ಸರ್ವ ಸಮ್ಮತ ಅಭ್ಯರ್ಥಿ ಮೇಯರ್, ಉಪ ಮೇಯರ್ ಆಗುತ್ತಾರೆ : ಶಾಸಕ ನಾರಾ ಭರತರೆಡ್ಡಿ
ಬಳ್ಳಾರಿ, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚಿಸುವ ಎಲ್ಲರೂ ಒಪ್ಪುವ, ಸರ್ವ ಸಮ್ಮತ ಅಭ್ಯರ್ಥಿಯೇ ಮೇಯರ್ ಮತ್ತು ಉಪ ಮೇಯರ್ ಆಗುತ್ತಾರೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ. ಬಳ್ಳಾರಿ ನಗರದ 23ನೇ ವಾರ್ಡಿನಲ್ಲಿ `ಮನೆ ಮನೆಗ
ಸರ್ವಾನುಮತದ ಅಭ್ಯರ್ಥಿ ಮೇಯರ್, ಉಪ ಮೇಯರ್ ಆಗುತ್ತಾರೆ: ಶಾಸಕ ನಾರಾ ಭರತರೆಡ್ಡಿ


ಸರ್ವಾನುಮತದ ಅಭ್ಯರ್ಥಿ ಮೇಯರ್, ಉಪ ಮೇಯರ್ ಆಗುತ್ತಾರೆ: ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚಿಸುವ ಎಲ್ಲರೂ ಒಪ್ಪುವ, ಸರ್ವ ಸಮ್ಮತ ಅಭ್ಯರ್ಥಿಯೇ ಮೇಯರ್ ಮತ್ತು ಉಪ ಮೇಯರ್ ಆಗುತ್ತಾರೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.

ಬಳ್ಳಾರಿ ನಗರದ 23ನೇ ವಾರ್ಡಿನಲ್ಲಿ `ಮನೆ ಮನೆಗೂ ಭರತ್ - ಸಲಾಂ ಬಳ್ಳಾರಿ' ಅಭಿಯಾನವನ್ನು ಶುಕ್ರವಾರದಿಂದ ಆರಂಭಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಪಕ್ಷದ ಹೈಕಮಾಂಡ್ ನಿರ್ಧರಿಸುವ ಎಲ್ಲರೂ ಒಪ್ಪುವ ಸರ್ವಾನುಮತದ ವ್ಯಕ್ತಿಯೇ ಮೇಯರ್ ಆಗುತ್ತಾರೆ. ಅಲ್ಪಸಂಖ್ಯಾತ ಸಮುದಾಯದವರು ಮೇಯರ್ ಹುದ್ದೆಯನ್ನು ಕೇಳುವುದರಲ್ಲಿ ತಪ್ಪೇನಿಲ್ಲ ಎಂದರು.

`ಮನೆ ಮನೆಗೂ ಭರತ್' ಅಭಿಯಾನದ ಅಂಗವಾಗಿ ನನ್ನ ಜನ್ಮ ದಿನದ ಹಿನ್ನೆಲೆಯಲ್ಲಿ ಬಳ್ಳಾರಿಯ 1.10 ಲಕ್ಷ ಮನೆಗಳಿಗೆ ಕಿಚನ್ ಕಿಟ್ ಅನ್ನು ಖುದ್ದಾಗಿಯೇ ಮನೆ ಮನೆಗೆ ಭೇಟಿ ನೀಡಿ ವಿತರಿಸುವೆ. ಈ ಮೂಲಕ ಮತದಾರರನ್ನು ಭೇಟಿ ಮಾಡಿದಂತೆ ಆಗುತ್ತದೆ ಅಲ್ಲದೇ, ನಗರ ಸಂಚಾರ ನಡೆಸಿದಂತೆ ಆಗಲಿದೆ ಎಂದರು.

ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ವಾರ್ಡಿನ ಪಾಲಿಕೆಯ ಸದಸ್ಯ ಪಿ. ಗಾದೆಪ್ಪ, ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯರಾದ ಮುಂಡ್ಲೂರು ಪ್ರಭಂಜನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್, ಸ್ಥಳೀಯ ಮುಖಂಡರಾದ ಸೋಮಣ್ಣ, ಗೌತಮ್, ವಿಜಯ್, ಮಹೇಂದ್ರ, ಶ್ರೀಕಾಂತ್, ಮಹಿಳಾ ಮುಖಂಡರಾದ ಪದ್ಮಾ, ಚಂಪಾ ಚವ್ಹಾಣ್, ಉದ್ಯಮಿ ಶ್ರೀಧರ್ ಸೇರಿದಂತೆ ಹಲವರು ಹಾಜರಿದ್ದರು.

ಸ್ಥಳೀಯರು ಸಮಸ್ಯೆಗಳ ಬಗ್ಗೆ ಶಾಸಕರಿಗೆ ಅಹವಾಲು ಸಲ್ಲಿಸಿದರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಶಾಸಕ ನಾರಾ ಭರತ್ ರೆಡ್ಡಿ ಸಮಸ್ಯೆ ಫರಿಹರಿಸುವಂತೆ ಸೂಚನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande