
ಗದಗ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಆಡಳಿತ ಗದಗ, ಜಿಲ್ಲಾ ಪಂಚಾಯತ್ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ. ಕರ್ನಾಟಕ ಮೇದುಳು ಆರೋಗ್ಯ ಉಪಕ್ರಮ ವಿಭಾಗ, ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮುಖ್ಯಸ್ಥರು ಜನರಲ್ ಮೆಡಿಸಿನ್ ಡಾ. ಸಂಗಮೇಶ ಅಸೂಟಿ ಅಧ್ಯಕ್ಷತೆಯಲ್ಲಿ ವಿಶ್ವ ಪಾರ್ಶ್ವವಾಯು ದಿನ-2025 ಅಂಗವಾಗಿ ಕಾರ್ಯಕ್ರಮ ಜರುಗಿತು,
ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ.ರಾಜೇಂದ್ರ. ಸಿ.ಬಸರಿಗಿಡದ ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಇವರು ಉದ್ಘಾಟಿಸಿ ಮಾತನಾಡಿ ಎಲ್ಲರಿಗೂ ವಿಶ್ವ ಪಾರ್ಶ್ವವಾಯು ದಿನ-2025 ಶುಭಾಶಯಗಳನ್ನು ತಿಳಿಸಿ ಇತ್ತಿಚಿನ ದಿನಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದ್ದು ಪಾರ್ಶ್ವವಾಯುದಿಂದ ಕುಟುಂಬ/ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದೆ ಉಳಿಯುತ್ತಿದೆ ಕಾರಣ ಪಾರ್ಶ್ವವಾಯುವಿನ ಲಕ್ಷಣಗಳನ್ನು ಬೇಗನೆ ಗುರ್ತಿಸಿ ಚಿಕಿತ್ಸೆ ಪಡೆಯುವಿಕೆ ಹಾಗೂ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಪಾರ್ಶ್ವವಾಯು ಬಾಧಿತ ರೋಗಿಗಳು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಉಪಯೋಗ ತೆಗೆದುಕೊಳ್ಳಲು ತಿಳಿಸಿದರು. ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ, ಹೊಸ ಕಟ್ಟಡ ಕೊಠಡಿ ಸಂಖ್ಯೆ:105ರಲ್ಲಿ ಪ್ರತಿನಿತ್ಯ ಮೆದುಳು ಆರೋಗ್ಯ ಕ್ಲಿನಿಕ್‌ಗೆ ಭೇಟಿ ನೀಡಿ ಚಿಕಿತ್ಸೆ ಮನೋಸಾಮಾಜಿಕ ಬೆಂಬಲ ಫಿಜಿಯೋಥೆರಪಿ ಹಾಗೂ ಸ್ಪೀಚ್ ಥೆರಪಿ ಸೌಲಭ್ಯವನ್ನು ಪಡೆದು ಪಾರ್ಶ್ವವಾಯುವಿನಿಂದ ಗುಣಮುಖವಾಗಲು ತಿಳಿಸಿದರು ಹಾಗೂ ನಿಮಾನ್ಸ್ನಿಂದ ನುರಿತ ತಜ್ಞ ವೈದ್ಯರಿಂದ ಟೆಲಿ-ನ್ಯೂರೊಲಾಜಿ ಮೂಲಕ ಸೇವೆಯನ್ನು ಪಡೆದುಕೊಳ್ಳಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಅರುಣಕುಮಾರ ಅಸಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರು, ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇವರು ಮಾತನಾಡಿ ವಿಶ್ವ ಪಾರ್ಶ್ವವಾಯು ದಿನ-2025?ರ ಘೋಷವಾಕ್ಯ ಪ್ರತಿ ನಿಮಿಷವು ಮುಖ್ಯ ಎಂಬುದರ ಕುರಿತು ಮಾತನಾಡಿ ರೋಗಿಗಳಿಗೆ ಒಂದು ನೀಮಿಷವು ಸಹ ಬಂಗಾರದಂತಹ ಸಮಯವಾಗಿದ್ದು ಸಮಯವನ್ನು ಕಳೆಯದೆ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸುವುದು ಅತೀ ಅವಶ್ಯಕ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ವಾಸಕೋಶ ತಜ್ಞರು ಡಾ.ಇರ್ಫಾನ್ ಎಮ್ ಮಾತನಾಡಿ ಸಮಾಜದಲ್ಲಿ ಮೂಡ ನಂಬಿಕೆಗಳಿಂದ ಆಚರಣೆಯಲ್ಲಿರುವ ವಿವಿಧ ಚಿಕಿತ್ಸೆಗೆ ಒಳಗಾಗಿ ರೋಗವನ್ನು ಹೆಚ್ಚು ಮಾಡಿಕೊಳ್ಳದೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡು ಪಾರ್ಶ್ವವಾಯುವಿನಿಂದ ಮುಕ್ತರಾಗಲು ತಿಳಿಸಿದರು.
ಎನ್.ಸಿ.ಡಿ ವಿಭಾಗದ ವೈದ್ಯಕೀಯ ಅಧಿಕಾರಿಗಳು, ಡಾ.ಅರ್ಪಿತಾ ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇವರು ಮಾತನಾಡಿ ಗ್ರಾಮೀಣ ರೋಗಿಗಳು ಪ್ರಥಮ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಮಾಡಿ ಎಂದು ತಿಳಿಸಿ ಪಾಶ್ವವಾಯು ಕುರಿತು ಎಚ್ಚರಿಕೆಯಿಂದಿರಲು ತಿಳಿಸಿದರು.
ರೋಣದ ಜಿಲ್ಲಾ ಸಂಯೋಜಕರು ಕಭೀ ಪ್ರವೀಣ ಎಸ್ ನಿರೂಪಿಸಿದರು, ಶೂಶ್ರೂಷಕರು ಕಭಿ ಕಾರ್ಯಕ್ರಮ ರವಿ ನಂದ್ಯಾಳ ಸ್ವಾಗತಿಸಿದರು, ಕ್ಲಿನಿಕಲ್ ಸೈಕೋಲಾಜಿಸ್ಟ್ ರೇವಣಸಿದ್ದಪ್ಪ ವಂದನಾರ್ಪಣೆ ನೆರವೇರಿಸಿದರು.
ಈ ಸಂದರ್ಬಧದಲ್ಲಿ ಎನ್.ಟಿ.ಸಿ.ಪಿ ಕಾರ್ಯಕ್ರಮದ ಆಪ್ತ ಸಮಾಲೋಚಕರಾದ ಶ್ರೀಮತಿ ರೇಷ್ಮಾ ನಧಾಫ್. ಎನ್.ಸಿ.ಡಿ ವಿಭಾಗದ ಹಾಗೂ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP