ವಿಶೇಷ ಚೇತನ ನೌಕರರನ್ನು ಗಣತಿ ಕಾರ್ಯದಿಂದ ಕೈಬಿಡಲು ಬಿಜೆಪಿ ಒತ್ತಾಯ
ಬೆಂಗಳೂರು, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಸಮೀಕ್ಷೆಗೆ ರಾಜ್ಯದ ವಿಶೇಷ ಚೇತನ ನೌಕರರನ್ನೂ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ,ಮಾನವೀಯ ಸ್ಪಂದನೆಯಿಲ್ಲದ ಸರ್ಕಾರದ ಧೋರಣೆಯನ್ನು ಇದು ಪ್ರತಿಬಿಂಬಿಸಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡ
ವಿಶೇಷ ಚೇತನ ನೌಕರರನ್ನು ಗಣತಿ ಕಾರ್ಯದಿಂದ ಕೈಬಿಡಲು ಬಿಜೆಪಿ ಒತ್ತಾಯ


ಬೆಂಗಳೂರು, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಸಮೀಕ್ಷೆಗೆ ರಾಜ್ಯದ ವಿಶೇಷ ಚೇತನ ನೌಕರರನ್ನೂ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ,ಮಾನವೀಯ ಸ್ಪಂದನೆಯಿಲ್ಲದ ಸರ್ಕಾರದ ಧೋರಣೆಯನ್ನು ಇದು ಪ್ರತಿಬಿಂಬಿಸಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವಿಶೇಷ ಚೇತನ ನೌಕರರನ್ನು ಸಮೀಕ್ಷೆ ಕಾರ್ಯದಿಂದ ಕೈ ಬಿಟ್ಟು ಸಮೀಕ್ಷೆ ಸಂಬಂಧದ ಕಛೇರಿ ಕೆಲಸಗಳಿಗೆ ಬಳಸಿಕೊಳ್ಳಬಹುದಿತ್ತು, ಆದರೆ ವಿವೇಚನಾ ರಹಿತ ಆಡಳಿತ ವ್ಯವಸ್ಥೆಯಿಂದ ವಿಶೇಷ ಚೇತನ ನೌಕರರು ಸಂಕಷ್ಟಕ್ಕೆ ಸಿಲುಕಿರುವುದು ನಿಜಕ್ಕೂ ನೋವಿನ ಸಂಗತಿ, ಸರ್ಕಾರದ ಈ ನಡೆ ಖಂಡನೀಯ.

ಈ ಸಂಬಂಧ ಈಗಾಗಲೇ ಅಂಗವಿಕಲ ಸಂಘ, ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಈ ರೀತಿಯ ಅಪ್ರಬುದ್ಧ ನಡೆಯಿಂದ ಹಿಂದೆ ಸರಿದು ವಿಶೇಷ ಚೇತನ ನೌಕರರನ್ನು ಗಣತಿ ಕಾರ್ಯದಿಂದ ಕೈ ಬಿಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande