
ಬಳ್ಳಾರಿ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಾರಿಗೆ ಇಲಾಖೆಯ ಹಲವಾರು ಸೇವೆಗಳು ಆನ್‍ಲೈನ್‍ನಲ್ಲಿ ಲಭ್ಯವಿರುವ ಕಾರಣ ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯ ವಾಹನಗಳ ನೋಂದಣಿ, ವರ್ಗಾವಣೆ, ಲೈಸೆನ್ಸ್ ಮತ್ತು ಇತರೆ ಸೇವೆಗಳಿಗಾಗಿ ಎಂ-ಪರಿವಾಹನ್ ನಲ್ಲಿನ ವಾಹನ್-4, ಸಾರಥಿ-4 ತಂತ್ರಾಂಶದ ಮೂಲಕ ಪಡೆಯಬಹುದಾಗಿದೆ.
ಆನ್ ಲೈನ್ ನಲ್ಲಿ ಹಲವಾರು ಸೇವೆಗಳಿಗಾಗಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳ ಅಪ್ ಲೋಡ್, ನಿಗದಿತ ಶುಲ್ಕ, ತೆರಿಗೆಗಳನ್ನು ಪಾವತಿಸಿ ಮತ್ತು ಮೂಲ ದಾಖಲೆಗಳ ಸಹಿತ ಅಪ್ ಲೋಡ್ ಮಾಡಿ ಮೂಲ ಪ್ರತಿಗಳನ್ನು ಕಚೇರಿಗೆ ಸಲ್ಲಿಸಬೇಕು. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳನ್ನಾಗಲಿ ಅಥವಾ ಅನ್ಯ ವ್ಯಕ್ತಿಗಳನ್ನಾಗಲೀ ಸಂಪರ್ಕಿಸಬಾರದು.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಮುಖ್ಯಸ್ಥರು, ಅಧೀಕ್ಷಕರು ಹಾಗೂ ಇಲಾಖೆಉ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಎಸ್. ಶ್ರೀನಿವಾಸಗಿರಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್