ: ನಗರದ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣದ ಹತ್ತಿರದಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯದಲ್ಲಿ ಒಂದು ಮನೆಗೆ ಒಟ್ಟು 9 ಲಕ್ಷ ರೂ ಖರ್ಚಾಗುತ್ತದೆ. ಈ ಪೈಕಿ 3 ಲಕ್ಷ ರೂ.ವನ್ನು ಸರ್ಕಾರವೇ ಭರಿಸುತ್ತದೆ. ಎಸ್ಸಿಎಸ್ಟಿ ಜನರು ಇಂತಹ ವಸತಿ ಯೋಜನೆಯ ಲಾಭ ಪಡೆದುಕೊಳ್ಳಲು ಜನತೆಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಸ್ಲಂ ಪ್ರದೇಶದಲ್ಲಿ ವಾಸಿಸುವ ಎಸ್ಸಿ ಎಸ್ಟಿ ಜನರಿಗೆ ಈ ವಸತಿ ಯೋಜನೆಯ ಮನೆಗಳು ಸಿಗುವಂತಾಗಬೇಕು ಎಂದು ಸಮಿತಿಯ ಸದಸ್ಯರು ಸಲಹೆ ಮಾಡಿದರು.

ಸ್ಮಶಾನ ಜಾಗ ಸಂರಕ್ಷಿಸಿ: ಎಸ್ಸಿ ಎಸ್ಟಿ ಜನರಿಗೆ ಗುರುತಿಸಿದಸ್ಮಶಾನ ಜಾಗದ ಬಗ್ಗೆ ಸಮಿತಿಯ ಸದಸ್ಯರಾದ ರಘುವೀರ ನಾಯಕ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಸರ್ಕಾರವು ಸ್ಮಶಾನಕ್ಕೆ ಗುರುತಿಸಿದ ಜಮೀನು ಒತ್ತುವರಿಯಾಗದಂತೆ ಆಯಾ ಕಡೆಗಳಲ್ಲಿ ಸದ್ಯಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಕಲಿ ಜಾತಿ ಪತ್ರ ಸೃಷ್ಟಿಸಿದರೆ ಕ್ರಮ: ಒಬಿಸಿ, ಎಸ್ಸಿ, ಎಸ್ಟಿ ಯಾರೇ ಇರಲಿ ನೌಕರಿ ಮತ್ತು ಇನ್ನೀತರ ಕೆಲಸಕ್ಕಾಗಿ ಕಾನೂನು ಬಾಹೀರವಾಗಿ ನಕಲಿ ಜಾತಿಪತ್ರ ಸಿದ್ಧಪಡಿಸಿ ಸಲ್ಲಿಸುವುದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ, ಜಾತಿ ಪರಿಶೀಲನಾ ಸಮಿತಿಯಲ್ಲಿಟ್ಟು, ಪ್ರಾಥಮಿಕ ಹಂತದ ಪರಿಶೀಲನೆ ಬಳಿಕ ಸಂಬಂಧಿಸಿದ ವ್ಯಕ್ತಿಗಳ ಹೇಳಿಕೆ ದಾಖಲಿಸಲು ಅವರಿಗೆ ಕೋರ್ಟಗೆ ಹಾಜರಾಗಲು ತಿಳಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಐಎಎಸ್ ಪ್ರೊಬೇಷನರಿ ಅಧಿಕಾರಿ ಪುರುರಾಜ್ ಸಿಂಗ್, ನಾಮ ನಿರ್ದೇಶಿತ ಸದಸ್ಯರಾದ ರವೀಂದ್ರ ಜಲ್ದಾರ್, ಕೆ ಇ ಕುಮಾರ, ಹೇಮರಾಜ ಅಸ್ಕಿಹಾಳ, ರವಿಕುಮಾರ ಅಸ್ಕಿಹಾಳ, ಎನ್ ರಘುವೀರ ನಾಯಕ, ಪವನ್ ಕಿಶೋರ ಪಾಟೀಲ, ಬಸವರಾಜ ನಕ್ಕುಂದಿ, ಟಿ ಸುಧಾಮ ಸೇರಿದಂತೆ ವಿವಿಧ ಇಲಾಖೆಗಳ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande