

ಬಳ್ಳಾರಿ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಹಾಗೂ ವ್ಯಸನ ಮುಕ್ತ ಭಾರತದ ಸಂದೇಶವನ್ನು ಹರಡುವ ಉದ್ದೇಶದಿಂದ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ (ಬಿಐಟಿಎಂ), ಸಂಜಯ್ ಗಾಂಧಿ ಪಾಲಿಟೆಕ್ನಿಕ್ (ಎಸ್‍ಜಿಪಿ) ಹಾಗೂ ಬಳ್ಳಾರಿ ಬಿಸಿನೆಸ್ ಕಾಲೇಜು (ಬಿಬಿಸಿ) ಸಂಯುಕ್ತವಾಗಿ `ಯೂನಿಟಿ ಮಾರ್ಚ್ ಮತ್ತು ನಶಾ ಮುಕ್ತ ಭಾರತ್ ಅಭಿಯಾನ'ವನ್ನು ಬಳ್ಳಾರಿಯಲ್ಲಿ ಶುಕ್ರವಾರ ನಡೆಸಿವೆ.
ಏಕತಾ ಪ್ರತಿಜ್ಞೆಯಿಂದ ಆರಂಭವಾದ ನಡಿಗೆ, ಬಳ್ಳಾರಿ ನಗರದ ಸುಧಾಕ್ರಾಸ್‍ನಿಂದ ಫೈರ್ ಆಫೀಸ್‍ವರೆಗೆ ಮುಖ್ಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಏಕತಾ ಮೆರವಣಿಗೆ (ಯೂನಿಟಿ ಮಾರ್ಚ್) ನಡೆಸಿದರು. ದೇಶಭಕ್ತಿಯ ಘೋಷಣೆಗಳು ಮತ್ತು ವ್ಯಸನ ಮುಕ್ತ ಭಾರತದ ಸಂದೇಶಗಳನ್ನು ಒಳಗೊಂಡ ಫಲಕಗಳೊಂದಿಗೆ ವಿದ್ಯಾರ್ಥಿಗಳು ಸಾರಿದರು. ನೂರಾರು ವಿದ್ಯಾರ್ಥಿಗಳು, ಬೋಧಕ ಮತ್ತು ಸಿಬ್ಬಂದಿ ಈ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್