ಬಸ್ ಲಾರಿ ಅಪಘಾತ ; ಹಲವರಿಗೆ ಗಂಭೀರ ಗಾಯ
ವಿಜಯಪುರ, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಹೊರವಲಯದಲ್ಲಿ ಲಾರಿಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಜಯಪುರದಿಂದ ಸಿಂದಗಿಗೆ ಹೋಗುವ ಮಾರ್ಗದ ಮಧ್ಯೆ ತುಕಾಲಿ ಡಾಬಾ ಹತ್ತಿರ ತಡರಾತ್ರಿ ಮೆಕ್ಕೆಜೋಳ ತುಂ
ಲಾರಿ


ವಿಜಯಪುರ, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ

ದೇವರಹಿಪ್ಪರಗಿ ಪಟ್ಟಣದ ಹೊರವಲಯದಲ್ಲಿ ಲಾರಿಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಜಯಪುರದಿಂದ ಸಿಂದಗಿಗೆ ಹೋಗುವ ಮಾರ್ಗದ ಮಧ್ಯೆ ತುಕಾಲಿ ಡಾಬಾ ಹತ್ತಿರ ತಡರಾತ್ರಿ ಮೆಕ್ಕೆಜೋಳ ತುಂಬಿಕೊಂಡು ಹೋಗುವ ಲಾರಿಗೆ ಕೆಎಸ್ಸಾರ್ಟಿಸಿ ಬಸ್(ವಿಜಯಪುರ ಡಿಪೋ-2) ಡಿಕ್ಕಿ ಹೊಡೆದು ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳಕ್ಕೆ ದೇವರಹಿಪ್ಪರಗಿ ಪೋಲಿಸರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ.

ಶಾಸಕ ಅಶೋಕ ಮನಗೂಳಿ ವಿಜಯಪುರದಿಂದ ಸಿಂದಗಿಗೆ ಬರುವ ಮಾರ್ಗದಲ್ಲಿ ಘಟನೆ ನಡೆದಿದ್ದು ಕಂಡು ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ವಿಜಯಪುರ, ಸಿಂದಗಿ ಹಾಗೂ ದೇವರಹಿಪ್ಪರಗಿ ಸರ್ಕಾರಿ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಕಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶಾಸಕರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವರಹಿಪ್ಪರಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande