ವಿಜಯಪುರ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭೀಮಾ ನದಿಯ
ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಿಯೋಗ ಭೇಟಿ ನೀಡಿದರು. ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಭೇಟಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಶಾಸಕಿ ಶಶಿಕಲಾ ಜೊಲ್ಲೆ, ಸಂಸದರಾದ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ ಭೇಟಿ ನೀಡಿ ಜನತೆಯಿಂದ ಮಾಹಿತಿ ಪಡೆದುಕೊಂಡರು.
ಅಂಜುಟಗಿ ಗ್ರಾಮದ ತೋಟದಲ್ಲಿ ಮುಖಂಡರಿಗೆ ಹಾಲು ಕುಡಿಯಲು ನೀಡಿದರು. ಇನ್ನು ಮಾಧ್ಯಮಗಳ ಕ್ಯಾಮೆರಾ ಕಂಡು ಹಿಂಬದಿ ಕುಳಿತಿದ್ದ ಮುಖಂಡರಿಗೆ ಸಿ. ಟಿ. ರವಿ ಹಾಲು ನೀಡಿದರು.
ಬಿಜೆಪಿ ನಿಯೋಗಕ್ಕೆ ಹಾಲು, ಗೋಡಂಬಿ ದ್ರಾಕ್ಷಿ ವ್ಯವಸ್ಥೆ ಮಾಡಲಾಗಿತ್ತು. ಸಂತ್ರಸ್ತರ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ರೆ ಬಿಜೆಪಿ ನಿಯೋಗದ ತಂಡ ಹಾಲು, ಗೋಡಂಬಿ ದ್ರಾಕ್ಷಿ ಸವೆದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಗೈರು ಆಗಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande